ದೊಡ್ಡವರು ಅಂತ ನೋಡದೆ ಆರೋಪಿ ಯಾರೆಂದು ಸತ್ಯ ಬಿಚ್ಚಿಟ್ಟ ಸೌಜನ್ಯ ತಾಯಿ

 | 
Bd

ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್‌ 10 ರಂದುಸ ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ‌ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. 

ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಈಗ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಆದರೆ ಅದನ್ನು ಈ ಹಿಂದಿನಿಂದ ಸೌಜನ್ಯಾ ತಂದೆ ತಾಯಿ ಹೇಳುತ್ತಲೇ ಬಂದಿದ್ದಾರೆ.
ವೀರೇಂದ್ರ ಹೆಗ್ಗಡೆಯ ತಮ್ಮನ ಮಗ ನಿಶ್ಚಲ್ ಹೆಗ್ಡೆ, ಅನ್ನಪೂರ್ಣ ಛತ್ರದ ಮ್ಯಾನೇಜರ್ ಮಗ ಧೀರಜ್ ಜೈನ್, ವೀರೇಂದ್ರ ಹೆಗ್ಗಡೆಯ ಮನೆಯಲ್ಲಿ ಕೆಲಸ ಮಾಡುವವರ ಮಗ ಮಲ್ಲಿಕ್ ಜೈನ್ ಮತ್ತು ಉದಯ್ ಜೈನ್ ಮೇಲೆ ಸೌಜನ್ಯಳ ತಂದೆ ತಾಯಿಗಳು ನೇರ ಆರೋಪ ಮಾಡಿದ್ದರು. 

ತಮ್ಮ ಮಗಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈಯ್ದಿರುವುದು ಈ ನಾಲ್ವರೇ ಹೊರತು ಸಂತೋಷ್ ರಾವ್‌ ಅಲ್ಲ ಎಂಬುದು ಅವರ ಆರೋಪ. ವಿಶೇಷವೆಂದರೆ ಸೌಜನ್ಯಳ ಹತ್ಯೆ ಮಾಡಿದ ಆರೋಪದಡಿಯಲ್ಲಿ ಬಂಧಿಸಲಾದ ಸಂತೋಷ ನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದು ಈ ನಾಲ್ವರೇ! ಈ ಆರೋಪಗಳನ್ನು ಸೌಜನ್ಯಳ ತಂದೆ ತಾಯಿ ಮತ್ತು ಅನೇಕ ಸಂಘಟನೆಯವರು ಘಟನೆ ನಡೆದ ದಿನದಿಂದ ಹೇಳುತ್ತಲೇ ಬಂದಿದ್ದಾರಾದರೂ ಆ ಸುದ್ದಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯ ಕುಟುಂಬಸ್ಥರ ಕಡೆಗೆ ಬೆರಳು ತೋರುತ್ತಿತ್ತಾದ್ದರಿಂದ ಅದು ದಕ್ಷಿಣ ಕನ್ನಡದ ವ್ಯಾಪ್ತಿಯನ್ನು ಬಿಟ್ಟು ಹೊರಬಂದಿದ್ದು ಕಡಿಮೆ.

2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಬರುತ್ತಿದ್ದಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು. ಶಂಕಿತ ಆರೋಪಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವಳ ಬಳಿ ಇದ್ದ ಕೊಡೆ ಹಾಗೂ ಅವಳ ಒಳಉಡುಪುಗಳು ಕೊನೆಯ ವರೆಗೂ ಬಹಿರಂಗ ವಾಗಲೇ ಇಲ್ಲ. ಅವಳ ಪೋಸ್ಟ್ ಮಾರ್ಟ್ ಕೂಡ ಸರಿಯಾಗಿ ನಡೆದೇ ಇಲ್ಲ ಎಂದು ಸೌಜನ್ಯಾ ತಾಯಿ ಕಣ್ಣೀರು ಹಾಕುತ್ತ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.