ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕಿದ ರಾಘು, ಪತ್ನಿಯನ್ನು ಮರೆಯಲಾಗುತ್ತಿಲ್ಲ ನನ್ನ ಕೈಯಲ್ಲಿ

 | 
Hgg

ಸ್ಪಂದನಾ ಆಸೆ ಕನಸು ಎಲ್ಲವೂ ಮಗ ಶೌರ್ಯನಾಗಿದ್ದ. ಅವನನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಬೇಕೆನ್ನುವುದು ಸ್ಪಂದನಾ ಕನಸಾಗಿತ್ತು.
ಬೆಳಗಿನ ಜಾವದ ನಿದ್ದೆಯಲ್ಲಿ ಮೊದಲ ಬಾರಿಗೆ ಕನಸಿಗೆ ಬಂದಿದ್ದಳು. ಅದು ಕೂಡ ಮಗ ಶೌರ್ಯ ಹೋಮ್‌ವರ್ಕ್‌ ಮಾಡಿದ್ದಾನೋ ಇಲ್ಲವೋ ನೋಡಿ ಎಂದು ವಿಚಾರಿಸಿದ್ದಳು ಎಂದು ಸ್ಪಂದನಾ ಪತಿ ವಿಜಯ್‌ ರಾಘವೇಂದ್ರ ಹೇಳಿದರು.

ಇದೇ ಮೊದಲ ಬಾರಿಗೆ ಮೊನ್ನೆ ಸ್ಪಂದನಾ ನನ್ನ ಕನಸಿಗೆ ಬಂದಿದ್ದಳು. ಆಗಲೂ ಅದು ಕೂಡ ಮಗನ ಕಾಳಜಿ ಮಾಡುವ ಉದ್ದೇದಿಂದ ಬಂದಿದ್ದು, ಮಗನ ಹೋಮ್‌ವರ್ಕ್‌ ಬಗ್ಗೆ ಕೇಳಿದ್ದಳು. ಶಾಲೆಯ ಪೇರೆಂಟ್ಸ್‌ ಗ್ರೂಪ್‌ನಲ್ಲಿ ಹೋಮ್‌ವರ್ಕ್‌ ನೋಡಿ ಶೌರ್ಯ ಜಿಯೋಗ್ರಫಿ ಹೋಮ್‌ವರ್ಕ್‌ ಮಾಡಿದ್ದಾನೋ ಇಲ್ಲವೋ ನೋಡಿ ಎಂದಳು. ಆಗ ಬೆಳಗ್ಗೆ ಎದ್ದು ಶೌರ್ಯನಿಗೆ ಹೋಮ್‌ವರ್ಕ್‌ ಮಾಡಿದ ಬಗ್ಗೆ ವಿಚಾರಿಸಿದಾಗ ಎಲ್ಲವನ್ನೂ ಮಾಡಿದ್ದಾಗಿ ಹೇಳಿದನು. 

ಆಗ ಮಗ ಹೇಳಿದ ತ್ತರವನ್ನು ಯಾರಿಗೆ ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ ಎಂದು ಕನಸಿನ ಬಗ್ಗೆ ತಿಳಿಸಿದರು. ಸ್ಪಂದನಾಳಿಗೆ ತನ್ನ ಮಗನಿಗೆ ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಮಾಡುವುದು ಹಾಗೂ ನಟನೆ ಬಗ್ಗೆ ಕಲಿಸಲು ಪ್ರೇರಣೆ ಕೊಡುತ್ತಿದ್ದಳು. ಈಗ ಅವಳಿಲ್ಲದ ಮನೆಯಲ್ಲಿ ಮಗನ ಭವಿಷ್ಯವನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ನಾನು ಇಂದಿಗೂ ಸ್ಪಂದನಾಳೊಂದಿಗೆ ಜೀವಿಸುತ್ತಿದ್ದೇನೆ ಎಂಬ ಭಾವನೆಯಿಂದಲೇ ಬದುಕುತ್ತಿದ್ದೇನೆ.

ಪ್ರತಿದಿನ ನಾನು ಮತ್ತು ನನ್ನ ಮಗ ಬೆಳಗ್ಗೆ ಒಂದು ಸುತ್ತಿನ ಮಾತುಕತೆ ಮಾಡಿಕೊಂಡೇ ಮುಂದಿನ ಹೆಜ್ಜೆಯನ್ನು ಇಡುತ್ತಿದ್ದೇವೆ. ಶೌರ್ಯ ಈಗ ಅಮ್ಮ ಇಲ್ಲವೆಂಬ ಖಾಲಿತನವನ್ನು ಅನುಭವಿಸುತ್ತಿದ್ದಾನೆ. ಅವನನ್ನು ಕೆದಕಿ ಮಾತನಾಡಿಸುವವರೆಗೂ ಮಾತನಾಡುವುದಿಲ್ಲ. ಸ್ಪಂದನಾಳಂತೆಯೇ ಅವನಿಗೂ ಗಟ್ಟಿ ಮನಸ್ಸಿನ ಸ್ವಭಾವವಿದೆ ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.