ಆ ಇಬ್ಬರು ದೊಡ್ಡ ವ್ಯಕ್ತಿಗಳ ಹೆಸರು ಹೇಳಿ ಸಿಡಿದೆದ್ದ ಸೌಜನ್ಯ ತಾಯಿ, ನಂತರ ಆಗಿದ್ದೇನು ಗೊತ್ತಾ

 | 
ಲಿ

 ಹನ್ನೊಂದು ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ ಇದೀಗ ಮುಂಜುನಾಥನ ಸನ್ನಿಧಿ ಬಳಿಯಲ್ಲಿರುವ ಅಣ್ಣಪ್ಪನ ಬೆಟ್ಟದವರೆಗೆ ಹೋಗಿದೆ.

ಹೌದು. ಸೌಜನ್ಯ ತಾಯಿ ಹಾಗೂ ಆರೋಪ ಹೊತ್ತವರು ಕೂಡ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮೊದಲು ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗಳ ಕಾರ್ಯಕರ್ತರು ಪಾದಯಾತ್ರೆ ನಡೆಸಿದ್ದಾರೆ. ಈ ಪಾದಯಾತ್ರೆಯಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಸೌಜನ್ಯ ತಾಯಿ ಕುಸುಮಾವತಿ ಕೂಡ ಸೇರಿಕೊಂಡಿದ್ದಾರೆ. ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಮಾಡಿ, ನಂತರ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗಕ್ಕೆ ತೆರಳಿದೆ.

ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಕಣ್ಣೀರಿಟ್ಟ ಸೌಜನ್ಯ ತಾಯಿ ಕುಸುಮಾವತಿ, ಅಣ್ಣಪ್ಪನಿಗೆ ನಾಣ್ಯ ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ವಿಹಿಂಪ, ಬಜರಂಗಳ ಮುಖಂಡರ ಜೊತೆಗೂಡಿ ನೈಜ ಆರೋಪಿಗಳ ಪತ್ತೆ ಮಾಡಿಕೊಡುವಂತೆ ಅಣ್ಣಪ್ಪನಲ್ಲಿ ಬೇಡಿಕೊಂಡರು. ಅಲ್ಲದೆ ಮಲ್ಲಿಕ್ ಹಾಗೂ ಉದಯ್ ಜೈನ್ ವಿರುದ್ಧ ಕಿಡಿಕಾರಿದರು. ಹಾಗೂ ಪ್ರಧಾನಿ ಮೋದಿ ಅವರ ಬಳಿ ನನ್ನನ್ನು ಕರೆದುಕೊಂಡು ಹೋಗಿ ನಾನು ಅವರಿಗೆ ನನ್ನ ದುಃಖವನ್ನು ಹೇಳುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ.

ಕುಸುಮಾವತಿ ಅವರ ಮಾತುಗಳ ಬಳಿಕ ಸೌಜನ್ಯ ತಾಯಿ ಆರೋಪಿಸಿದವರು ಕೂಡ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ. ಮಲ್ಲಿಕ್ ಜೈನ್, ಉದಯ್ ಜೈನ್ ಹಾಗೂ ಧೀರಜ್ ಜೈನ್ ಕೂಡ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಂದು, ಈ ಪ್ರಕರಣದಲ್ಲಿ ನಮ್ಮ ಯಾವುದೇ ಪಾತ್ರ ಇಲ್ಲ. ನಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ ಎಂದು ಕೈಮುಗಿದಿದ್ದಾರೆ.

ಒಟ್ಟಿನಲ್ಲಿ ಸಾವಿರಾರು ಜನರ ಮುಂಭಾಗ ಇಂದು ಎರಡೂ ಕಡೆಯವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿತ್ತು. ಸೌಜನ್ಯ ತಾಯಿ ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಬರುವಾಗ ಗೊಂದಲ ಆಗದಂತೆ ಕ್ರಮವಹಿಸಲಾಗಿತ್ತು.

ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.