ಮುದ್ದಾದ ಶಿಲ್ಪಾ ಶೆಟ್ಟಿ ಬಾಳಲ್ಲಿ ಬಿರುಗಾಳಿ, ಇಬ್ಬರ ಮಧ್ಯೆ ರಾತ್ರೋರಾತ್ರಿ ಏನಾಯಿತು ಗೊ.ತ್ತಾ

 | 
ರಪಬ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ಉದ್ಯಮಿ ರಾಜ್ ಕುಂದ್ರಾ ನಡುವಿನ ವೈವಾಹಿಕ ಜೀವನ ಬಿರುಕು ಕಂಡಿದೆ. ಏಕೆಂದರೆ ರಾಜ್ ಕುಂದ್ರಾ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಮಾಡಿರುವ ಫೋಸ್ಟ್ ಇಂತಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ನಾವಿಬ್ಬರು ಬೇರ್ಪಟ್ಟಿದ್ದೇವೆ ಮತ್ತು ಈ ಕಷ್ಟದ ಅವಧಿಯಲ್ಲಿ ನಮಗೆ ಸಮಯ ನೀಡುವಂತೆ ದಯವಿಟ್ಟು ವಿನಂತಿಸುತ್ತೇವೆ ಎಂದು ಬರೆದಿದ್ದಾರೆ. 

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ 2009ರಲ್ಲಿ ವಿವಾಹವಾಗಿದ್ದರು. ಅವರಿಗೆ ವಿಯಾನ್ ಮತ್ತು ಸಮೀಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಶಿಲ್ಪಾ ಶೆಟ್ಟಿಗೆ ರಾಜ್ ಕುಂದ್ರಾ ಅಧಿಕೃತವಾಗಿ ವಿವಾಹ ವಿಚ್ಛೇಧನ ನೀಡಿದ್ದಾರೆಯೇ ಎಂಬುದು ದೃಢಪಟ್ಟಿಲ್ಲ. ಆದರೆ ಇಬ್ಬರು ನಡುವಿನ ಸಂಬಂಧ ಹಲವು ವರ್ಷಗಳಿಂದ ನಾನೊಂದು ತೀರ, ನೀನೊಂದು ತೀರ ಎಂಬಂತಿತ್ತು.

ಇದಕ್ಕೆ ಪುಷ್ಟಿ ನೀಡುವಂತೆ ಅವರು ಮಾಡಿರುವ ಪೋಸ್ಟ್ ವಿಚ್ಛೇಧನಕ್ಕೆ ಇಂಬು ಕೊಡುವಂತಿದೆ. ಆದರೆ ರಾಜ್‍ಕುಂದ್ರಾ ಪೋಸ್ಟ್‍ಗೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸಾಮಾಜಿಕ ಮಾಧ್ಯಮದ ಒಂದು ಸಣ್ಣ ವಿಭಾಗವು ಅವರ ಬಯೋಪಿಕ್ ಯುಟಿ 69ರ ಬಿಡುಗಡೆಗೆ ಮುಂಚಿತವಾಗಿ ಇದನ್ನು ಪ್ರಚಾರದ ಗಿಮಿಕ್ ಎಂದು ಕರೆದಿದೆ.

ಮತ್ತೊಬ್ಬ ನೆಟ್ಟಿಗ ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಬೇರ್ಪಟ್ಟು ಎಂದರೆ ವಿಚ್ಛೇದನವೇ ಎಂದು ಪ್ರಶ್ನಿಸಿದ್ದಾರೆ. ಇತ್ತೀಚೆಗೆ, ರಾಜ್ ಕುಂದ್ರಾ ಅವರು ತಮ್ಮ ಜೀವನಚರಿತ್ರೆ ಯುಟಿ 69ರ ಟ್ರೈಲರ್ ಬಿಡುಗಡೆಯಲ್ಲಿ ಪೋರ್ನ್ ಹಗರಣದಲ್ಲಿ ಜೈಲಿನಲ್ಲಿದ್ದ ಸಮಯದ ಬಗ್ಗೆ ಮೌನ ಮುರಿದಿದ್ದರು. ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆಪ್‍ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ರಾಜ್ ಕುಂದ್ರಾರನ್ನು ಪೊಲೀಸರು ಬಂಧಿಸಿದ್ದರು.

ಅಶ್ಲೀಲ ಚಿತ್ರಗಳನ್ನು ತಯಾರಿಸಿ, ಅವುಗಳನ್ನು ವಿವಿಧ ಆಪ್‍ಗಳ ಮೂಲಕ ರಿಲೀಸ್ ಮಾಡುತ್ತಿದ್ದಾರೆ ಎಂದು ಫೆಬ್ರವರಿಯಲ್ಲೇ ಕ್ರೈಮ್ ಬ್ರ್ಯಾಂಚ್‍ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳ ನಿರ್ಮಾಣದ ಪ್ರಮುಖ ಆರೋಪಿ ರಾಜ್ ಕುಂದ್ರಾ ಅವರೇ ಆಗಿದ್ದಾರೆ. ಸದ್ಯ ಅವರನ್ನು ಬಂಸಿದ್ದೇವೆ ಎಂದು ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಹೇಳಿದ್ದರು. ಸದ್ಯ ರಾಜ್ ಕುಂದ್ರಾ ಮೇಲೆ ಇಂಥದ್ದೊಂದು ಆರೋಪ ಬಂದಿರುವುದು ಚಿತ್ರರಂಗದಲ್ಲಿ ದೊಡ್ಡ ಸಂಚಲವನ್ನು ಉಂಟು ಮಾಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.