FactCheck ಮೊಟ್ಟಮೊದಲ ಬಾರಿಗೆ ಸ್ವಂತ ಪತ್ನಿ‌ ಜೊತೆ ಕಾಣಿಸಿಕೊಂಡ ರಾಹುಲ್ ಗಾಂಧಿ

 | 
ತತ
ಆಗಾಗ ಕಾಂಗ್ರೆಸ್‌ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರ ಮದುವೆ ಬಗ್ಗೆ ಥ್ರೋಲ್‌, ಚರ್ಚೆ, ಗಾಸಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತವೆ. ಸದ್ಯ ರಾಹುಲ್‌ಗೆ ಮದುವೆಯಾಗಿದ್ದು, ಹೆಂಡತಿ ಹಾಗೂ ಮಕ್ಕಳೊಂದಿಗೆ ಪ್ರವಾಸ ಮಾಡುತ್ತಿದ್ದಾರೆ ಎಂಬ ಪೋಸ್ಟ್‌ ಹರಿದಾಡುತ್ತಿದೆ.
Vijendra Agarwal @bijendra_bjp4up ಎಂಬ ಟ್ವೀಟರ್‌ ಬಳಕೆದಾರು ರಾಹುಲ್‌ ಗಾಂಧಿ ಹಾಗೂ ಮಹಿಳೆ, ಮೂವರು ಮಕ್ಕಳು ಹೆಲಿಕಾಪ್ಟರ್‌ ಮುಂಭಾಗ ನಿಂತಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ರೌಲ್ ವಿನ್ಸಿ ಅವರ ಪತ್ನಿ ಜೋನಿಟಾ ವಿನ್ಸಿ, ಮಗ ನೋಹಕ್ ವಿನ್ಸಿ, ಮಗಳು ಮಿನಾಕ್ ವಿನ್ಸಿ ಅವರೊಂದಿಗೆ ಪ್ರವಾಸದಲ್ಲಿದ್ದಾರೆಯೇ. ಇದೇ ರಾಹುಲ್ ವಿನ್ಸಿ ಹಿಂದೂಗಳನ್ನು ಹಿಂಸಾತ್ಮಕ ಪ್ರಾಣಿಗಳು ಎಂದು ಕರೆದು ಇಡೀ ದೇಶಕ್ಕೆ ಸುಳ್ಳು ಹೇಳುತ್ತಾನೆ.
 ನಾನು ಯುವ ಬ್ರಹ್ಮಚಾರಿ ಎನ್ನುತ್ತಾನೆ. ಆದರೆ, ಅವನಿಗೆ ವಿದೇಶಿ ಮಹಿಳೆಯೊಂದಿಗೆ ಸಂಪರ್ಕವಿದೆ, ಅವನ ಹೆಂಡತಿಯ ತಂದೆ ಡ್ರಗ್ ಡೀಲರ್ ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇದೇ ರೀತಿ ಟ್ವೀಟರ್‌ನ ಹಲವು ಬಳಕೆದಾರರು ಈ ಹಿಂದೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಜಗ್‌ ತಂಡವು ಪರಿಶೀಲನೆ ನಡೆಸಿತು. ಮೊದಲಿಗೆ ಈ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಎಬಿಪಿ ನ್ಯೂಸ್‌ ರಾಜಸ್ಥಾನದ ವರದಿ ಸಿಕ್ಕಿದೆ. ಇದು 2022 ಡಿಸೆಂಬರ್‌ 8 ರಂದು ರಾಜಸ್ಥಾನದ ಬರಾನ್ ಎಂಬ ಊರಿನಲ್ಲಿ ರಾಹುಲ್‌ ಗಾಂಧಿಯವರು ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ನಡೆದ ಘಟನೆ.
 ಶಾಲಾ ವಿದ್ಯಾರ್ಥಿಗಳನ್ನು ಅವರ ಆಸೆಯಂತೆ ಹೆಲಿಕಾಪ್ಟರ್‌ನಲ್ಲಿ ರೈಡ್‌ ಕರೆದುಕೊಂಡು ಹೋಗಿದ್ದಾರೆ ಎಂದು ವರದಿ ಮಾಡಲಾಗಿದೆ. ನ್ಯೂಸ್‌ ತಕ್‌ ವೆಬ್‌ಸೈಟ್‌ ಕೂಡ ಈ ಬಗ್ಗೆ ಸುದ್ದಿ ಮಾಡಿದ್ದು, ವಿದ್ಯಾರ್ಥಿಯ ಹುಟ್ಟು ಹಬ್ಬದ ಕೊಡುಗೆಯಾಗಿ ಹೆಲಿಕಾಪ್ಟರ್‌ನಲ್ಲಿ ಒಂದು ರೈಡ್‌ ಕರೆದುಕೊಂಡು ಹೋಗಿದ್ದಾರೆ ಎಂದು ವರದಿ ಮಾಡಲಾಗಿದೆ. ಹಲವು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.