ಸಂಬಂಧಗಳು ಐಸ್ ಕ್ರೀಮ್ ಇದ್ದಂತೆ, ಸ್ವಲ್ಪ ಹೊತ್ತಲ್ಲೆ ಎಲ್ಲವೂ ಕರಿಗಿ ಖಾಲಿ ಆಗಿ ಬಿಡುತ್ತದೆ; ತಮನ್ನಾ ಭಾಟಿಯಾ

 | 
Nji
ಬಾಲಿವುಡ್ ನಟ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ನಡುವೆ ಬ್ರೇಕಪ್ ಆಗಿರೋದ್ಯಾಕೆ ಎಂಬುದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಸಂಬಂಧವನ್ನು ಐಸ್ಕ್ರೀಮ್‌ನಂತೆ ಆಸ್ವಾದಿಸಬೇಕು ಎಂದು ವಿಜಯ್ ವರ್ಮಾ ಹೇಳಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಹಾಗೆ ನೋಡೋಕೆ ಹೋದ್ರೆ ವಿಜಯ್ ವರ್ಮಾ ಪುಣ್ಯವಂತ ಹಾಗಾಗಿ ತಮನ್ನಾ ಅಂತ ಸುಂದರ ಹುಡುಗಿ ದೊರೆತಿದ್ದಾಳೆ ಎಂದು ಹಲವಾರು ಜನ ಹೇಳುತ್ತಲೇ ಇದ್ದರು.
ಹೌದು ಈ ಕುರಿತಾಗಿ ಸಂದರ್ಶನದಲ್ಲಿ ಮಾತನಾಡಿದ ವಿಜಯ್ ವರ್ಮಾ ಅವರು ಸಂಬಂಧವನ್ನು ಐಸ್ಕ್ರೀಮ್‌ಗೆ ಹೋಲಿಸಿದ್ದಾರೆ. ನೀವು ಐಐಎಸ್ ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಮ್‌ನ ತಿಂದು ಮುಂದುವರಿಯಬೇಕು. ತಮನ್ನಾಗೆ ಪರೋಕ್ಷವಾಗಿ ವಿಜಯ್ ಹೇಳಿದ್ರಾ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. 
ಅಷ್ಟಕ್ಕೂ ತಮನ್ನಾ ಮತ್ತು ವಿಜಯ್ ಮೊದಲ ಬಾರಿಗೆ 2022 ರಲ್ಲಿ ಭೇಟಿಯಾದರು. ಇಬ್ಬರೂ ಲಸ್ಟ್ ಸ್ಟೋರೀಸ್ 2ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ತಮನ್ನಾ ಮತ್ತು ವಿಜಯ್ ಲಿಪ್ ಲಾಕ್ ಮಾಡುತ್ತಿರುವುದು ಕಂಡುಬಂದಿತ್ತು. ಅಂದಿನಿಂದ, ಇಬ್ಬರ ನಡುವಿನ ಪ್ರಣಯದ ಚರ್ಚೆಗಳು ಪ್ರಾರಂಭವಾದವು.
ಅದಾದ ನಂತರ, ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಮತ್ತೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆರಂಭದಲ್ಲಿ, ಅವರ ಸಂಬಂಧದ ಬಗ್ಗೆ ಕೇವಲ ಚರ್ಚೆಗಳು ನಡೆಯುತ್ತಿದ್ದವು. ನಂತರ ಜೂನ್ 2023ರಲ್ಲಿ, ಅವರು ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿದರು. 
ವಿಜಯ್ ತನ್ನ ಭಾವನೆಗಳನ್ನು ಮರೆಮಾಡಲು ಇಷ್ಟಪಡದ ಕಾರಣ ತಮ್ಮ ಸಂಬಂಧವನ್ನು ಬಹಿರಂಗಪಡಿಸಲು ನಿರ್ಧರಿಸಿದೆ ಎಂದು ತಮನ್ನಾ ಸಂದರ್ಶನವೊಂದರಲ್ಲಿ ವಿವರಿಸಿದ್ದರು. ಈಗ ಇವರು ಬೇರೆ ಆಗಿದ್ದಾರೆ.ಅಂದಹಾಗೆ, ವಿಜಯ್ ವರ್ಮಾ ಹಾಗೂ ತಮನ್ನಾ ಪ್ರಸ್ತುತ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿ ಮಾಡಿದ್ದಾರೆ. ತಮನ್ನಾ ನಟನೆಯ ಒಡೆಲಾ 2 ಚಿತ್ರವು ಇದೇ ಏ.17ರಂದು ರಿಲೀಸ್ ಆಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub