ಮೊದಲ ದಿನವೇ ಮಂಚ ಮುರಿದ ರಶ್ಮಿ, ಇನ್ನೇನು ಕೆಲಸ ಶುರು ಮಾಡುವಷ್ಟರಲ್ಲಿ ಮುರಿದ ಮಂಚ
Mar 8, 2025, 22:21 IST
|

ವಿಭಿನ್ನ ಕಥಾ ಹಂದರದ ಮೂಲಕ ಗಮನ ಸೆಳೆಯುತ್ತಿರುವ ಧಾರವಾಹಿ ಅಣ್ಣಯ್ಯ. ಹೌದು 4 ಜನ ತಂಗಿಯರ ಒಳಿತಾಗಿಯೇ ಬದುಕುವ ಅಣ್ಣಯ್ಯನ ಕಥೆ ಇದಾಗಿದ್ದು ಇದರಲ್ಲಿ ಇತ್ತೀಚಿಗಷ್ಟೇ ಜಿಮ್ ಸೀನ ಹಾಗೂ ರಶ್ಮಿಯ ಮದುವೆ ಆಗಿದೆ. ಇನ್ಮುಂದೆ ರಶ್ಮಿ ಮೊದಲಿನಂತೆ ಇರುವುದಿಲ್ಲ. ಇನ್ನು ಮುಂದೆ ಅತ್ತೆಯ ಕಾಟ ಸಹಿಸಿಕೊಂಡು ಸೀನನ ತಿರಸ್ಕಾರವನ್ನು ತಾಳಿಕೊಂಡೇ ಬದುಕುತ್ತಾಳೆ ಎಂದು ಪ್ರೇಕ್ಷಕರು ಅಂದುಕೊಂಡಿದ್ದರು.
ರಶ್ಮಿ ಮೊದಲಿನ ಹಾಗೇ ಇರಬೇಕು ಎಂದು ಹಲವರು ಅಂದುಕೊಂಡಿದ್ದರು. ಆದರೆ, ರಶ್ಮಿ ತಮ್ಮ ಮೊದಲಿನ ಅವತಾರವನ್ನು ಮತ್ತೆ ತೋರಿಸಿದ್ದಾಳೆ. ರಶ್ಮಿ ಹಾಗೂ ಸೀನನ ಮೊದಲನೇ ರಾತ್ರಿ ದಿನವೇ ಇಬ್ಬರೂ ಜಗಳ ಮಾಡಿಕೊಂಡಿದ್ಧಾರೆ. ಶಾಸ್ತ್ರದ ಪ್ರಕಾರ ಮೊದಲು ಸೀನ ಕೋಣೆಯ ಒಳಗಡೆ ಹೋಗುತ್ತಾನೆ. ಅದಾದ ನಂತರದಲ್ಲಿ ರಶ್ಮಿ ಹಾಲು ಹಿಡಿದುಕೊಂಡು ಹೋಗುತ್ತಾಳೆ.
ಅವಳು ಹಾಲು ಹಿಡಿದುಕೊಂಡು ಒಳಗಡೆ ಹೋಗಿ, ಹಾಲಾದ್ರೂ ಕುಡಿ ಎಂದು ಹೇಳುತ್ತಾಳೆ. ಆಗ ಸೀನ ನನ್ನ ಜೀವನಕ್ಕೇ ನೀನು ಹಾಲು, ತುಪ್ಪ ಬಿಟ್ಟಾಗಿದೆ. ಮತ್ತೆ ಹಾಲು ಕುಡಿ ಅಂತೀಯಾ?ಎಂದು ಪ್ರಶ್ನೆ ಮಾಡಿದ್ದಾನೆ.ಆ ಮಾತನ್ನು ಕೇಳಿ ರಶ್ಮಿ ತುಂಬಾ ಕೋಪ ಮಾಡಿಕೊಂಡಿದ್ದಾಳೆ. ಅವರಿಬ್ಬರ ನಡುವೆ ಇನ್ನಷ್ಟು ಮಾತುಕತೆಯಾಗಿದೆ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು ಎನ್ನುವ ರೀತಿಯಲ್ಲೇ ಅವರು ಮೊದಲಿನಿಂದಲೂ ಇದ್ದಾರೆ.
ಈಗಲೂ ಹಾಗೇ ಇದ್ದಾರೆ. ಹೊರಗಡೆ ಸೀನನ ತಂದೆ, ತಾಯಿ ಮಲಗಿರುತ್ತಾರೆ. ರಶ್ಮಿ ತನಗೆ ಬಂದ ಕೋಪಕ್ಕೆ ಅಲ್ಲಿಟ್ಟಿದ್ದ ಹಣ್ಣಿನ ಬಟ್ಟಲನ್ನು ತೆಗೆದು ಸೀನನಿಗೆ ಎಸೆಯುತ್ತಾಳೆ. ಅದು ತಪ್ಪಿ ಗೋಡೆಗೆ ತಾಗುತ್ತದೆ. ನಂತರ ಕೋಪ ಮಾಡಿಕೊಂಡ ಸೀನ ರಶ್ಮಿಯನ್ನು ತಳ್ಳುತ್ತಾನೆ. ಅವಳು ಸೀನ ತಳ್ಳಿದ ತಕ್ಷಣ ಮಂಚದ ಮೇಲೆ ಬೀಳುತ್ತಾಳೆ. ಮಂಚ ಮುರಿದು ಹೋಗುತ್ತದೆ.
ಆ ಶಬ್ಧಕ್ಕೆ ಮಲ್ಲಪ್ಪಣ್ಣ ಹಾಗೂ ನೀಲಕ್ಕನಿಗೆ ಎಚ್ಚರವಾಗುತ್ತದೆ. ಅವಳು ಏನಾಯ್ತು? ಎಂದು ಪ್ರಶ್ನೆ ಮಾಡುತ್ತಾಳೆ. ಇದನ್ನೆಲ್ಲ ನಾವು ಕೇಳಿಸಿಕೊಳ್ಳಬಾರದು ಎಂದು ಮಾದಪ್ಪಣ್ಣ ಹೇಳುತ್ತಾನೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಕಥೆ ಒಳ್ಳೆಯ ಟ್ವಿಸ್ಟ್ ಪಡೆಯುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.