ಶ್ರೀಧರ್ ಪರಿಸ್ಥಿತಿ ಚಿಂತಾಜನಕ, ಮುದ್ದಾದ ಜೀವನ ಅಂತ್ಯದ ಹಾದಿ

 | 
Ms
ಯಾರಿಗೆ, ಯಾವಾಗ, ಏನಾಗುತ್ತೆ? ಅನ್ನೋದು ಈ ದಿನಗಳಲ್ಲೆ ಗೊತ್ತಾಗೋದಿಲ್ಲ. ನಿನ್ನೆ ಸರಿ ಇದ್ದವರು ಇವತ್ತು ಅನಾರೋಗ್ಯದಿಂದ ಆಸ್ಪತ್ರೆ ಸೇರಿರೋದನ್ನು ನೋಡಿದ್ದಿವಿ. ಅಂತಹ ಒಂದು ಪರಿಸ್ಥಿತಿಯಲ್ಲಿದ್ದಾರೆ ಕನ್ನಡ ಕಿರುತೆರೆಯ ಖ್ಯಾತ ನಟರೊಬ್ಬರು. ಅವರೇನು ನಿನ್ನೆ ಮೊನ್ನೆ ಇಂಡಸ್ಟ್ರಿಗೆ ಬಂದವರು ಅಲ್ಲ. ಆದರೆ ಅದೇನಾಯಿತು ಗೊತ್ತಿಲ್ಲ.
ಹೌದು, ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದ ನಟ ಶ್ರೀಧರ್ ನಾಯ್ಕ್  ಇದೀಗ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಸುಂದರ ನಗುವಿನ ಒಡೆಯ ಶ್ರೀಧರ್ ಇದೀಗ, ಮುಖದಲ್ಲಿನ ಕಳೆ ಕಳೆದುಕೊಂಡು, ಸೊರಗಿ ಹೋಗಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.  
ಪಾರು ಧಾರಾವಾಹಿಯಲ್ಲಿ ಆದಿಯ ಚಿಕ್ಕಪ್ಪನ ಪಾತ್ರದ ಮೂಲಕ, ಹಾಗೂ ಇದೀಗ ಇತ್ತಿಚೆಗಷ್ಟೇ ಪ್ರಸಾರ ಆರಂಭಿಸಿದ ವಧು ಸೀರಿಯಲ್ ನಲ್ಲೂ ಸಹ ವಧುವಿನ ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ನಾಯ್ಕ್ ನಟಿಸುತ್ತಿದ್ದರು. ಅಷ್ಟೇ ಅಲ್ಲ ಮ್ಯಾಕ್ಸ್ ಸಿನಿಮಾದಲ್ಲೂ ಇವರು ನಟಿಸಿದ್ದಾರೆ. ಇದೀಗ ದಿಢೀರ್ ಆಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಶ್ರೀಧರ್ ನಾಯ್ಕ್ ಅವರು ತೀವ್ರವಾದ ಇನ್’ಫೆಕ್ಷನ್ ಗೆ ಒಳಗಾಗಿದ್ದು, ಇದರಿಂದಾಗಿ ಇವರ ಆರೋಗ್ಯ ದಿನದಿಂದ ದಿನಕ್ಕೆ ಕುಂದಿ ಹೋಗಿ, ಸೊರಗಿ ಹೋಗಿದ್ದಾರೆ. ಪ್ರತಿದಿನ ಚಿಕಿತ್ಸೆಗೆ 10 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಆದಾಯ ಇಲ್ಲದೇ ಹಣ ಸಹಾಯಕ್ಕಾಗಿ ನಟ ಹಾಗೂ ಅವರ ಆಪ್ತರು ಮನವಿ ಮಾಡಿದ್ದಾರೆ. ಇದೀಗ ನಟಿ ದೀಪಾ ಅಯ್ಯರ್ , ನಾರಾಯಣ ಸ್ವಾಮಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub