ಗಂಡನ ಹೆಸರು ಸ್ಕ್ರೀನ್ ಮೇಲೆ ಬಂದಾಗ ರಾಧಿಕಾ ಕುಮಾರಸ್ವಾಮಿ ಎಷ್ಟು ಖುಷಿ ಆಗಿದ್ರು ನೋಡಿ
Oct 7, 2024, 21:04 IST
|

ಕನ್ನಡದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ಚಿತ್ರ ಭೈರಾದೇವಿ ಬಿಡುಗಡೆಯಾಗಿದೆ. ಶ್ರೀಜೈ ನಿರ್ದೇಶನದ ಈ ಸಿನಿಮಾವು ಅಘೋರಿಗಳು ದೆವ್ವ ಮತ್ತು ದೇವರ ಬಗೆಗಿನ ಕಥೆಯಾಗಿದೆ.ರಾಧಿಕಾ ಅಘೋರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಕಾಶಿ ಹಾಗೂ ಮಣಿಕರ್ಣಿಕಾ ಘಾಟ್ ದರ್ಶನವೂ ಆಗುತ್ತೆ. ಜೊತೆಗೆ ಅಘೋರಿಗಳ ಲೈಫ್‌ಸ್ಟೈಲಿನ ಪರಿಚಯವೂ ಆಗುತ್ತದೆ.
ಯಾವ ತೆಲುಗು ಸಿನಿಮಾಕ್ಕೂ ಕಡಿಮೆ ಇಲ್ಲದ ಹಾಗೆ ಬಹಳ ರಿಚ್ ಆಗಿ ಅಘೋರಿ ಲೈಫನ್ನು ತೋರಿಸಿದ್ದಾರೆ. ಬಹುತೇಕ ಕೌಟುಂಬಿಕ, ಪ್ರೀತಿ, ಪ್ರೇಮ ಕಥೆಗಳಲ್ಲಿ ನಟಿಸಿದ್ದ ರಾಧಿಕಾ ಕುಮಾರಸ್ವಾಮಿ ಹೊಸದೊಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ, ಅವರ ಸಿನಿಮಾಗಳ ಮಟ್ಟಿಗೆ ಇದೊಂದು ಹೊಸ ಪ್ರಯೋಗವಾಗಿದೆ. ಇನ್ನು ಚಿತ್ರದ ಶಕ್ತಿಯು ಅದರ ಶೀರ್ಷಿಕೆಯಲ್ಲಿ ಮಾತ್ರವಲ್ಲ ಕಥೆಯಲ್ಲಿಯೂ ಅಡಗಿದೆ. ಪ್ರಬಲವಾದ ಕಥಾವಸ್ತುವನ್ನು ಒಳಗೊಂಡಿರುವ ಭೈರಾದೇವಿ ಸಿನಿಮಾದಲ್ಲಿ ಪ್ರತಿಯೊಬ್ಬರ ಪಾತ್ರ ಅಧ್ಬುತವಾಗಿದೆ.
ಇನ್ನು ಇದರ ರಿಲೀಸ್ ವೇಳೆ ಥಿಯೇಟರ್ ಆಗಮಿಸಿದ್ದ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ನೋಡಿ ಸಂತೋಷಗೊಂಡರು. ಇನ್ನು ದೊಡ್ಡ ಸ್ಕ್ರೀನ್ ಮೇಲೆ ಕುಮಾರಸ್ವಾಮಿ ಅವರ ಹೆಸರು ಕಂಡು ನಾಚಿನೀರಾದರು.ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಪ್ರಯೋಗ, ದೆವ್ವ ಭೂತದ ಕಥೆಯುಳ್ಳ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೆ ಅದ್ಧೂರಿ ನಿರ್ಮಾಣ ವಿಭಿನ್ನ ಕಥಾ ವಸ್ತುವಿನಿಂದಾಗಿ ಭೈರಾದೇವಿ ಸ್ವಲ್ಪ ಡಿಫರೆಂಟ್ ಎನಿಸುತ್ತದೆ.
ಚಿತ್ರದ ಮೊದಲಾರ್ಧ ವೇಗವಾಗಿ ಸಾಗುತ್ತದೆ, ದ್ವಿತೀಯಾರ್ಧದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ತೆರೆದುಕೊಳ್ಳುತ್ತದೆ. ಅಘೋರಿಗಳ ವಿಸ್ಮಯ ಪ್ರಪಂಚ ತೋರಿಸಲು ನಿರ್ದೇಶಕರು ಬಹಳ ಚೆನ್ನಾಗಿ ಗ್ರಾಫಿಕ್ಸ್ ಬಳಸಿಕೊಂಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಘೋರಿ ರೂಪಾದಲ್ಲಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಸಿನಿಮಾದಲ್ಲಿ ಅಲ್ಲಲ್ಲಿ ಕೆಲವು ದೃಶ್ಯಗಳನ್ನು ಅನವಾಶ್ಯಕವಾಗಿ ಎಳೆಯಲಾಗಿದೆ.ಚಿತ್ರದಲ್ಲಿ ಎರಡು ಹಾಡು ಗಮನ ಸೆಳೆಯುತ್ತವೆ, ಉಳಿದಂತೆ ಹಿನ್ನೆಲೆ ಸಂಗೀತದ ಅಬ್ಬರ ಜೋರಾಗಿದೆ.ಸಿನಿಮಾವನ್ನು ಥಿಯೇಟರ್‌ನಲ್ಲಿ ಕೂತು ಎಂಜಾಯ್ ಮಾಡೋದಕ್ಕೆ ಏನೂ ತೊಂದರೆಯಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.