ತಿಮರೋಡಿ ಬಗ್ಗೆ ಬೆಚ್ಚಿಬೀಳುವ ಮಾಹಿತಿ ಹೊರಹಾಕಿದ ಪವರ್ ಟಿವಿ, ಸೌಜನ್ಯ ಕೇ.ಸ್.ಗೆ ಮತ್ತೊಂದು ಟ್ವಿಸ್ಟ್

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸೌಜನ್ಯ ಹೆತ್ತವರು ಆರೋಪಿಸಿದ್ದ ಧರ್ಮಸ್ಥಳದ ಧೀರಜ್ ಜೈನ್, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅಚ್ಚರಿ ಮೂಡಿಸಿದರು. ಈ ಮೂವರ ಜೊತೆ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಭಯ ಚಂದ್ರ ಜೈನ್ ಉಪಸ್ಥಿತರಿದ್ದರು.
ಸೌಜನ್ಯ ಕುಟುಂಬದವರು ಮತ್ತು ಹೋರಾಟಗಾರರು
ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸ್ ನಲ್ಲಿ ಈ ಮೂವರ ವಿರುದ್ದ ಆರೋಪ ಮಾಡಿದ್ದರು. ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಪ ಹೊತ್ತಿದ್ದ ಧೀರಜ್ ಜೈನ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರು ನಮ್ಮ ವಿರುದ್ದ ಆರೋಪ ಮಾಡಿದ್ದರು. ದುಡ್ಡು ಮಾಡುವ ಏಕೈಕ ಉದ್ದೇಶದಿಂದ ತಿಮರೋಡಿ ಈ ಆರೋಪ ಮಾಡಿದ್ದರು.
ನಾವು ತನಿಖೆಗೆ ಹಾಜರಾದರೂ ಸುಖಾಸುಮ್ಮನೆ ಆರೋಪ ಮಾಡಲಾಗಿತ್ತು. ಹೀಗಾಗಿ ನಾವು ಕಾನತ್ತೂರು ದೈವದ ಮೊರೆ ಹೋಗಿ ಆಣೆಗೆ ಕರೆದಿದ್ದೆವು. ಆದರೆ ಆವಾಗ ಅವರು ತಪ್ಪಿಸಿದ್ದರು. 2014ರಲ್ಲಿ ಜುಲೈ ಹಾಗೂ ಆಗಸ್ಟ್ ನಲ್ಲಿ ಸಿಬಿಐ ನಮ್ಮನ್ನು ಎರಡೆರೆಡು ಬಾರಿ ಬೆಳ್ತಂಗಡಿ ಐಬಿಯಲ್ಲಿ ತನಿಖೆ ಮಾಡಿತ್ತು. ಚೆನ್ನೈ, ಬೆಂಗಳೂರಿಗೂ ಕರೆಸಿ ನಮ್ಮನ್ನು ತನಿಖೆ ಮಾಡಿದ್ದಾರೆ.
ನಮ್ಮ ರಕ್ತ ಪರೀಕ್ಷೆ, ಡಿಎನ್ಎ ಪರೀಕ್ಷೆ, ಮಂಪರು ಪರೀಕ್ಷೆ ಸಿಬಿಐ ಮಾಡಿದೆ. ಮೊಬೈಲ್ ಲೊಕೇಶನ್ ಟ್ರೇಸ್, ಸುಳ್ಳು ಪತ್ತೆಯ ಪಾಲಿಗ್ರಾಫ್ ಟ್ವಿಸ್ಟ್ ಜೊತೆ ಅನೇಕ ವೈಜ್ಞಾನಿಕ ಪರೀಕ್ಷೆ ಮಾಡಲಾಗಿದೆ. ನಮ್ಮ ವಿರುದ್ದ ಯಾವುದೇ ಸಾಕ್ಷ್ಯ, ಆರೋಪ ಇಲ್ಲದ ಕಾರಣ ಆರೋಪಿ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ತಂದೆಯ ಮನವಿ ರದ್ದು ಮಾಡಿತು. ಇನ್ನು ನಿಶ್ಚಲ್ ಜೈನ್ ಅಪರಾಧಿ ಎಂದು ಎಲ್ಲೆಡೆ ಹೇಳಿಕೊಂಡು ಬರುತ್ತಿರುವ ಹಾಗೂ ಧರ್ಮಸ್ಥಳದ ಹೆಸರನ್ನು ಕೆಡಿಸುತ್ತಿರುವ ಮಹೇಶ್ ಶೆಟ್ಟಿಯೇ ನಿಜವಾದ ಮೊದಲನೆಯ ಅಪರಾಧಿ ಎಂದು ಹೇಳಿದ್ದಾರೆ.
ಈ ಹಿಂದೆ ತಿಮರೋಡಿ ಅವರು ಹೋರಾಟವನ್ನು ನಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಸೌಜನ್ಯಳಂತಹ ಹೆಣ್ಣು ಮಗಳಿಗೆ ನ್ಯಾಯ ಸಿಗುವ ಉದ್ದೇಶದಿಂದ ಮಾಡುತ್ತಿದ್ದೇವೆ. ಧರ್ಮ ಸತ್ಯದ ನೆಲದಲ್ಲಿ ಇಂದು ಅನ್ಯಾಯ ನಡೆಯುತ್ತಿದೆ. ಅಧರ್ಮ ತಾಂಡವಾಡುತ್ತಿದೆ. ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆ ಮೂಲಕ ಅಧರ್ಮ ಅಳಿಯಬೇಕು ಮತ್ತು ಧರ್ಮ ಉಳಿಯಬೇಕು ಎಂದವರೇ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದನ್ನು ಸಹಿಸಲಸಾಧ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.