ಸಮಾಜ ಸೇವಕಿ ಅಕ್ಕ ಅನು ಲೈವ್ ಬಂದು ಕಣ್ಣೀರು; ತನಗಾದ ಅ.ನ್ಯಾಯದ ಬಗ್ಗೆ ಮೌನ ಮುರಿದಿದ್ದಾರೆ

 | 
ಹಹಗ

ತಮ್ಮ ವಿಶಿಷ್ಟ ಸಮಾಜ ಸೇವೆಯ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದಾರೆ ಅಕ್ಕ ಅನು. ತಮ್ಮದೇ ಆದ ತಂಡ ಕಟ್ಟಿಕೊಂಡು, ರಾಜ್ಯದಲ್ಲಿನ ನೂರಾರು ಸರ್ಕಾರಿ ಶಾಲೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಅಂದಗಾಣಿಸುವ ಕೆಲಸ ಮಾಡುತ್ತಿದ್ದಾರೆ ಅಕ್ಕ ಅನು. ಕಳೆದ ನಾಲ್ಕು ವರ್ಷಗಳಿಂದ ಈ ಕೆಲಸ ಮಾಡುತ್ತಲೇ ಬಂದ ಅಕ್ಕ ಅನುಗೆ ಈಗಾಗಲೇ ಸಂಘ ಸಂಸ್ಥೆಗಳಿಂದ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳೂ ಸಂದಿವೆ.

ಈಗ ಈ ನಿಸ್ವಾರ್ಥ ಸೇವೆಗೆ ಜೀ ಕನ್ನಡದಿಂದಲೂ ಸ್ತ್ರೀ ಅವಾರ್ಡ್‌ ಸಿಕ್ಕಿದೆ. ಇದೇ ವೇಳೆ ತಮ್ಮ ಈ ಪಯಣದ ಬಗ್ಗೆಯೂ ಮಾತನಾಡಿದ್ದಾರೆ ಅಕ್ಕ ಅನು.ಆಸೆಯೇ ದುಃಖಕ್ಕೆ ಮೂಲ ಎಂಬ ಮಾತಿನ ವ್ಯಾಖ್ಯಾನ ನೀಡಿದ ಅಕ್ಕ ಅನು, ನಾವು ಜಾಸ್ತಿ ಆಸೆಗಳನ್ನು ಇಟ್ಟುಕೊಂಡಾಗ, ಅದು ಕಷ್ಟದ ರೀತಿ ಫೀಲ್‌ ಆಗುತ್ತೆ. ನಾವಿಷ್ಟೇ, ನಾರ್ಮಲ್‌ ಜನ ಹೇಗಿದ್ದಾರೋ ನಾವೂ ಹಾಗೇ ಎಂದು ಅಂದುಕೊಳ್ಳಬೇಕು. ಅದನ್ನು ಬಿಟ್ಟು ನಮಗಿಂತ ದೊಡ್ಡವರಿಗೆ ಹೋಲಿಕೆ ಮಾಡಿಕೊಂಡರೆ, ಅನಾರೋಗ್ಯಕ್ಕೂ ತುತ್ತಾಗ್ತೀವಿ. ಇದ್ದಿದ್ದರಲ್ಲಿಯೇ ಬದುಕಬೇಕು. 

ಸ್ವಾರ್ಥ ನಿಸ್ವಾರ್ಥ ಎಂಬುದು ಸುಳಿಯಲ್ಲ, ಆಗ ಖುಷಿಯಾಗಿ ಇರ್ತೀವಿ ಎಂದಿದ್ದಾರೆ. ಈ ರೀತಿಯ ಪ್ರಶಸ್ತಿ ಪಡೆಯುವುದರಿಂದ ನನ್ನ ತಂಡವೂ ಮುನ್ನೆಲೆಗೆ ಬರಲಿದೆ ಎನ್ನುವ ಅವರು, ನಾನು ಈ ರೀತಿ ಮುಂದೆ ಬಂದು ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ ಎಂದರೆ, ನನ್ನ ತಂಡದವರೂ ಈ ಮೂಲಕ ನಾಡಿಗೆ ಪರಿಚಯವಾಗ್ತಾರೆ. ಇನ್ನೊಂದು ವಿಷಯ ಏನೆಂದರೆ, ನಾನು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದ, ನಾನು ಜನಗಳಿಗೆ ಗೊತ್ತಾಗಲೇ ಬೇಕು. ಕೆಲವರು ಹೇಳ್ತಾರೆ, ಒಂದು ಕೈಯಿಂದ ಮಾಡಿದ್ದು, ಇನ್ನೊಂದಕ್ಕೆ ಗೊತ್ತಾಗಬಾರದು ಅಂತ. ಆದರೆ, ನಾನಿಲ್ಲಿ ಯಾರಿಗೂ ದುಡ್ಡು ಕೊಡ್ತಿಲ್ಲವಲ್ಲ ಎಂದು ಟೀಕೆ ಮಾಡಿವರಿಗೆ ತಿವಿದಿದ್ದಾರೆ.

ನಾನು ಮಾಡಿದ್ದನ್ನು ಹೇಳಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಅಕ್ಕ ಅನು, ನಾನೂ ಸುಮಾರು ಸೇವೆಗಳನ್ನು ಮಾಡಿದ್ದೇನೆ. ಕ್ಯಾಮರಾ ಮುಂದೆ ತೋರಿಸಿಕೊಳ್ಳದಂತ ಸಾಕಷ್ಟು ಕೆಲಸ ಮಾಡಿದ್ದೇನೆ. ಹಾಗಂತ ಊಟ ಇಲ್ಲದವರಿಗೆ ಊಟ ಕೊಟ್ಟಿದ್ದನ್ನು ನಾನು ಕ್ಯಾಮರಾ ಮುಂದೆ ತೋರಿಸಿಲ್ಲ. ರಾತ್ರಿಯೆಲ್ಲ ಶಾಲೆಗೆ ಬಣ್ಣ ಹಚ್ಚಿದರೂ ಬೆಳಗ್ಗೆದ್ದು ಅನು ಅಕ್ಕ ಹಚ್ಚಿದಾಳೆ ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ. ನಾನು ಹೀಗೆ ವಿಡಿಯೋ ಮಾಡುವುದರ ಉದ್ದೇಶ, ಇದು ಇನ್ನೊಬ್ಬರಿಗೂ ಸ್ಫೂರ್ತಿಯಾಗಲೆಂದು ಎಂದಿದ್ದಾರೆ. 

ಆದರೆ, ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ಇನ್ನೊಬ್ಬರ ಮನಸ್ಥಿತಿಯನ್ನು ಹಾಳು ಮಾಡಬೇಡಿ ಎಂದು ಗಳಗಳನೇ ಅಳುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.