ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಅವರಿಗೆ ಡೋಂಗಿ ಅಂದಿದ್ದು ಸರಿನಾ, ರೊಚ್ಚಿಗೆದ್ದ ಪ್ರಥಮ್

ಅದ್ಯಾಕೋ ಗೊತ್ತಿಲ್ಲ ಡ್ರೋನ್ ಪ್ರತಾಪ್ ಟೈಮ್ ಸರಿ ಇದ್ದಂತಿಲ್ಲ. ಈಗಾಗಲೇ ಅವರು ಸಾಕಷ್ಟು ಚರ್ಚೆಗೆ ಒಳಗಾದವರು. ತಾವೇ ಡ್ರೋನ್ ತಯಾರಿಸಿದ್ದಾಗಿ ಅವರು ಹೇಳಿದ್ದರು. ಇದನ್ನು ಅನೇಕರು ನಂಬಿದ್ದರು. ಅವರಿಗೆ ಸಾಕಷ್ಟು ಪ್ರಚಾರ ನೀಡಲಾಯಿತು. ಜಗ್ಗೇಶ್ ಸೇರಿ ಅನೇಕರು ಡ್ರೋನ್ ಪ್ರತಾಪ್ ಅವರನ್ನು ಹೊಗಳಿದರು. ಯುವ ವಿಜ್ಞಾನಿ ಎಂದೆಲ್ಲ ಅವರನ್ನು ಕರೆಯಲಾಯಿತು.
ಆದರೆ, ಅವರು ಹೇಳಿದ್ದು ಸುಳ್ಳು ಎಂಬುದು ಆ ಬಳಿಕ ಗೊತ್ತಾಯಿತು.ಈ ಹಿಂದೆಯೂ ಕೂಡ ಪ್ರತಾಪ್ ಅವರು ಸಾಕಷ್ಟು ಚರ್ಚೆಗೆ ಒಳಗಾದವರು. ಈಗ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಲ್ಲಿಯೂ ಅವರನ್ನು ಡೋಂಗಿ ಎಂದು ಕರೆಯಲಾಗಿದೆ.
ಡ್ರೋನ್ ಪ್ರತಾಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ಟ್ರೋಲ್ಗೆ ಒಳಗಾಗುತ್ತಾರೆ. ಈಗ ಅವರು ತಮ್ಮದೇ ಆಫೀಸ್ ಆರಂಭಿಸಿದ್ದಾರೆ.
ಔಷಧ ಸಿಂಪಡನೆಗೆ ಡ್ರೋನ್ನ ಅವರು ಬಾಡಿಗೆ ನೀಡುತ್ತಾರೆ. ಈ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆಗೆ ಬಂದಿದೆ. ತುಕಾಲಿ ಸಂತೋಷ್ ಅವರು ಪ್ರತಾಪ್ನ ಕೆಣಕಿದ್ದಾರೆ. ಪ್ರತಾಪ್ ಅವರ ಡ್ರೋನ್ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಆಡಿಕೊಂಡಿದ್ದಾರೆ. ಡ್ರೋನ್ನ ಇವರೇ ತಯಾರಿಸುವುದಲ್ಲ. ಬೇರೆ ಕಡೆಯಿಂದ ತಂದು ಇವರು ಬಾಡಿಗೆ ಕೊಡೋದು ಅಷ್ಟೇ ಎಂದು ಹೇಳಿಕೊಂಡು ನಕ್ಕರು ತುಕಾಲಿ ಸಂತೋಷ್.
ಇದನ್ನು ಕೇಳಿ ಪ್ರತಾಪ್ಗೆ ಸಿಟ್ಟೇ ಬಂತು. ಬಿಸ್ನೆಸ್ ಬಗ್ಗೆ ಮಾತನಾಡೋದಾದರೆ ಕಚೇರಿಗೆ ಬನ್ನಿ, ಇಲ್ಲಿ ಆ ಬಗ್ಗೆ ಮಾತನಾಡಬೇಡಿ ಎಂದು ಸಿಟ್ಟಲ್ಲೇ ಹೇಳಿದರು.
ಇದು ಜೆನ್ಯೂನ್ ಕ್ವಶ್ಚನ್ ಆಗಿತ್ತು ಎಂದು ಸ್ಪಷ್ಟನೆ ನೀಡುವ ಕೆಲಸ ಮಾಡಿದರು ಸ್ನೇಹಿತ್. ಆಗ ಪ್ರತಾಪ್ ಅವರು ಸಿಟ್ಟಿನಿಂದಲೇ ಉತ್ತರಿಸಿದರು. ಈ ವೇಳೆ ನೀನು ಡೋಂಗಿ ಎಂದು ಹೇಳಿದರು ಸ್ನೇಹಿತ್.
ಇದರಿಂದ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಜೋರಾಗಿದೆ. ಸದ್ಯ ಕಲರ್ಸ್ ಕನ್ನಡ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಇಂದಿನಿಂದ ಸಂಪೂರ್ಣ ಎಪಿಸೋಡ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಈ ರಿಯಾಲಿಟಿ ಶೋನ ನೋಡೋಕೆ ಅವಕಾಶ ಮಾಡಿಕೊಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.