ರಜತ್ ಗೆ ಏಪ್ರಿಲ್ 9ರ ವರೆಗೆ ನ್ಯಾಯಾಂಗ ಬಂಧನ, ಲಾಯರ್ ಬಳಿ ರಜತ್ ಪತ್ನಿ ಕೂಗು
Mar 29, 2025, 09:00 IST
|

ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಲಾಗಿತ್ತು. ಇಂದು ಪೊಲೀಸರು ಇಬ್ಬರನ್ನೂ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.ಕೋರ್ಟ್ ಗೆ ಹಾಜರುಪಡಿಸಿ ಕಸ್ಟಡಿ ಕೇಳಲು ಪೊಲೀಸರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ಒಂದು ವಾರ ಪೊಲೀಸ್ ಕಸ್ಟಡಿಗೆ ಕೇಳಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಮಚ್ಚು ಇನ್ನು ಪತ್ತೆಯಾಗದ ಹಿನ್ನಲೆ ಕಸ್ಟಡಿಗೆ ಪಡೆದು ಪೊಲೀಸರ ತನಿಖೆ ನಡೆಯಲಿದೆ.
ಇದೇ ವೇಳೆ ವಿನಯ್ ಹಾಗೂ ರಜತ್ ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿದೆ. ಇಂದು ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ ಇದೆ ಎನ್ನಲಾಗಿದೆ. ಪತಿಗಾಗಿ ಜಡ್ಜ್ ನಿವಾಸದತ್ತ ರಜತ್ ಪತ್ನಿ ಧಾವಿಸಿದ್ದರು. ಕೋರಮಂಗಲ ಎನ್ ಜಿವಿಗೆ ಬಂದಿದ್ದ ರಜತ್ ಪತ್ನಿ ಪತಿ ಜೈಲಿಗೆ ಹೋಗೋದನ್ನ ಕಂಡು ಕಣ್ಣೀರು ಹಾಕಿದ್ದಾರೆ.ಬಿಗ್ ಬಾಸ್ ಸ್ಪರ್ಧಿ ರಜತ್ ಪತ್ನಿ ಕಣ್ಣೀರು ಹಾಕಿದ್ದಾರೆ. ಕೋರಮಂಗಲದ ನ್ಯಾಯಾಧೀಶರ ಮನೆಗೆ ಪೊಲೀಸರು ರಜತ್ ಅವರನ್ನು ಹಾಜರುಪಡಿಸಿದ್ದರು.
ಈ ವೇಳೆ ಜಡ್ಜ್ ನಿವಾಸದ ಬಳಿ ಬಂದಿದ್ದ ರಜತ್ ಪತ್ನಿ ನ್ಯಾಯಾಂಗ ಬಂಧನದ ಆದೇಶ ಕೇಳಿ ಚಿಂತೆಗೆ ಒಳಗಾಗಿದ್ದಾರೆ. ಸ್ಟೇಷನ್ ಎರಡೆರಡು ಬಾರಿ ಬಂದ್ರೂ ಧಿಮಾಕಿನ ವರ್ತನೆ ತೋರಿದ್ದರು ರಜತ್, ಸ್ಟೇಷನ್ ಒಳಗೆ ಹೋಗುವಾಗ ಕೈಯಲ್ಲಿ ಲೈಟರ್, ಶರ್ಟ್ ನ ಗುಂಡಿ ಪೂರ್ತಿ ಬಿಚ್ಚಿಕೊಂಡು ಸ್ಟೇಷನ್ ಒಳಗೆ ರಜತ್ ಎಂಟ್ರಿ ಕೊಟ್ಟಿದ್ದರು. ಗಾಗಲ್ ಹಾಕೊಂಡೇ ಸ್ಟೈಲಿಶ್ ರೀತಿ ಸ್ಟೇಷನ್ ಒಳಗೆ ವಿನಯ್ ಕೂಡ ಹೋಗಿದ್ದರು.
ಇದೇ ವೇಳೆ ಸೆಟ್ ಪ್ರಾಪರ್ಟಿ ಅಂತ ಹೇಳಿಕೊಂಡು ರಜತ್ ಹೋಗಿದ್ದರು ಎನ್ನಲಾಗಿದೆ. ವಿನಯ್ ಹಾಗೂ ರಜತ್ ಇಬ್ಬರನ್ನು ಮತ್ತೆ ಪೊಲೀಸರು ವಶ ಪಡೆದ ವೇಳೆ ಶರ್ಟ್ ನ ಗುಂಡಿ ಪೂರ್ತಿ ಬಿಚ್ಚಿಕೊಂಡು ಸ್ಟೇಷನ್ ಒಳಗೆ ರಜತ್ ಬಂದರೂ, ವಾಹನ ಹತ್ತುವಾಗ ರಜತ್ ಗುಂಡಿ ಹಾಕಿಕೊಂಡಿದ್ದಾರೆ.ರಜತ್‌ಗೆ ಗುಂಡಿ ಹಾಕಿಸಿದ್ದಾರೆ ಪೊಲೀಸರು. ಹೀಗಾಗಿ ಖಾಕಿ ಮುಂದೆ ರಜತ್ ಧಿಮಾಕು ನಡೆದಿಲ್ಲ ಅನ್ನೊದು ಗೊತ್ತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025