ಗರ್ಭಿಣಿಯಾಗಿದ್ದಾಗ ಬಾತ್ ರೂಮ್ ಅಲ್ಲಿ ಎದೆಹಾಲು ತೆಗೆದಿದ್ದ ರಾಧಿಕಾ, ಸತ್ಯ ಹೇಳಿಕೊಂಡ ನಟಿ
Feb 22, 2025, 07:56 IST
|

ವಿವಾದಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ವಾಶ್ ರೂಂನಲ್ಲಿರುವ ಫೋಟೋ ಹಂಚಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ 78ನೇ ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಾಧಿಕಾ ಆಪ್ಟೆ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿನ ವಾಶ್ ರೂಂನಿಂದ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ ತಮ್ಮ ಹೇಳಿಕೆಯಿಂದ ಟೀಕೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಫೋಟೋದಲ್ಲಿ ನಟಿ ರಾಧಿಕಾ ಆಪ್ಟೆ ಒಂದು ಕೈಯಲ್ಲಿ ಶ್ಯಾಂಪೇನ್ ಗ್ಲಾಸ್ ಹಿಡಿದಿದ್ದರೆ, ಮತ್ತೊಂದು ಕೈಯಲ್ಲಿ ತಮ್ಮ ಸ್ತನದಿಂದ ಎದೆಹಾಲು ಪಂಪ್ ಮಾಡುತ್ತಿದ್ದಾರೆ. ಈ ಫೋಟೊ ಹಂಚಿಕೊಂಡು ಇದಕ್ಕೆ ವಿವರಣೆಯೂ ನೀಡಿದ್ದಾರೆ ರಾಧಿಕಾ. ಇದು ನನ್ನ BAFTAsನ ರಿಯಾಲಿಟಿ ಎಂದು ನಗುವ ಎಮೋಜಿ ಹಾಕಿದ್ದಾರೆ.ಬ್ರಿಟಿಷ್ ಅಕಾಡೆಮಿ ಫಿಲ್ಮ್ ಅವಾರ್ಡ್ಸ್‌ಗೆ ಹಾಜರಾಗಲು ನನಗೆ ಸಾಧ್ಯವಾಗಿಸಿದ್ದಕ್ಕಾಗಿ ನಾನು ನತಾಶಾ ಅವರಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ.

ಅಷ್ಟಕ್ಕೂ ನತಾಶಾ ನನ್ನೊಂದಿಗೆ ವಾಶ್‌ರೂಮ್‌ಗೆ ಬಂದಿದ್ದಲ್ಲದೆ, ನನಗಾಗಿ ಶಾಂಪೇನ್ ತಂದಳು. ಹೊಸದಾಗಿ ತಾಯಿಯಾಗುವುದು ಮತ್ತು ಇಂತಹ ಒತ್ತಡದ ಕೆಲಸ ಮಾಡುವುದು ಕಷ್ಟ ಎಂದು ಅವರು ಬರೆದುಕೊಂಡಿದ್ದಾರೆ. ಈ ಮಟ್ಟದ ಕಾಳಜಿ ಮತ್ತು ಸೂಕ್ಷ್ಮತೆಯು ನಮ್ಮ ಚಿತ್ರರಂಗದಲ್ಲಿ ಅಪರೂಪ ಎಂದು ಹೇಳಿಕೊಂಡಿದ್ದಾರೆ.ಸದ್ಯ ಮಗುವಿನ ತಾಯಿ ಆಗಿರುವ ಕಾರಣ ಅವರು ಕೆಲಸದ ಒತ್ತಡದ ನಡುವೆ ಎದೆಹಾಲು ಕುಡಿಸಬೇಕು ಎನ್ನುವ ಉದ್ದೇಶದಿಂದ ವಾಶ್‌ರೂಂಗೆ ತೆರಳಿ, ಬಾಟಲ್‌ನಲ್ಲಿ ಎದೆಹಾಲು ಸಂಗ್ರಹಿಸಲು ಮುಂದಾಗಿದ್ದಾರೆ.
ಆದರೆ ಅವರು ಆಲ್ಕೋಹಾಲ್ ಇರುವ ಶಾಂಪೇನ್ ಸವಿಯುತ್ತಾ ಎದೆಹಾಲು ಸಂಗ್ರಹಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಫೋಟೊವನ್ನು ರಾಧಿಕಾ ಆಪ್ಟೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಈ ಫೋಟೋ ಬಗ್ಗೆ ಹಲವರು ಟೀಕೆಗಳನ್ನು ಮಾಡುತ್ತಿರುವ. ರಾಧಿಕಾ ಆಪ್ಟೆ ಅವರು ಆಲ್ಕೋಹಾಲ್ ಸೇವಿಸಿ, ಎದೆಹಾಲು ಹೀರಿದ್ದಾರೆ ಎಂಬ ವಿಚಾರವಾಗಿ ನೆಟ್ಟಿಗರು ಖಂಡನೆ ವ್ಯಕ್ತಪಡಿಸಿದ್ದಾರೆ. ನೀವು ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದೀರಿ. ಆಲ್ಕೋಹಾಲ್ ಕುಡಿದು ಮಗುವಿಗೆ ಹಾಲುಣಿಸುವುದು ಎಷ್ಟರಮಟ್ಟಿಗೆ ಸರಿ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.