ಕನ್ನಡ ಬಿಟ್ಟು ಬಾಲಿವುಡ್ ಗೆ ಹಾರಿದ ರಾಕಿಂಗ್ ಸ್ಟಾರ್ ಯಶ್, ಮುಂದಿನ ಸಿನಿಮಾ ಯಾವುದು ಗೊತ್ತಾ

 | 
Hcd

ಯಶ್ ಬಾಲಿವುಡ್ ಎಂಟ್ರಿಯ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ ಅನ್ನುವ ಮಾತು ಇದೆ. ಅಷ್ಟರಲ್ಲಿಯೆ ಯಶ್ ತಮ್ಮ ಮೊದಲ ಬಾಲಿವುಡ್ ಸಿನಿಮಾ ತಯಾರಿ ಮಾಡಿಕೊಳ್ತಿದ್ದಾರೆ ಅನ್ನುವ ಸುದ್ದಿ ಇದೆ. ಇದರ ಬೆನ್ನಲ್ಲಿಯೇ ಈ ಸುದ್ದಿ ನಿಜವೇ ಅನ್ನುವ ಅನುಮಾನವನ್ನ ಕೂಡ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. 

ಒಂದು ವೇಳೆ ರಾಕಿಂಗ್ ಸ್ಟಾರ್ ಯಶ್ ಈ ಪಾತ್ರ ಮಾಡಿದ್ರೆ ಇಮೇಜ್ ಜೇಂಜ್ ಆಗುತ್ತಾ ಅನ್ನುವ ಪ್ರಶ್ನೆನೂ ಇದೆ. ರಾಕಿಂಗ್ ಸ್ಟಾರ್ ಯಶ್ ಇಮೇಜ್ ಬೇರೆ ಇದೆ. ಕೆಜಿಎಫ್ ಚಿತ್ರದಿಂದ ಬಂದ ಈ ಇಮೇಜ್ ಬೇರೆ ಲೆವಲ್‌ಗೆ ತೆಗೆದುಕೊಂಡು ಹೋಗಿದೆ. ಇದನ್ನ ಬಿಟ್ಟು ಸಿನಿಮಾ ಮಾಡಿದ್ರೆ ಹೆಚ್ಚು ಕಡಿಮೆ ಮೂರು ನಾಲ್ಕು ವರ್ಷದಲ್ಲಿ ಯಶ್ ಅದೆಷ್ಟು ಸಿನಿಮಾ ಮಾಡ್ತಿದ್ರೋ ಏನೋ. 

ಆದರೆ ಯಶ್ ವಿಶ್ವ ಸಿನಿಮಾ ಲೆಕ್ಕದಲ್ಲಿಯೇ ಇದ್ದಾರೆ. ಇಡೀ ವಿಶ್ವವೇ ಮೆಚ್ಚೋ ಸಿನಿಮಾಡ್ಬೇಕು ಅನ್ನುವ ಹಂತಕ್ಕೆ ತಲುಪಿ ಆಗಿದೆ. ಆದರೂ ನಿತೇಶ್ ತಿವಾರಿ ಅವರ ಸಿನಿಮಾದ ಸುದ್ದಿ ಮತ್ತೆ ಮತ್ತೆ ಹರಿದಾಡುತ್ತಿದೆ. ಇದೀಗ ಅದೇ ಸಿನಿಮಾದ ಸುದ್ದಿ ಹೊಸ ರೀತಿಯಲ್ಲಿ ಸೌಂಡ್ ಮಾಡುತ್ತಿದೆ. ನಿತೇಶ್ ತಿವಾರಿ ಅವರು ರಾಮಾಯಣ ಸಿನಿಮಾ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡ್ತಾರೆ ಅನ್ನೋದೇ ಈಗೀನ ಮುಂದುವರೆದ ನ್ಯೂಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಚಿತ್ರ ಜೀವನದಲ್ಲಿ ವಿಲನ್ ಪಾತ್ರ ಮಾಡ್ತಾರೋ ಇಲ್ವೋ. ಆದರೆ ಕೆಜಿಎಫ್‌ನಲ್ಲಿ ಎರಡೂ ಇತ್ತು ಅನ್ನೋದು ಅಷ್ಟೇ ಸತ್ಯವಾದ ಮಾತು. ಆದರೆ ಬಾಲಿವುಡ್ ನಿತೇಶ್ ತಿವಾರಿ ಅವರಿಗೆ ಯಶ್ ರಾವಣನ ರೂಪದಲ್ಲಿಯೇ ಕಾಣಿಸಿಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಬಾಲಿವುಡ್‌ ರಾಮಾಯಣದಲ್ಲಿ ರಾಕಿ ಭಾಯ್, ರಾವಣನ ಪಾತ್ರ ಮಾಡ್ತಾರೆ ಅನ್ನುವ ಸುದ್ದಿನೇ ಹೆಚ್ಚಿದೆ. ಈ ಒಂದು ಪಾತ್ರಕ್ಕಾಗಿಯೇ ರಾಕಿ ಭಾಯ್ 20 ದಿನದ ಡೇಟ್ಸ್ ಕೊಟ್ಟಿದ್ದಾರೆ ಅನ್ನುವ ಸುದ್ದಿನೂ ಇದೆ. ಮುಂದಿನ ವರ್ಷ ಜುಲೈ ತಿಂಗಳಲ್ಲಿ ಯಶ್ ಪಾತ್ರದ ಶೂಟಿಂಗ್ ಇರುತ್ತದೆ ಅನ್ನುವ ಸುದ್ದಿ ಕುತೂಹಲ ಮೂಡಿಸುತ್ತಿದೆ.ನಟ ಯಶ್ ಅಧಿಕೃತವಾಗಿ ಇನ್ನು ಏನು ಹೇಳದಿರುವ ಕಾರಣ ಅಭಿಮಾನಿಗಳು ಕಾತುರದಿಂದ ಕಾಯುತ್ತಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.