ರಿಷಬ್ ಶೆಟ್ಟಿ ಪತ್ನಿ ತನ್ನ ಅಣ್ಣ ರಕ್ಷಿತ್ ಶೆಟ್ಟಿಗೆ ರಾಖಿ ಕಟ್ಟಿದ ಸಂಭ್ರಮ ಹೇಗಿತ್ತು ಗೊತ್ತಾ

 | 
Gg

ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಆತ್ಮೀಯ ಸ್ನೇಹಿತರೇ ಆಗಿದ್ದಾರೆ. ಇವರ ನಡುವಿನ ಆತ್ಮೀಯತೆಗೆ ಮನೆಯ ಮಂದಿಯಲ್ಲೂ ಆತ್ಮೀಯತೆ ಬೆಳೆದಿದೆ. ರಕ್ಷಿತ್ ಶೆಟ್ಟಿ ಅವರನ್ನ ಚಿಂಟು ಅಣ್ಣ ಅಂತಲೇ ಪ್ರಗತಿ ಶೆಟ್ಟಿ ಕರೆಯುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ರಾಕಿ ರಕ್ಷಾ ಬಂಧನ ಆಚರಿಸಿದ್ದಾರೆ. ಹೌದು ನಿನ್ನೆ ರಕ್ಷಾ ಬಂಧನ ಹಬ್ಬವಿತ್ತು ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಪ್ರೀತಿಯ ಚಿಂಟು ಅಣ್ಣ ಅಂದ್ರೆ ರಕ್ಷಿತ್ ಶೆಟ್ಟಿಗೆ ರಾಕಿ ಕಟ್ಟಿ ಕಾಲು ಮುಗಿದಿದ್ದಾರೆ. 

ಈ ಮೂಲಕ ಅಣ್ಣನ ಆಶೀರ್ವಾದ ಪಡೆದು ಸಂತೋಷಪಟ್ಟಿದ್ದಾರೆ. ಇನ್ನು ಪ್ರಗತಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರ ಈ ಒಂದು ಆಚರಣೆಯ ಫೋಟೋಗಳು ಗಮನ ಸೆಳೆಯುತ್ತಿವೆ. ರಾಕಿ ಕಟ್ಟಿ ಚಿಂಟು ಅಣ್ಣನ ಕಾಲು ಮುಗಿದ ಪ್ರಗತಿ ಅವರೇ ಈ ಒಂದಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಸಹೋದರಿ ಪ್ರಗತಿ ಶೆಟ್ಟಿ ಅವರಿಂದ ರಾಕಿ ಕಟ್ಟಿಸಿಕೊಂಡು ಸಂತೋಷಪಟ್ಟಿದ್ದಾರೆ. ಮನದುಂಬಿ ತಂಗಿಗೆ ಆಶೀರ್ವಾದ ಮಾಡಿದ್ದಾರೆ. 

ಈ ಒಂದು ಕ್ಷಣದ ಫೋಟೋ ಹೆಚ್ಚು ಗಮನ ಸೆಳೆಯುವಂತೇನೂ ಇವೆ. ರಕ್ಷಿತ್ ಶೆಟ್ಟಿ ಅವರ ಈ ಒಂದು ವಿಶೇಷ ಕ್ಷಣದ ಫೋಟೋಗಳಲ್ಲಿ ರಕ್ಷಿತ್ ಇಲ್ಲಿ ಸಹೋದರಿಗೆ ಸಿಹಿ ತಿನ್ನಿಸಿ ಹರಸಿದ್ದಾರೆ. ಪ್ರಗತಿ ಶೆಟ್ಟಿ ಕೂಡ ಅಣ್ಣನಿಗೆ ಆರತಿ ಮಾಡಿ ಒಳ್ಳೆಯದಾಗಲಿ ಅಂತಲೇ ಹೇಳಿದ್ದಾರೆ. ಇನ್ನು ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಸೆಪ್ಟೆಂಬರ್ ಒಂದರಂದು ರಿಲೀಸ್ ಆಗುತ್ತಿದೆ. 

ಈ ಚಿತ್ರದ ಎರಡು ದಿನದ ಮೊದಲೇ ರಕ್ಷಾ ಬಂಧನ ಬಂದಿದೆ. ಆ ಒಂದು ಸಂಭ್ರಮದಲ್ಲೂ ರಕ್ಷಿತ್ ಭಾಗಿಯಾಗಿ ಖುಷಿಪಟ್ಟಿದ್ದಾರೆ. ಅಲ್ಲದೆ ರಿಷಭ್ ಪತ್ನಿ ಪ್ರಗತಿ ಕೂಡ ಸಿನಿಮಾ ಯಶಸ್ವಿ ಆಗಲಿ ಎಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.