ರಾಕೇಶ್ ಶೆಟ್ಟಿ ಹಾಗೂ ವಸಂತ ಗಿಳಿಯಾರ್ ಶಿವಗಣಗಳಂತೆ ಮಂಜುನಾಥ ಸ್ವಾಮಿ ಕಳುಹಿಸಿದ್ದಾರೆ: ವೀರೇಂದ್ರ ಹೆಗ್ಗಡೆ

 | 
Hvf

ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದ್ರೆ ಅದಕ್ಕೆ ಮಂಜುನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಕಾರಣ ಹಾಗೂ ಅವರಂತೆ ಇರುವ ಶಿವಗಣಗಳು ಕಾರಣ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ  ಅವರು ಹೇಳಿದ್ದಾರೆ. ಇವತ್ತು ಆ ಎರಡು ಶಿವಾಗಣಗಳಿಂದ ಬದುಕುವಂತಾಗಿದೆ. 

ಇಲ್ಲವಾದರೆ ಮನಸ್ಸಿಗೆ ನೆಮ್ಮದಿಯೇ ಇರುತ್ತಿರಲಿಲ್ಲ.
ಧರ್ಮಸ್ಥಳದಲ್ಲಿ  ನಡೆದ ಧರ್ಮ ಸಂರಕ್ಷಣಾ ಯಾತ್ರೆ ವೇಳೆ ಮಾತನಾಡಿದ ಅವರು, ಭಕ್ತರು ಧರ್ಮ ಸೈನಿಕರು. ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಎಂದರೆ ಅದಕ್ಕೆ ಮಂಜುನಾಥ ಸ್ವಾಮಿ, ಚಂದ್ರನಾಥ ಸ್ವಾಮಿ ಕಾರಣ. ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ. ನೀವೇ ಶಿಷ್ಟ ರಕ್ಷಣೆಯನ್ನ ಮಾಡಬೇಕು ಭಕ್ತರಿಗೆ ತಿಳಿಸಿದರು.

ಇನ್ನು ಇವರು ಶಿವಗಣ ಎಂದು ಹೇಳಿದ್ದು ವಸಂತ್ ಗಿಳಿಯಾರ್ ಹಾಗೂ ರಾಕೇಶ್ ಶೆಟ್ಟಿ ಅವರಿಗೆ ಎನ್ನುವುದು ಹಲವರಿಗೆ ತಿಳಿದಿದೆ. ಹೌದು ಸೌಜನ್ಯಾ ಪ್ರಕರಣದಲ್ಲಿ ಇವರಿಬ್ಬರೂ ವೀರೇಂದ್ರ ಹೆಗ್ಗಡೆಯವರ ಪರವಾಗಿ ನಿಂತು ಹೊರಾಡಿರುವ ಕಾರಣದಿಂದ ಇವರು ಹೇಗೆ ಹೇಳಿರಬಹುದು ಎಂದು ಹೇಳಲಾಗ್ತಿದೆ.

ಇನ್ನು ಕ್ಷೇತ್ರದ ಕಾರ್ಯವನ್ನು ಎಲ್ಲಾ ಜನರು ಮೆಚ್ಚಿದ್ದಾರೆ. ಇಲ್ಲಿಗೆ ಇಂದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದೀರಿ. ನಮ್ಮ ವಾಹನವನ್ನ ಅಪೇಕ್ಷಿಸದೆ ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ನೀಡಿದ್ದೀರಿ. ದೇಶವನ್ನ ಹಾಳು ಮಾಡಬೇಕಾದರೆ, ಮೊದಲು ಸಂಸ್ಕೃತಿಯನ್ನ ನಾಶ ಮಾಡುತ್ತಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೆ ಕ್ಷೇತ್ರಗಳಿಗೂ ಬರಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ವಿಷವನ್ನು ಸೇವಿಸುವ ಶಕ್ತಿ ಎಲ್ಲರಿಗೂ ಬರುವುದಿಲ್ಲ. ಇದು ದೇವರ ಪರೀಕ್ಷೆ. ಮಳೆ ಬರುತ್ತಿದೆ, ಆದರೆ ಯಾರು ಸಹ ಓಡುತ್ತಿಲ್ಲ, ನಿಂತಿದ್ದೀರಿ. ವೈಯಕ್ತಿಕವಾದ ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ನೀವೆಲ್ಲರೂ ಸ್ವಾಸ್ಥ್ಯ ಸಂಕಲ್ಪವನ್ನ ಮಾಡಬೇಕು ಎಂದು ಕರೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.