ಪುಟ್ಟಕ್ಕನ ಮಕ್ಕಳು ಪಾತ್ರಧಾರಿ ಮತ್ತೆ ಬದಲಾವಣೆ, ವೀಕ್ಷಕರೆ ತೀರಾ ಬೇಸರ

 | 
Bs
ಕಿರುತೆರೆಯ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಪ್ರೇಕ್ಷಕರಿಗೆ ಒಂದಾದ ಮೇಲೊಂದು ಶಾಕ್‌ ಕೊಡುತ್ತಿದ್ದು, ವೀಕ್ಷಕರು ಧಾರಾವಾಹಿಯನ್ನೇ ನಿಲ್ಲಿಸಿ ಬಿಡಿ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ಪಾತ್ರ ಸ್ನೇಹ ಪಾತ್ರವನ್ನು ಅಂತ್ಯಗೊಳಿಸಿ, ಸ್ನೇಹ ಎನ್ನುವ ಹೆಸರಿನ ಹೊಸ ಪಾತ್ರವನ್ನೇ ಪರಿಚಯಿಸಲಾಗಿತ್ತು.
ಸರಿಸುಮಾರು ಮೂರು ವರ್ಷಗಳ ಕಾಲ ಸ್ನೇಹ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸಂಜನಾ ಬುರ್ಲಿ ಕಾರಣಾಂತರಗಳಿಂದ ಧಾರಾವಾಹಿ ಪಾತ್ರದಿಂದ ಹೊರಬಂದಿದ್ದರು. ಈ ವೇಳೆ ಪಾತ್ರದ ನಟಿಯನ್ನು ಬದಲಿಸುವ ಬದಲು ಸ್ನೇಹ ಪಾತ್ರವನ್ನೇ ಸಾಯಿಸಲಾಗಿತ್ತು. ಇದರಿಂದ ಅಭಿಮಾನಿಗಳಿಗೆ ತೀರಾ ನಿರಾಸೆಯಾಗಿದ್ದು, ಉತ್ತಮ ಕಥೆಯೊಂದಿಗೆ ಸಾಗುತ್ತಿದ್ದ ಧಾರಾವಾಹಿ ಹಳಿ ತಪ್ಪಿತು ಎಂದು ಅಂದೇ ಅನೇಕರು ಊಹಿಸಿದ್ದರು.
ಬಳಿಕ ಪುಟ್ಟಕ್ಕನ ಮಕ್ಕಳು ಕಥೆ ಬದಲಾಗಿದ್ದು, ಸ್ನೇಹ ಹೃದಯವನ್ನು ಮತ್ತೊಂದು ಸ್ನೇಹಗೆ ನೀಡಿ ಆಕೆಯನ್ನು ಪರಿಚಯಿಸಲಾಗಿತ್ತು. ಆಕೆ ಕೂಡ ಪುಟ್ಟಕ್ಕನ ಮನೆಯಲ್ಲೇ ಇರುವಂತೆ ಕಥೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಹೊಸದಾಗಿ ಬಂದ ಸ್ನೇಹ ಪಾತ್ರವನ್ನು ಜನ ತಕ್ಕ ಮಟ್ಟಿಗೆ ಒಪ್ಪಿಕೊಂಡಿದ್ದು, ಇನ್ನೇನು ಕಥೆ ಇಂಟ್ರಸ್ಟಿಂಗ್‌ ಎನ್ನುವ ಸಮಯದಲ್ಲಿ ಮತ್ತೊಂದು ಬದಲಾವಣೆಯನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ ಮಾಡಿದೆ.
ಈವರೆಗೂ ಅಪೂರ್ವ ನಾಗರಾಜ್ ಹೊಸ ಸ್ನೇಹಾ ಪಾತ್ರವನ್ನು ನಿರ್ವಹಿಸುತ್ತಿದ್ದರು. ಇದೀಗ ಮತ್ತೆ ಈ ಸ್ನೇಹ ಪಾತ್ರಧಾರಿಯನ್ನು ಬದಲಾಯಿಸಲಾಗಿದೆ. ಮೊದಲು ಕಲರ್ಸ್ ಕನ್ನಡದ ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಮಿಣಿ ಪಾತ್ರ ಮಾಡುತ್ತಿದ್ದ ನಟಿ ಇದೀಗ ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಸ್ನೇಹ ಪಾತ್ರಧಾರಿಯನ್ನು ಪರಿಚಯಿಸುವ ಪ್ರೋಮೋ ವೈರಲ್‌ ಆಗುತ್ತಿದ್ದು, ವೀಕ್ಷಕರು ಕಮೆಂಟ್‌ ಮೂಲಕ ಧಾರಾವಾಹಿ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಸ್ನೇಹ ಪಾತ್ರಧಾರಿ ಬದಲಿಸಿ, ಇಲ್ಲಾ ಧಾರಾವಾಹಿ ನಿಲ್ಲಿಸಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.