ಕನಾ೯ಟಕಕ್ಕೆ ಹಣ ಬತಿ೯ರೋದೆ ಉತ್ತರದಿಂದ ಎಂದು ಹೇಳಿದ ಪ್ರತಾಪ್ ಸಿಂಹ ಚಳಿ ಬಿಡಿಸಿದ ರಂಗಣ್ಣ

 | 
B

ತೆರಿಗೆ ಹಂಚಿಕೆ ವಿಚಾರವಾಗಿ ಉತ್ತರ ಹಾಗೂ ದಕ್ಷಿಣದ ರಾಜ್ಯಗಳ ನಡುವೆ ಜಟಾಪಟಿ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗಿದೆ. ಇದೇ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿರುವ ಬಿಜೆಪಿ ಸಂಸದ ಪ್ರತಾಪ ಸಿಂಹ ದಕ್ಷಿಣ ರಾಜ್ಯಗಳ ಬೆಳವಣಿಗೆಗೆ ಉತ್ತರ ರಾಜ್ಯಗಳ ಖನಿಜ ಸಂಪತ್ತು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ದಕ್ಷಿಣ ಭಾರತ ಮತ್ತು ಬೆಂಗಳೂರಿನ ಬೆಳವಣಿಗೆಗೆ ಉತ್ತರ ಭಾರತ ಕಾರಣವಾಗಿದೆ. ಇಲ್ಲಿನ ಕೈಗಾರಿಕೀಕರಣವು ಖನಿಜ ಸಮೃದ್ಧ ಉತ್ತರ ಭಾರತದ ರಾಜ್ಯಗಳಿಂದ ಸುಗಮವಾಗಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 1950 ರ ದಶಕದಲ್ಲಿ ಜವಾಹರಲಾಲ್ ನೆಹರು ಅವರ ಅವಧಿಯಲ್ಲಿ ಸರಕು ಸಮೀಕರಣದ ಪರಿಕಲ್ಪನೆಯನ್ನು ಅಳವಡಿಸಲಾಯಿತು.

 ಈ ಸರಕು ಸಾಗಣೆ ವೆಚ್ಚವನ್ನು ಕೇಂದ್ರದಿಂದ ಭರಿಸಲಾಯಿತು. ಈ ಮೂಲಕ ಒಂದು ರಾಜ್ಯದಲ್ಲಿ ಲಭ್ಯವಿರುವ ಖನಿಜಗಳು ದೇಶದಾದ್ಯಂತ ಲಭ್ಯವಾಗುವಂತೆ ಖಾತ್ರಿಪಡಿಸಲಾಯಿತು. ಕೈಗಾರಿಕೆಗಳನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.ಬೆಂಗಳೂರು ಐಟಿ ಅಥವಾ ಟೆಕ್ ಹಬ್ ಆಗಿ ಬೆಳೆಯಲು ಕೇಂದ್ರ ಸರ್ಕಾರ ಕಾರಣವಾಗಿದೆ. ಎಚ್‌ಎಎಲ್, ಬಿಇಎಲ್ ಮುಂತಾದ ಸಾರ್ವಜನಿಕ ವಲಯದ ಘಟಕಗಳನ್ನು ಸ್ಥಾಪಿಸಿದ್ದರಿಂದ ಕೈಗಾರಿಕಾ ಅಭಿವೃದ್ಧಿಯಾಯಿತು. 
 
ಇದು ಪರಿಸರ ವ್ಯವಸ್ಥೆಯನ್ನು ರಚಿಸಲು ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ. ಇನ್ನು ಈ ಕುರಿತಾಗಿ ವಿರೋಧ ವ್ಯಕ್ತ ಪಡಿಸಿರುವ ಪಬ್ಲಿಕ್ ಟಿವಿ ರಂಗಣ್ಣ ಅವರು ಬನ್ನಿ ನಮ್ಮ ಸ್ಟುಡಿಯೋಗೆ ಕೂತು ಮಾತನಾಡೋಣ. ನನಗೂ ಸ್ವಲ್ಪ ಎಕನಾಮಿಕ್ಸ್ ಗೊತ್ತು. ನಾವು ತೆರಿಗೆ ಕಟ್ಟುತ್ತಿದ್ದೇವೆ. ಭಿಕ್ಷೆ ಬೇಡಿ ತಿನ್ನುತ್ತಿಲ್ಲ ಎಂದು ಓಪನ್ ಚಾಲೆಂಜ್ ಮಾಡಿದ್ದಾರೆ. ಇನ್ನು ಈ ಕುರಿತಾಗಿ ಪ್ರತಾಪ ಸಿಂಹ ಅವರು ಯಾವುದೇ ಹೇಳಿಕೆ ನೀಡಿಲ್ಲ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.