3 ಅಡಿ ಇರುವ ಸಂಜು ಬಸಯ್ಯ ಮದುವೆಯಾದ ಬಳಿಕ ಸುಖ ಇಲ್ವಾ, ವೇದಿಕೆ ಮೇಲೆ ಸತ್ಯ ಬಿಚ್ಚಿಟ್ಟ ಗಂಡ ಹೆಂಡತಿ

 | 
Hx

ಜೋಡಿ ನಂ 1 ವೇದಿಕೆ ಮೇಲೆ ಸಂಜು ಬಸಯ್ಯ ಹಾಗೂ ಪಲ್ಲವಿ ಗಮನ ಸೆಳೆಯುತ್ತಿದ್ದಾರೆ. 'ಸಿಂಗಪೂರ್‌ನಲ್ಲಿ ರಾಜಾ ಕುಳ್ಳ' ಚಿತ್ರದ ಬೆಳ್ಳಿಯ ರಾಜಾ ಬಾರೋ..ಕುಳ್ಳರ ರಾಜಾ ಬಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೇ ಸಮಯದಲ್ಲಿ ತಾವಿಬ್ಬರೂ ಪ್ರೀತಿಯಲ್ಲಿದ್ದಾಗ ಅನುಭವಿಸಿದ ನೋವನ್ನು ಈ ಅಪರೂಪದ ಜೋಡಿ ಹಂಚಿಕೊಂಡಿದೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಂಗಭೂಮಿ ಕಲಾವಿದೆ ಪಲ್ಲವಿ ಬಳ್ಳಾರಿ ಅವರನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದ ಸಂಜು ಬಸಯ್ಯ ಆಪ್ತರ ಸಮ್ಮುಖದಲ್ಲಿ ಮದುವೆ ಆಗಿ ನಂತರ ಆ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಇತ್ತೀಚೆಗೆ ಹಂಚಿಕೊಂಡಿದ್ದರು.

ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ತಿಳಿದು ಜನರು ಸಂಜು ಹೈಟ್‌ ಬಗ್ಗೆಯೇ ಮಾತನಾಡುತ್ತಿದ್ದರು. ನಿನ್ನ ಹೈಟ್‌ಗೆ ತಕ್ಕಂತ ಹುಡುಗನನ್ನು ಆರಿಸಿಕೋ, ನಿಮ್ಮದು ನಾಟಕ ಅಷ್ಟೇ ಎನ್ನುತ್ತಿದ್ದರು ಎಂದು ಹೇಳಿಕೊಂಡು ಪಲ್ಲವಿ ಕಣ್ಣೀರು ಹಾಕಿದರೆ, ಇವಳು ನನಗೆ ಸಿಗುತ್ತಾಳೋ ಇಲ್ಲವೋ ಎಂಬುದೇ ನನಗೆ ಭಯವಾಗುತ್ತಿತ್ತು. ಇಂದು ನಾನು ಈ ವೇದಿಕೆ ಮೇಲೆ ನಿಂತಿದ್ದೇನೆ ಎಂದರೆ ಅದಕ್ಕೆ ಪಲ್ಲವಿಯೇ ಕಾರಣ ಎಂದು ಹೇಳಿ, ಸಂಜು ಬಸಯ್ಯ ಕೂಡಾ ಭಾವುಕರಾಗುತ್ತಾರೆ.

ಪ್ರೋಮೋಗೆ ನೆಟಿಜನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮದು ಅಪರೂಪದ ಜೋಡಿ, ಅದಕ್ಕೆ ತಾನೇ ಲವ್‌ ಇಸ್‌ ಬ್ಲೈಂಡ್‌ ಅನ್ನೋದು, ಇಷ್ಟಪಟ್ಟು ಮದುವೆ ಆಗಿದ್ದೀರಿ, ಕೊನೆವರೆಗೂ ಖುಷಿ ಖುಷಿಯಾಗಿ ಇರಿ ಎಂದು ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.