ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ಸೋನಲ್ ಹಾಗೂ ತರುಣ್; ಇಷ್ಟು ಬೇಗ ಹೇಗೆ‌ ಸಾಧ್ಯವೆಂದ ನೆಟ್ಟಿಗರು

 | 
Hj

 ಬೆಂಗಳೂರು; ತರುಣ್ ಹಾಗೂ ಸೋನಲಲ್ ಅವರು ಮದುವೆಯಾಗಿ ಎರಡು ತಿಂಗಳು ಕಳೆದಿದೆ ಅಷ್ಟೆ, ಅಷ್ಟರಲ್ಲೇ ಸಿಹಿಸುದ್ದಿಯೊಂದು ಕನ್ನಡಿಗರಿಗೆ ನೀಡಿದ್ದಾರೆ. ಹೌದು ಕ್ರೈಸ್ತ ಧರ್ಮದ ಸೋನಲ ಅವರು ಹಿಂದೂ ಧರ್ಮದ ತರುಣ್ ಜೊತೆ ಮದುವೆ ಆಗಿದಲ್ಲದೆ, ಜಾತಿ ಭೇದ ಮತ ಇಲ್ಲವೆಂದು ಮತ್ತೊಮ್ಮೆ ಸಾಭೀತು ಮಾಡಿದ್ದಾರೆ. 

ಸೋನಲ್ ಹಾಗೂ ತರುಣ್ ನಡುವೆ ಸಂಬಂಧ ಬೆಳೆಯಲು ಮೂಲ ಕಾರಣ ನಟ ದರ್ಶನ್. ದರ್ಶನ್ ಅವರ ಮನೆಗೆ ಸೋನಲ್‌ ಹಾಗೂ ತರುಣ್ ಬಂದಾಗ ನಟ ದರ್ಶನ್ ಅವರು ಈ ಇಬ್ಬರ ನಡುವೆ ಪ್ರೀತಿ ಉಂಟಾಗಲು ಮುಖ್ಯ ಕಾರಣರಾಗಿದ್ದಾರೆ. 

ಜೊತೆಗೆ ಸೋನಲ್ ಅವರು ತರುಣ್ ಅವರನ್ನು ಒಬ್ಬ ನಿರ್ಮಾಪಕನಾಗಿ ಮಾತ್ರ ನೋಡುತ್ತಿದ್ದರಂತೆ, ಆದರೆ ತರುಣ್ ಅವರು ಸೋನಲ್ ಮೇಲೆ ಪ್ರೀತಿಯ ಬಲೆ ಹಾಕಿದ್ದರು. ಈ ವೇಳೆ ನಟ ದರ್ಶನ್ ಅವರು ಸೋನಲ್ ಬಳಿ ತರುಣ್ ಪ್ರೀತಿಯ ವಿಚಾರ ಹೇಳಿಕೊಂಡಿದ್ದಾರೆ. ನಂತರದಲ್ಲಿ ಈ ಇಬ್ಬರಿಗೂ ಮದುವೆ ಭಾಗ್ಯ ಒಳಿದು ಬಂತು. 

ಇನ್ನು ಸೋನಲ್‌ ಹಾಗೂ ತರುಣ್ ಮದುವೆಯಾದ ಬಳಿಕ ಸಿಹಿಸುದ್ದಿ ಕೊಟ್ಟಿದ್ದಾರೆ. ತರುಣ್ ಅವರು ನಿರ್ಮಾಣದ ಮುಂದಿನ ಸಿನಿಮಾದಲ್ಲಿ ಸೋನಲ್‌ ಅವರು ನಟಿಸಲಿದ್ದು. ಈ ಸಿನಿಮಾಗೆ ತನ್ನ ಪತ್ನಿಯನ್ನೇ ಮುಖ್ಯ ಪಾತ್ರದಲ್ಲಿ ನಟಿಸಲು ತರುಣ್ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.