ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಸೋನಲ್; ಕ್ರಿಶ್ಚಿಯನ್ ಆದರೂ ಹಿಂದೂತ್ವ ಒಲವು

ಕಳೆದ ಎರಡು ತಿಂಗಳಿನಿಂದ ವಿಚ್ಛೇದನ, ಜೈಲು ಶಿಕ್ಷೆ ಇಂತಹದೇ ಸುದ್ದಿ ಕೇಳಿಬರುತ್ತಿದ್ದ ಸ್ಯಾಂಡಲ್ ವುಡ್ ಇಂದ ಸಿಹಿ ಸುದ್ದಿ ಸಿಕ್ಕಿದೆ. ಸ್ಯಾಂಡಲ್‌ವುಡ್‌ನ ಇಬ್ಬರು ಪ್ರೇಮಿಗಳು ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಬ್ಲಾಕ್ ಬಸ್ಟರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂಥೆರೋ ಇದೇ ಆಗಸ್ಟ್ 11ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಜೋಡಿ ಮನೆಯವರ ಆಶೀರ್ವಾದ ಪಡೆದು ವಿವಾಹವಾಗಲು ನಿರ್ಧರಿದ್ದಾರೆ.
ಸೋನಾಲ್ ಮಾಂಥೆರೋ ಹೆಚ್ಚಾಗಿ ಯಾವುದೇ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಸಿನಿಮಾ ಪ್ರಚಾರವಿದ್ದಾಗ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗುತ್ತಾರೆ ಈ ಕಾರಣಕ್ಕೆ ಸೋನಾಲ್ ಮಾಂಥೆರೋ ತಮ್ಮ ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಎಲ್ಲೂ ಕೇಳಿ ಬಂದಿಲ್ಲ. ಈ ನಟಿ ತಂದೆ ಕೂಡ ಒಬ್ಬ ಒಳ್ಳೆಯ ಹಾಡುಗಾರ. ಇಬ್ಬರು ಅಕ್ಕಂದಿರು ಕೂಡ ನ್ಯಾಷನಲ್ ಲೆವೆಲ್ ಸಿಂಗರ್ ಅನ್ನೋದು ನಿಮಗೆ ಗೊತ್ತಿರಲಿಕ್ಕಿಲ್ಲ.
ಸೋನಾಲ್ ಮಾಂಥೆರೋ ಮಂಗಳೂರು ಮೂಲದವರು. ಅಲ್ಲೇ ಬೆಳೆದು ಬಳಿಕ ಸಿನಿಮಾಗಾಗಿ ಬೆಂಗಳೂರಿಗೆ ಬಂದು ನೆಲೆಸುವುದಕ್ಕೆ ಶುರು ಮಾಡಿದ್ದರು. ಸೋನಾಲ್ ಮಾಂಥೆರೋ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದವರಲ್ಲ. ಅವರ ಮನೆಯಲ್ಲಿರು ಸದಸ್ಯರಿಗೆ ಕಲೆಯ ಮೇಲೆ ಆಸಕ್ತಿ ಇತ್ತು. ತಂದೆ ಕೂಡ ಉತ್ತಮ ಗಾಯಕರಾಗಿದ್ದರು. ಆದರೆ, ದುರಾದೃಷ್ಟವಶಾತ್ ಸೋನಾಲ್ 3ನೇ ತರಗತಿ ಓದುತ್ತಿರುವಾಗಲೇ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದರು.
ಇಲ್ಲಿಂದ ಸೋನಾಲ್ ಮಾಂಥೆರೋ ಅವರದ್ದು ಹೆಣ್ಣು ಮಕ್ಕಳ ಕುಟುಂಬ ಆಗೋಯ್ತು. ಸೋನಾಲ್ ಮಾಂಥೆರೋಗೆ ಇಬ್ಬರು ಅಕ್ಕಂದಿರು ಇದ್ದಾರೆ. ಅವರಿಬ್ಬರೂ ಅವಳಿ ಜವಳಿ ಅಕ್ಕಂದಿರು. ತಂದೆ ಅಗಲಿದ ಬಳಿಕ ತಾಯಿಯೇ ಸಂಸಾರದ ಹೊರೆಯನ್ನು ಹೊತ್ತುಕೊಂಡಿದ್ದರು. ಹೀಗಾಗಿ ಮನೆಯಲ್ಲಿ ಮಹಿಳೆಯರದ್ದೇ ಪವರ್. ಅದರಲ್ಲೂ ಅಕ್ಕಂದಿರಿಬ್ಬರೂ ನ್ಯಾಷನಲ್ ಲೆವೆಲ್ ಸಿಂಗರ್ ಎಂದು ಸಂದರ್ಶನವೊಂದರಲ್ಲಿ ಸೋನಾಲ್ ಮಾಂಥೆರೋ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಸೋನಾಲ್ ಮಾಂಥೆರೋ ಒಬ್ಬರು ಅಕ್ಕ ದುಬೈನಲ್ಲಿ ನೆಲೆಸಿದ್ದಾರೆ. ಇನ್ನೊಂದು ಬೆಂಗಳೂರಿನಲ್ಲಿ ಇದ್ದಾರೆ. ಮಗಳು ಸ್ವತಂತ್ರವಾಗಿ ಬೆಳೆಯಬೇಕು ಅನ್ನೋದು ತಾಯಿ ಆಸೆಯಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಮಗಳನ್ನು ಮನೆ ಮಾಡಿ ಬಿಟ್ಟು ಹೋಗಿದ್ದರು. ಒಬ್ಬಳೇ ಬದುಕುವುದನ್ನು ಕಲಿಯಬೇಕು ಅಂತ ಬಯಸಿದ್ದರು. ಆ ಕಾರಣಕ್ಕೆ ತಾನೇ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ. ಅಡುಗೆ, ಮನೆ ಕೆಲಸ ಎಲ್ಲವನ್ನೂ ಅವರೇ ಮಾಡಿಕೊಳ್ಳುವ ಸರಳ ವ್ಯಕ್ತಿತ್ವದ ಹೆಣ್ಣು ಮಗಳು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.