ಡಿವೋರ್ಸ್ ಸುದ್ದಿ ಇಷ್ಟು ದೊಡ್ಡದಾಗಲು ಇವಳೇ ಕಾರಣ, ಮಾಸ್ಟರ್ ಆನಂದ್ ಗುಡುಗಿದ್ದು ಯಾರ ಮೇಲೆ

 | 
೮೮
 ಚಿತ್ರರಂಗದಲ್ಲಿ ಡೈವರ್ಸ್ ಕಾಮನ್ ಬಿಡಿ ಹೌದು ಅವ್ರು ಮಸಾಲೆ ಹಿಡ್ಕೊಂಡು ಕಾಯ್ತಾ ಇದ್ರು, ಇವಳು ನಾನು ಮ್ಯಾಗಿ, ನಾನು ಮ್ಯಾಗಿ ಅಂತ ಹೋದ್ಲು. ಅವ್ರು ಮ್ಯಾಗಿ ಮಾಡಿಕೊಂಡು ತಿಂದ್ರು.ಅಷ್ಟೇ ಆಗಿದ್ದು ಕಥೆ ಇಲ್ಲಿ ಎನ್ನುತ್ತಲೇ  ತಮ್ಮ ಡಿವೋರ್ಸ್​ ಸುದ್ದಿ ಹರಡಲು ಕಾಯ್ತಾ ಕೂತವರಿಗೆ ಪತ್ನಿ ಯಶಸ್ವಿನಿ ದಾರಿ ಮಾಡಿಕೊಟ್ಟ ಬಗ್ಗೆ ಅಸಮಾಧಾನದಿಂದ ಮಾಸ್ಟರ್​ ಆನಂದ್​ ಹೇಳಿದ್ದಾರೆ.
 ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾಸ್ಟರ್​ ಆನಂದ್​ ಮತ್ತು ಪತ್ನಿ ಯಶಸ್ವಿನಿ ಮಾತನಾಡಿದ್ದು, ಡಿವೋರ್ಸ್​ ಸುದ್ದಿ ಹರಡಲು ಕಾರಣವನ್ನು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ, ಯಾವುದೋ ಪೋಸ್ಟ್​ಗೆ ಕಮೆಂಟ್​ ಮಾಡಿದ ಪತ್ನಿ ಮೇಲೆ ಆನಂದ್​ ಅಸಮಾಧಾನ ಹೊರಹಾಕಿದ್ದಾರೆ.ಅಷ್ಟಕ್ಕೂ ಮಾಸ್ಟರ್‌ ಆನಂದ್‌ ಮತ್ತು ಪತ್ನಿ ಯಶಸ್ವಿನಿ ಅವರ ನಡುವಿನ ವಿಚ್ಛೇದನ ಸುದ್ದಿ ಕೆಲ ತಿಂಗಳಿನಿಂದ ಸ್ಯಾಂಡಲ್‌ವುಡ್‌ ಅನ್ನು ಬರಸಿಡಿಲಿನಂತೆ ಬಡಿದಿತ್ತು.
 ಸಿನಿ ಇಂಡಸ್ಟ್ರಿಯಲ್ಲಿ ಮದುವೆಯಷ್ಟೇ ವೇಗದಲ್ಲಿ ಡಿವೋರ್ಸ್ ಕೂಡ ಆಗುತ್ತಿರುವ ಕಾರಣ ಯಾವುದೇ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದರೆ, ಅದು ಅಚ್ಚರಿ ತರುವ ವಿಷಯವಾಗಿ ಉಳಿಯುತ್ತಿಲ್ಲ. ಸ್ಥಿತಿ ಹೀಗಿರುವಾಗ ಮಾಸ್ಟರ್‌ ಆನಂದ್‌ ಮತ್ತು ಪತ್ನಿ ನಡುವೆ ಬಿರುಕು ಮೂಡಿರುವ ಸುದ್ದಿ ಕ್ಷಣ ಮಾತ್ರದಲ್ಲಿ ವೈರಲ್‌ ಆಗಿ ಹೋಗಿತ್ತು. ಇದು ಹೇಗೆ ವೈರಲ್‌ ಆಯಿತೋ ಗೊತ್ತಿಲ್ಲ. ಆದರೆ ಇದರ ಮಧ್ಯೆಯೇ, ಯಶಸ್ವಿನಿ ಅವರು ಷಾರ್ಟ್ ಡ್ರೆಸ್‌ ಧರಿಸಿ ಹಾಟ್‌ ಡಾನ್ಸ್‌ ರೀಲ್ಸ್‌ ಮಾಡುವ ಮೂಲಕ ಮತ್ತಷ್ಟು ಸದ್ದು ಮಾಡಿಬಿಟ್ಟರು. ಕೊನೆಗೆ ಇದೇ ವಿಚ್ಛೇದನಕ್ಕೆ ಕಾರಣ ಎನ್ನುವಷ್ಟರ ಮಟ್ಟಿಗೆ ಸದ್ದು ಮಾಡಿತು.
ಅದೇನೇ ಇದ್ದರೂ, ಚಿಕ್ಕ ಚಿಕ್ಕಡ್ರೆಸ್‌ನಲ್ಲಿ ಹಾಟ್‌ ಆಗಿ ಯಶಸ್ವಿನಿ  ಅವರು ರೀಲ್ಸ್‌ ಮಾಡುವುದನ್ನು ಆನಂದ್‌ ಅವರ ಫ್ಯಾನ್ಸ್‌ ಸಹಿಸುತಿಲ್ಲ. 'ಯಶಸ್ವಿನಿ ಅವರೇ ಆಡ್ಕೊಂಡವರ ಬಾಯಿಗೆ ತುತ್ತಾಗಬಾರದು. ಅದೇ ನೀವು ಸೀರೆ ಉಟ್ಟು ಡಾನ್ಸ್ ಮಾಡಿ ನೋಡಿ. ರೆಸ್ಪಾನ್ಸ್ ಹೆಂಗಿರುತ್ತೆ ಅಂಥ. ಚಿಕ್ಕ ಚಿಕ್ಕ ಬಟ್ಟೆ ಹಾಕ್ಕೊಂಡು ಪಬ್ಲಿಕ್ ಮೀಡಿಯಾದಲ್ಲಿ ಇದೆಲ್ಲಾ ತುಂಬಾ ಜನ ನೋಡತಾರೆ. ಎಲ್ಲರ ಯೋಚನೆನೂ ಒಂದೇ ತರ ಇರಲ್ಲ ಅಲ್ವಾ. ನಿಮಗೆ ಅದೆಲ್ಲಾ ಇಷ್ಟ ಅಂದ್ರೆ ಫ್ಯಾಮಿಲಿ ಗ್ರೂಪ್‌ನಲ್ಲಿ ಫ್ರೆಂಡ್ಸ್ ಗ್ರೂಪ್‌ನಲ್ಲಿ ಹಾಕಿ. ಯಾಕಂದ್ರೆ ಕೆಲವೊಂದ್ಸಲ ನಾವು ಮಾಡೋ ಗೊತ್ತಿಲ್ಲದ ತಪ್ಪಿಗೆ ಮನೆಯವರಿಗೂ ಮಾತು ಬರುತ್ತೆ. ಗಂಡದ್ರು ತಲೆ ಎತ್ತಿ ನಡಿಬೇಕಾದ್ರೆ ನಾವು ಕೆಲವೊಂದ್ಸಲ ತಲೆ ಬಗ್ಸೋದು ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ ಎಂದು ಸಲಹೆ ನೀಡುತ್ತಲೇ ಇದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.