ಸೌಜನ್ಯ ಪ್ರಕರಣ SIT ಯಿಂದ ಮರು ತನಿಖೆ? ಸಂತೋಷ್ ರಾವ್ ಪ್ರಭಾವಿನಾ

 | 
ಕಿ

 ಹನ್ನೊಂದು ವರ್ಷಗಳ ಬಳಿಕ ರಾಜದಲ್ಲಿ ತೀವ್ರ ಸದ್ದು ಮಾಡುತ್ತಿರುವ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆ ಮಾಡಬೇಕೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಸೌಜನ್ಯಾ ಪಾಲಕರು ಹಾಗೂ ಹೋರಾಟಗಾರ ಮಹೇಶ್ ತಿಮರೋಡಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.

ಬೆಂಗಳೂರಿನಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಜೊತೆಗೂಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾದ ಹರೀಶ್ ಪೂಂಜಾ, ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಿ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷೆ ನೀಡಬೇಕೆಂದು ಮನವಿ ಮಾಡಿದ್ದರು.

ಇನ್ನು ಸಿಎಂ ಸಿದ್ದರಾಮಯ್ಯ ಅವರ ಬಳಿ ವಿವಿಧ ಸಂಘಟನೆಯವರೂ ಕೇಸ್ ಮರು ತನಿಖೆಗೆ ಆಗ್ರಹಿಸಿ ಮನವಿ ಮಾಡಿದ್ದು ಈ ಬಗ್ಗೆ ಸಿಎಂ ಅವರು ಕೂಡ ಮಾತಾಡಿದ್ದಾರೆ. ಮರು ತನಿಖೆ ಮಾಡಲು SIT ಸಮಿತಿ ರಚನೆ ಮಾಡುವ ಬೇಡಿಕೆ ಮುಂದಿಟ್ಟಿದ್ದು ಈಗಾಗಲೇ 20ಕ್ಕೂ ಹೆಚ್ಚು ಸಂಘಟನೆ ಅವರು ಹೋರಾಟ ಕೂಡ ಮಾಡಿದ್ದಾರೆ. ಹಾಗಾಗಿ ಸಿಎಂ ಅವರು ಈ ಒಂದು ಪ್ರಕರಣದ ಬಗ್ಗೆ ಮಾತಾಡಿದ್ದಾರೆ. ಸೌಜನ್ಯಾ ಪ್ರಕರಣ ಮರು ತನಿಖೆ ಬೇಡಿಕೆಯ ಮನವಿ ಬಂದಿದೆ ಹಾಗಾಗಿ ಈ ಬಗ್ಗೆ ಅನೇಕ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಇನ್ನು ಬಡ ಕುಟುಂಬದಿಂದ ಬಂದ ನಿರಪರಾಧಿ ಆಗಿದ್ದರೂ ಶಿಕ್ಷೆ ಅನುಭವಿಸಿದ ಸಂತೋಷ್ ರಾವ್ ಅವರಿಗೆ ಕೂಡ ಇದರಿಂದ ನ್ಯಾಯ ದೊರಕುತ್ತದೆ ಎಂದು ಎಲ್ಲರೂ ವಿನಂತಿಸಿದ್ದಾರೆ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.