ರಾಕೇಶ್ ಪೂಜಾರಿ ಅವರ ಸಾ ವಿನ ಹಿಂದಿನ ದಿನದ ವಿಡಿಯೋ, ಕಣ್ಣೀರು ಬರುತ್ತೆ

 | 
E
ಕಾಮಿಡಿ ಕಿಲಾಡಿಗಳು ಸೀಸನ್ -3’ ವಿನ್ನರ್, ಕಿರುತೆರೆ ನಟ​ ರಾಕೇಶ್ ಪೂಜಾರಿ ಇನ್ನಿಲ್ಲ. ನಿನ್ನೆ ಸ್ನೇಹಿತರ ಮೆಹಂದಿ ಕಾರ್ಯಕ್ರಮದಲ್ಲಿ ನಟ ರಾಕೇಶ್​ಗೆ ದಿಢೀರ್ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇನ್ನೂ, ರಾಕೇಶ್​ ಪೂಜಾರಿ ಸಾವಿಗೂ ಮುನ್ನ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್​ ಮಾಡುತ್ತಿರೋ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋದಲ್ಲಿ ರಾಕೇಶ್​ ಪೂಜಾರಿ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ. ಒಂದು ಗುಂಪಿನಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ರಾಕೇಶ್​ ಪೂಜಾರಿ ಅವರನ್ನು ಮೈಕ್​ನಲ್ಲಿ ಮುಂದೆ ಬನ್ನಿ, ನಿಮಗೆ ಅಭಿಮಾನಿಗಳು ಜಾಸ್ತಿ ಇದ್ದಾರೆ ಅಂತ ಹೇಳಲಾಗಿದೆ. ಆ ಕೂಡಲೇ ಸ್ನೇಹಿತರು ಅವರನ್ನು ಮುಂದೆ ತಳ್ಳಿ ಡ್ಯಾನ್ಸ್​ ಮಾಡುವಂತೆ ಹೇಳಿದ್ದಾರೆ.
ಇದಾದ ಬಳಿಕ ಬಳಿಕ ಲೋ ಬಿಪಿಯಿಂದ ಹೃದಯಾಘಾತ ಸಂಭವಿಸಿ ರಾಕೇಶ್ ಪೂಜಾರಿ ಅಗಲಿದ್ದಾರೆ. ಸದ್ಯ ನಟನ ಮೃತದೇಹವನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ರವಾನೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮಲ್ಪೆ ಸಮೀಪದ ಹೂಡೆಯಲ್ಲಿರುವ ಸ್ವಗೃಹದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ರಾಕೇಶ್ ಅವರ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ರಾಕೇಶ್ ಪೂಜಾರಿ ಅವರು ನಿನ್ನೆ ರಾತ್ರಿ ಮೆಹಂದಿ ಸಮಾರಂಭವೊಂದಕ್ಕೆ ಹಾಜರಾಗಿದ್ದರು. ಅವರ ಕೊನೆಯ ವಿಡಿಯೊ ಎಂಬ ಕೆಲವೊಂದು ವಿಡಿಯೊ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಾನು ಗಮನಿಸಿದೆ. ರಾಕೇಶ್ ಡಿಜೆ ಸದ್ದಿಗೆ ಗೆಳಯರ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಆದರೆ ಆ ವಿಡಿಯೋಗಳಲ್ಲಿ ನಾನು ಗಮನಿಸಿದ್ದು ಕಿವಿಗಡಚ್ಚಿಕ್ಕುವ ಡಿಜೆ ಸೌಂಡ್. ಎದೆಬಿರಿಯುವ, ಸೌಂಡ್ ಬಾಕ್ಸ್‌ಗಳು ತಾವೇ ಹರಿದುಹೋಗುತ್ತವೋ ಎಂಬಂತಹ ಸೌಂಡ್. ಆಗಾಗ ಅವರು ಎದೆ ಮೇಲೆ ಕೈ ಇಟ್ಟಿಕೊಳ್ಳುತ್ತಿರೋದು ನೋಡಿದರೆ ನೋವು ಬಹಳ ಮೊದಲೇ ಶುರು ಆದಂತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub