ನೆಚ್ಚಿನ ಗೆಳತಿ ಬಳಿ ಮೋಸ‌ ಹೋದ‌ ಬಗ್ಗೆ ಬಹಿರಂಗವಾಗಿ ಹಂಚಿಕೊಂಡ ಸಿಂಗರ್ ಪೃಥ್ವಿ ಭಟ್

 | 
Jjb

ಕನ್ನಡ ವಾಹಿನಿಯ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿದ್ದ, ಯುವ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧದ ನಡುವೆ ಪ್ರೇಮವಿವಾಹ ಆಗಿದ್ದಾರೆ.ಜೀ ವಾಹಿನಿಯಲ್ಲೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎನ್ನುವವರ ಜೊತೆ ಮಾರ್ಚ್ 27ರಂದು ವಿವಾಹವಾಗಿದ್ದು, ಇಪ್ಪತ್ತು ದಿನಗಳ ನಂತರ ಗಾಯಕಿಯ ತಂದೆ ಆಕ್ರೋಶ ಹೊರಹಾಕಿದ್ದಾರೆ.

ನನ್ನ ಮಗಳಿಗೆ ಹವ್ಯಕ ಹುಡುಗನನ್ನೇ ಹುಡುಕಿ ಮದುವೆ ಮಾಡುವ ಕನಸು ಹೊತ್ತಿದ್ದೆ. ಈ ವಿಷಯವನ್ನು ಜೀ ಕನ್ನಡವಾಹಿನಿಯ ಸರಿಗಮಪ ಶೋನಲ್ಲಿ ಜ್ಯೂರಿಯಾಗಿರೋ ಸಂಗೀತ ಶಿಕ್ಷಕ ನರಹರಿ ದೀಕ್ಷಿತ್ ಎನ್ನುವವರಿಗೆ ತಿಳಿಸಿದ್ದೆ. ಅವರು ಪೃಥ್ವಿ ಭಟ್ ಪ್ರೇಮಿಸುತ್ತಿರುವ ಹುಡುಗನ ಬಗ್ಗೆ ತಿಳಿಸಿದ್ದರು. ನಾನು ನನ್ನ ಮಗಳನ್ನು ಕೇಳಿದಾಗ, ನೀವು ತೋರಿಸಿದ ಹುಡುಗನ ಜೊತೆಯೇ ಮದುವೆ ಆಗುತ್ತೇನೆ ಅಂತ ದೇವರ ಮೇಲೆ ಪ್ರಮಾಣ ಮಾಡಿದ್ದಳು. ಆದರೆ ಹೀಗೆ ಮಾಡಿದಳು ಎಂದಿದ್ದಾರೆ.
ಇನ್ನು ಆದರೆ ಈ ಬಗ್ಗೆ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದಾರೆ. ಹಾಯ್​ ಅಪ್ಪಾ. ಸಾರಿ ನೀವು ಆಲ್​ರೆಡಿ ಎರಡು ದಿನದಿಂದ ಹವ್ಯಕ ಗ್ರುಪ್​ಲ್ಲಿ ಮತ್ತೆ ಬೇರೆ ಬೇರೆ ಗ್ರುಪ್​ಲ್ಲಿ ನರಹರಿ ದೀಕ್ಷಿತ್​ ಸರ್​ ಬಗ್ಗೆ ಮತ್ತೆ ನನ್ನ ಬಗ್ಗೆ ಆಡಿಯೋ ಮೆಸೇಜ್​ ಎಲ್ಲಾ ಕಳಿಸುತ್ತಿದ್ದಿ. ಈ ವಿಷಯದಲ್ಲಿ ನರಹರಿ ದೀಕ್ಷಿತ್​ರದ್ದು ಏನೂ ತಪ್ಪಿಲ್ಲ. ನಾನು ಮೊದಲು ಹೇಳ್ದಂಗೆ, ಈಗಲೂ ಹೇಳ್ತಿದ್ದೀನಿ, ದೀಕ್ಷಿತ್​ ಸರ್​ದು ಎಂಥದ್ದು ತಪ್ಪಿಲ್ಲ. ಮಾರ್ಚ್​ 7ಕ್ಕೆ ದೀಕ್ಷಿತ್​ ಸರ್​ ಮನೆಗೆ ಬಂದಿದ್ದು, ಈ ವಿಷಯ ಬಗ್ಗೆ ಮಾತ್ನಾಡಿದ್ರು.
ಆಗ ನಾನು ಅವರ ಎದುರೇ ಮತ್ತೆ ನಿಮ್ಮಗಳ ಎದುರೇ ನನಗೆ ಅಭಿ ಇಷ್ಟ ಅಂತನೇ ಹೇಳಿದ್ದು. ಅವತ್ತು ನಿಮ್ಮ ಮೇಲಿನ ಭಯಕ್ಕೆ ನಾನು ಸುಮ್ಮನಾದೆ, ಆದರೆ ನನ್ನ ಮನಸಿನಲ್ಲಿ ಅಭಿ ಇದ್ದರು- ಪೃಥ್ವಿ ಭಟ್​​, ಯುವ ಗಾಯಕಿ. ಶಿವಪ್ರಸಾದ್​​​ರ ಆಡಿಯೋ ವೈರಲ್ ಆಗ್ತಿದ್ದಂತೆ ಪೃಥ್ವಿ ಭಟ್​ರದ್ದು ಎನ್ನಲಾದ ಆಡಿಯೋ ಹರಿದಾಡ್ತಿದೆ.. ತಂದೆಯ ಆರೋಪಕ್ಕೆ ಮಗಳು ಕೂಡ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇನ್ನು ಆಂಕರ್ ಪ್ರಿಯಾ ಎನ್ನುವವರು ಕೂಡ ಪ್ರಥ್ವಿ ಒಳ್ಳೆಯ ಹುಡುಗಿ ಅವಳಿಗೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub