50 ನೇ ವಯಸ್ಸಿನಲ್ಲಿ ಮುದ್ದಾದ ಮಗು ಪಡೆದ ಪ್ರಭುದೇವ, ಮೊದಲ ಹೆಂಡತಿ ಕಣ್ಣೀರು
ಡ್ಯಾನ್ಸ್ ಮಾಸ್ಟರ್ ಹಾಗೂ ನಟ ಪ್ರಭುದೇವ ಇದೀಗ ತಂದೆಯಾಗಿದ್ದಾರೆ. ಪ್ರಭುದೇವ 2ನೇ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 50ನೇ ವಯಸ್ಸಿನಲ್ಲಿ ನಟ ಪ್ರಭುದೇವ ತಂದೆಯಾಗಿದ್ದಾರೆ. ಪ್ರಭುದೇವ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದು, ಈ ಜೋಡಿಗೆ ಮೂವರು ಪುತ್ರರಿದ್ದಾರೆ. ಮೊದಲ ಪತ್ನಿಯಿಂದ ದೂರವಾದ ಬಳಿಕ ನಟ ಪ್ರಭುದೇವ ಮುಂಬೈ ಮೂಲದ ಹಿಮಾನಿ ಸಿಂಗ್ ಅವರನ್ನು ಮದುವೆಯಾದ್ರು.
ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರಂತೆ. ಮದುವೆಯಾಗಿ ಮೂರು ವರ್ಷಗಳ ನಂತರ ಹಿಮಾನಿ ಸಿಂಗ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಭುದೇವ ಕುಟುಂಬದಲ್ಲಿ ಜನಿಸಿದ ಮೊದಲ ಹೆಣ್ಣು ಮಗು ಇದಾಗಿದ್ದು, ಇಡೀ ಕುಟುಂಬ ಸಂತಸದಲ್ಲಿದೆ.
ಈ ಬಗ್ಗೆ ಪ್ರಭುದೇವ ಆಗಲಿ ಕುಟುಂಬಸ್ಥರಾಗಿ ಮಾತಾಡಿಲ್ಲ. ಫ್ಯಾಮಿಲಿ ಹೆಣ್ಣು ಮಗುವನ್ನು ಬರಮಾಡಿಕೊಂಡ ಖುಷಿಯಲ್ಲಿದ್ದಾರೆ. ತಮಿಳು ನಟ ಪ್ರಭುದೇವ ಅವರು ಇತ್ತೀಚೆಗೆ ಅವರ ಎರಡನೇ ಪತ್ನಿ ಜೊತೆಗೆ ತಿರುಪತಿಯಲ್ಲಿ ಮೊದಲಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. 2011ರಲ್ಲಿ ಮೊದಲ ಪತ್ನಿ ರಾಮಲತಾಗೆ ಡಿವೋರ್ಸ್ ಕೊಟ್ಟ ನಂತರ ನಟ ಬಹಳಷ್ಟು ವಿವಾದಗಳನ್ನು ಎದುರಿಸಿದ್ದರು.
ನಂತರ ನಟ ಹಿಮಾನಿ ಸಿಂಗ್ ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಪ್ರಭುದೇವ ಅವರ ಎರಡನೇ ಮದುವೆ ಬಗ್ಗೆ ಅವರ ಅಣ್ಣನೇ ಮೊದಲ ಬಾರಿಗೆ ಮಾಹಿತಿ ಕೊಟ್ಟಿದ್ದರು. ರಾಜಾ ಸುಂದರಂ ಅವರು ತಮ್ಮನ ಎರಡನೇ ಮದುವೆ ಬಗ್ಗೆ ಮಾತನಾಡಿ ಅದನ್ನು ದೃಢಪಡಿಸಿದ್ದರು. ಸಂದರ್ಶನವೊಂದರಲ್ಲಿ ಈ ವಿಚಾರ ರಿವೀಲ್ ಮಾಡಿದ್ದರು.
ಪ್ರಭುದೇವ ಅವರು ಕೊನೆಯ ಬಾರಿಗೆ ಭಗೀರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಆಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಆದರೆ ಸಿನಿಮಾ ನಿರೀಕ್ಷಿಸಿದ ಮಟ್ಟಿಗೆ ಸಕ್ಸಸ್ ಆಗಲಿಲ್ಲ. ಆದರೆ ನಟ ತನ್ನ ಸಿನಿಮಾ ಕೆರಿಯರ್ನಲ್ಲಿಯೇ ಮೊದಲ ಬಾರಿಗೆ ಮೂವಿಗಾಗಿ ತಲೆ ಬೋಳಿಸಿಕೊಂಡರು. ಇದೀಗ ನಟ 50ನೇ ವಯಸ್ಸಿನಲ್ಲಿ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ.
ಈಗಾಲೇ ನಟನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಭುದೇವ ಜೊತೆಯೇ ಗಂಡು ಮಕ್ಕಳು ಬೆಳೆಯುತ್ತಿದ್ದಾರೆ ಎನ್ನಲಾಗ್ತಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.