ರಾಜಿನಾ ಆಚೆ ಹಾಕಿದ ಸುಭಾಷ್; ಇವತ್ತಿನ ಸಂಚಿಕೆ ನೋಡಿ ತ ಲೆಕೆಡಿಸಿಕೊಂಡ ಪ್ರೇಕ್ಷಕರು

 | 
ಹಾ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ಕೆಂಡಸಂಪಿಗೆ ಕೂಡ ಒಂದು. ಕೆಂಡಸಂಪಿಗೆ ಧಾರಾವಾಹಿ ಹೊಸ ತಿರುವು ಪಡೆದುಕೊಂಡಿದೆ. ಸುಭಾಷ್ ಹಾಗೂ ರಾಜಿ ಪರಸ್ಪರ ಪ್ರೀತಿಸುತ್ತಿದ್ದಾರೆ. ಆದರೆ ಕಾತ್ಯಾಯಿನಿ ಕಂಡೀಷನ್ ಪ್ರಕಾರ.. ಸುಭಾಷ್ - ಹಾಸಿನಿ ಮದುವೆ ಫಿಕ್ಸ್ ಆಗಿತ್ತು. 

ಆದರೆ ಮದುವೆ ಮಂಟಪದಿಂದ ಸುಭಾಷ್‌ ಓಡಿ ಹೋದ. ವಾಪಸ್ ಬಂದಿದ್ದು ರಾಜಿಯನ್ನ ಮದುವೆಯಾಗಿ . ಹೌದು ಈ ಮೂಲಕ ಮನೆಯವರೆಲ್ಲರ ಕೆಂಗಣ್ಣಿಗೆ ಸುಭಾಷ್ ಗುರಿ ಆಗಿದ್ದಾರೆ.ಕಾಶಿಯಾತ್ರೆ ಶಾಸ್ತ್ರದ ವೇಳೆ ಮದುವೆ ಮಂಟಪದಿಂದ ಓಡಿದ ಸುಭಾಷ್ ಬೀದಿ ಬೀದಿಯಲ್ಲಿ ರಾಜಿಗಾಗಿ ಹುಡುಕಾಟ ನಡೆಸಿದ. ಕೊನೆಗೆ ಕಟ್ಟಡದ ಮೇಲಿಂದ ಕೆಳಗೆ ಬೀಳಲು ರಾಜಿ ನಿಂತಿರುವುದು ಸುಭಾಷ್ ಕಣ್ಣಿಗೆ ಬಿತ್ತು. ಆಗ ರಾಜಿ ಬಳಿ ಸುಭಾಷ್ ತೆರಳಿದ. 

ರಾಜಿಯನ್ನ ಮದುವೆಯಾಗುವುದಾಗಿ ಸುಭಾಷ್ ಮಾತು ಕೊಟ್ಟ. ಅದರಂತೆ ನಡೆದುಕೊಂಡ . ಮನೆಯವರ ವಿರೋಧದ ನಡುವೆಯೇ ಮನೆಗೆ ಬಂದು ತಪ್ಪಿಗೆ ಕ್ಷಮೆ ಕೇಳಿದ ಆದರೆ ರಾಜಿ ಸಾಧನ ಮಾತು ಕೇಳಿ ಮೊದಲಿನ ರಾಜಿಯ ಹಾಗಿಲ್ಲ. ಬಟ್ಟೆ, ಮಾತು ಎಲ್ಲವೂ ಬದಲಾಯಿಸಿ ಕೊಂಡು ಸ್ವಂತ ಅಕ್ಕ ಸುಮನಾಳ ಮೇಲೆಯೇ ಕಿಡಿ ಕಾರಿದ್ದಾಳೆ. ಎಲ್ಲರೊಂದಿಗೆ ಜಗಳವಾಡುತ್ತಿದ್ದ ರಾಜಿಯನ್ನು ಇದೀಗ ಸುಭಾಷ್ ಮನೆಯಿಂದ ಆಚೆಗೆ ಹಾಕಿದ್ದಾನೆ.

ಅಲ್ಲಿಗೆ ಸಾಧನಾಳ ಈ ಮನೆಯ ನೆಮ್ಮದಿ ಕೆಡಿಸುವ ಕುತಂತ್ರ ಸಫಲವಾಗುತ್ತದೆ.ಧಾರಾವಾಹಿಯಲ್ಲಿ ಕಾತ್ಯಾಯಿನಿ ಆಗಿ ನಟಿ ಚೈತ್ರಾ ರಾವ್ ಸಚಿನ್, ತೀರ್ಥಂಕರ್ ಪ್ರಸಾದ್ ಆಗಿ ನಟ ಆಕಾಶ್, ಸಾಧನಾ ಆಗಿ ನಟಿ ಅಮೃತಾ ರಾಮಮೂರ್ತಿ, ಕೇಶವ್ ಪ್ರಸಾದ್ ಆಗಿ ಹಿರಿಯ ನಟ ದೊಡ್ಡಣ್ಣ, ಪದ್ಮ ಆಗಿ ಹಿರಿಯ ನಟಿ ಜ್ಯೋತಿ ಬಂಟ್ವಾಳ, ಸುಮನಾ ಆಗಿ ನಟಿ ಮಧುಮಿತ, ರಾಜೇಶ್ವರಿ ಆಗಿ ಗೀತಾ ಶರಣ್, ಸುಭಾಷ್ ಆಗಿ ವಿಕ್ಕಿ ಅಭಿನಯಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.