ದಿನ ಬೆಳಗ್ಗೆ ಮನೆಯಲ್ಲೇ ಜಿಮ್ ವರ್ಕೌಟ್ ಮಾಡುತ್ತಿರುವ ರಚಿತಾ ರಾಮ್, ಯುವಕರ ಮೈಯಲ್ಲಿ ಬೆವರಿಳಿಸುವ ದೃ.ಶ್ಯ

 | 
H

ಸ್ಯಾಂಡಲ್‍ವುಡ್ ಡಿಂಪಲ್ ಬೆಡಗಿ ರಚಿತಾ ರಾಮ್ ಬರೀ 25 ದಿನದಲ್ಲಿ ಬರೋಬ್ಬರಿ 7 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇತ್ತೀಚೆಗೆ ತೆರೆ ಕಂಡ ಕ್ರಾಂತಿ ಚಿತ್ರದ ಸಮಯದಲ್ಲಿ ರಚಿತಾ 65 ಕೆಜಿ ಇದ್ದರು. ಆದರೆ ಈಗ ರಚಿತಾ 25 ದಿನದಲ್ಲಿ ಬರೋಬ್ಬರಿ 7 ಕೆಜಿ ತೂಕ ಇಳಿಸಿಕೊಂಡು 58 ಕೆಜಿಗೆ ಇಳಿದಿದ್ದಾರೆ. ತೂಕ ಇಳಿಸಿಕೊಂಡ ನಂತರ ರಚಿತಾ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾರೆ.

ರಚಿತಾ ರಾಮ್ ತೂಕ ಕಡಿಮೆ ಮಾಡಿಕೊಂಡಿದ್ದು, ತಾವು ಹೇಗೆ ಕಾಣುತ್ತಿದ್ದಾರೆ ಎಂದು ನೋಡಲು ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಫೋಟೋಶೂಟ್‍ನಲ್ಲಿ ರಚಿತಾ ಗುಲಾಬಿ ಬಣ್ಣದ ಲೆಹೆಂಗಾ ಧರಿಸಿ ಅದಕ್ಕೆ ಕ್ರಾಪ್ ಟಾಪ್ ತೊಟ್ಟು ಅದರಲ್ಲಿ ಮಿಂಚಿದ್ದಾರೆ. ಸದ್ಯ ರಚಿತಾ ತಮ್ಮ ಫೋಟೋಶೂಟ್‍ನ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ನಾನು ಮೊದಲಿನಿಂದಲೂ ಹೆಚ್ಚು ದಪ್ಪಗಿರಲಿಲ್ಲ. ಸಪೂರವಾಗಿದ್ದಾಗಲೇ ಸ್ಯಾಂಡಲ್‍ವುಡ್‍ಗೆ ನಾಯಕಿಯಾಗಿ ಬಂದೆ. ಕಳೆದ ಎರಡು ವರ್ಷದಿಂದ ನಾನು ಹೀಗೆ ಇದ್ದೆ. ನಂತರ ನಾನು ದಪ್ಪಗಿದ್ದರೆ ಹೇಗೆ ಕಾಣಬಹುದು ಎಂದು ಎನಿಸಿತ್ತು. ಹಾಗಾಗಿ ನಾನು ವರ್ಕೌಟ್ ಕಡಿಮೆ ಮಾಡಿ, ಊಟ ಜಾಸ್ತಿ ಮಾಡುತ್ತಿದೆ. ಆಗ ನಾನು ಛಬ್ಬಿ ಛಬ್ಬಿಯಾಗಿ ಕಾಣಿಸುತ್ತಿದ್ದೆ ಎಂದು ರಚಿತಾ ರಾಮ್ ತಿಳಿಸಿದ್ದಾರೆ.

ಅಯೋಗ್ಯ ಹಾಗೂ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಾನು ದಪ್ಪಗಿದ್ದೆ. ಆ ಚಿತ್ರಗಳಲ್ಲಿ ನಾನು ಹಾಗೆಯೇ ಅಭಿನಯಿಸಿದ್ದೆ. ಸದ್ಯ ಈಗ ನಾನು ದಪ್ಪ ಇರುವುದು ಸಾಕು ಎಂದು ಎನಿಸಿತು. ಹಾಗಾಗಿ ನಾನು ನನ್ನ ತೂಕವನ್ನು ಕಡಿಮೆ ಮಾಡಿಕೊಂಡೆ. ಯಾವುದೇ ಚಿತ್ರಕ್ಕಾಗಿ ನಾನು ನನ್ನ ತೂಕವನ್ನು ಕಡಿಮೆ ಮಾಡಿಕೊಂಡಿಲ್ಲ. ಸಣ್ಣ ಆಗಬೇಕೆಂದು ಎನಿಸಿತು, ಹಾಗಾಗಿ ತೂಕ ಕಡಿಮೆ ಮಾಡಿಕೊಂಡೆ ಎಂದು ರಚಿತಾ ಹೇಳಿದ್ದಾರೆ.

ಶ್ರೀನಿವಾಸ್, ರಚಿತಾ ರಾಮ್ ಅವರ ಜಿಮ್ ಟ್ರೈನರ್ ಆಗಿದ್ದು, ಬೆಂಗಳೂರಿನ ಮಸಲ್ 360 ಜಿಮ್‍ನಲ್ಲಿ ಹಲವು ಸೆಲೆಬ್ರಿಟಿಗಳಿಗೆ ಫಿಟ್ನೆಸ್ ಟ್ರೈನರ್ ಆಗಿದ್ದಾರೆ. ಶ್ರೀನಿವಾಸ್ ಅವರು ರಕ್ಷಿತ್ ಶೆಟ್ಟಿ, ಧನಂಜಯ್ ಸೇರಿದಂತೆ ಹಲವು ಸ್ಯಾಂಡಲ್‍ವುಡ್ ಕಲಾವಿದರಿಗೆ ಫಿಟ್ನೆಸ್ ಟ್ರೈನರ್ ಆಗಿದ್ದಾರೆ. ಸದ್ಯ ಶ್ರೀನಿವಾಸ್ ಅವರಿಂದ ಟ್ರೈನಿಂಗ್ ಪಡೆದ ರಚಿತಾ ಬರೀ 25 ದಿನದಲ್ಲಿ 7ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಜಿಮ್ ಅಲ್ಲಿ ಅವರ ವರ್ಕೌಟ್ ನೋಡಿ ಅಭಿಮಾನಿಗಳು ದಂಗಾಗಿ ಹೋಗಿದ್ದಾರೆ.