ನೂರಾರು ಸಿನಿಮಾದಲ್ಲಿ ನಟಿಸಿದ ಬಾಲ ನಟ ಇಹಲೋಕ, ಕಣ್ಣೀರಿಟ್ಟ ರವಿಚಂದ್ರನ್

ಜನ ಈಗಲೂ 1996 ರಲ್ಲಿ ತೆರೆ ಕಂಡಿದ್ದ ಹಲೋ ಡ್ಯಾಡಿ ಚಿತ್ರದಲ್ಲಿ ನಿತಿನ್ ಗೋಪಿ ಡಾ. ವಿಷ್ಣುವರ್ಧನ್ ಅವರ ಪುತ್ರನಾಗಿ ನಟಿಸಿದ್ದರು. ಈ ಸಿನಿಮಾದ ಶಾಲೆಗೆ ಈ ದಿನ ರಜಾ…ಹಾಡು ಇಂದಿಗೂ ಅನೇಕ ಮಕ್ಕಳಿಗೆ ಫೇಮಸ್. ಮಕ್ಕಳಿಗೆ ಸ್ಕೂಲ್‌ಗೆ ರಜೆ ದೊರೆತರೆ ಈ ಹಾಡನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಹೌದು ಬಾಲನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಿತಿನ್ ಗೋಪಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿತಿನ್ ನಟನಾಗಿ, ಕನ್ನಡ ಕಿರುತೆರೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದರು.
ಅವರಿಗೆ 39 ವಯಸ್ಸಾಗಿತ್ತು. ನಿತಿನ್ ಬೆಂಗಳೂರಿನ ಇಟ್ಟಮಡುವಿನ ಅಪಾರ್ಟ್‌ಮೆಂಟ್‌ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದರು. ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ನೆರೆಹೊರೆಯವರ ಸಹಾಯದಿಂದ ಹೆತ್ತವರು ನಿತಿನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗಮಧ್ಯದಲ್ಲೇ ನಿತಿನ್ ಕೊನೆಯುಸಿರೆಳೆದಿದ್ದಾರೆ. ನಿತಿನ್ ತಂದೆ, ಗೋಪಿ ಖ್ಯಾತ ಕೊಳಲು ವಾದಕರು.
ನಿತಿನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗ ಹಾಗೂ ಕಿರುತೆರೆ ಆಘಾತ ವ್ಯಕ್ತಪಡಿಸಿದೆ. ನಿತಿನ್ ಗೋಪಿಗೆ ಇನ್ನೂ ಮದುವೆ ಆಗಿರಲಿಲ್ಲ. ಚಿತ್ರರಂಗ, ಕಿರುತೆರೆಯಲ್ಲಿ ಹೆಸರು ಮಾಡಬೇಕೆಂಬ ಆಸೆ ನಿತಿನ್‌ಗೆ ಇತ್ತು. ಕನ್ನಡದಲ್ಲಿ ನಿತಿನ್ ಹಲೋ ಡ್ಯಾಡಿ, ಚಿರಬಾಂಧವ್ಯ, ನಿಶಬ್ಧ, ಮತ್ತಿನಂಥ ಹೆಂಡತಿ ಸೇರಿ ಅನೇಕ ಸಿನಿಮಾಗಳಲ್ಲ ನಟಿಸಿದ್ದರು. ಜೊತೆಗೆ ಕೆಲವೊಂದು ಧಾರಾವಾಹಿಗಳಲ್ಲಿ ಕೂಡಾ ನಿರ್ದೇಶಿಸಿದ್ದರು. ಹರ ಹರ ಮಹಾದೇವ ಧಾರಾವಾಹಿಯ ಕೆಲವೊಂದು ಎಪಿಸೋಡ್ ಹಾಗೂ ಒಂದು ತಮಿಳು ಧಾರಾವಾಹಿಯನ್ನು ನಿರ್ದೇಶಿಸಿದ್ದರು.
ಹೊಸ ಧಾರಾವಾಹಿಯನ್ನು ನಿರ್ದೇಶಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಆದರೆ ಆಸೆ ಚಿಗುರುವ ಮುನ್ನವೇ ಬಾಡಿ ಹೋಗಿದೆ. ನೂರಾರು ಕನಸು ಕಂಡಿದ್ದ ಯುವಕ ರೀತಿ ದುರಂತ ಅಂತ್ಯ ಕಂಡಿದ್ದು ನಿಜಕ್ಕೂ ವಿಷಾದನೀಯ. ನಿತಿನ್ ನಿಧನಕ್ಕೆ ಕನ್ನಡ ಚಿತ್ರರಂಗ ಸಂತಾಪ ಸೂಚಿಸಿದೆ. ನಟಿ ಸ್ವಪ್ನಾ ದೀಕ್ಷಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ನಿತಿನ್ ನಿಧನಕ್ಕೆ ಸಂತಾಪ ಸೂಚಿಸಿ, ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.