ವರ್ತೂರು ಸಂತೋಷ್ ಜೊತೆ ಭಾವುಕರಾದ ಸುದೀಪ್, ಮನೆಯಿಂದ ಆಚೆ ಬಂದಿದ್ದು ಯಾರು ಗೊ.ತ್ತಾ

 | 
ಲರ

ಸೇಫ್ ಆದರೂ ಮನೆಯಿಂದ ಹೊರ ನಡೆಯುವ ತೀರ್ಮಾನ ಮಾಡಿದ ವರ್ತೂರ್ ಸಂತೋಷ್ ಮನೆ ಮಂದಿಗೆಲ್ಲಾ ಶಾಕ್ ನೀಡಿದ್ದಾರೆ. ವರ್ತೂರು ಸಂತೋಷ್​​ ಈ ಬಗ್ಗೆ ಕಿಚ್ಚ ಸುದೀಪ್ ಜೊತೆ ಮಾತಾಡಿದ್ರು. ತಮ್ಮ ನಿರ್ಧಾರ ಹೇಳುತ್ತಾ ವರ್ತೂರು ಭಾವುಕರಾದ್ರು.
ಹೊರಗೆ ನಡೆದ ಕೆಲ ಘಟನೆ ಬಳಿಕ ನಾನು ಮತ್ತೆ ಬಿಗ್​ ಬಾಸ್​ ಮನೆಯೊಳಗೆ ಬಂದೆ. 

ಆದ್ರೆ ಎಲ್ಲಾ ಘಟನೆಗಳನ್ನು ಮರೆತು ಆಟವಾಡಲು ನನಗೆ ಆಗ್ತಿಲ್ಲ ಎಂದು ವರ್ತೂರು ಸಂತೋಷ್ ಭಾವುಕರಾಗಿ ಕಣ್ಣೀರು ಹಾಕಿದ್ರು. ನಾನು ಮನೆಯಿಂದ ಹೊರ ನಡೆಯುತ್ತೇನೆ ಎಂದು ಹೇಳಿದ್ದಾರೆ. ವರ್ತೂರು ಸಂತೋಷ್​ ನಿರ್ಧಾರ ಕೇಳಿ ಕಿಚ್ಚ ಸುದೀಪ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ವರ್ತೂರು ಸಂತೋಷ್​ ನಿಮಗೆ 34 ಲಕ್ಷದ 15 ಸಾವಿರದ 475 ಮಂದಿ ನಿಮಗೆ ವೋಟ್​ ಮಾಡಿದ್ದಾರೆ. 

ಜನಗಳ ವಿರುದ್ಧವಾಗಿ ನಾನು ಹೋಗಲು ಸಾಧ್ಯವಿಲ್ಲ I am very disappointed ಎಂದು ಸುದೀಪ್​ ವೇದಿಕೆಯಿಂದ ಹೊರ ನಡೆದಿದ್ದಾರೆ. ಎಲಿಮಿನೇಷನ್ ವೇಳೆ ಬಿಗ್ ಬಾಸ್ ಸೀಸನ್​ 8ರಲ್ಲೂ ಇದೇ ರೀತಿಯ ಘಟನೆ ಮರುಕಳಿಸಿತ್ತು.  ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ವೈಜಯಂತಿ ಅಡಿಗ ಅವರು ಬಿಗ್ ಬಾಸ್ ಸೀಸನ್ 8ರ ವೇಳೆ ಬಿಗ್ ಬಾಸ್​ ಮನೆಗೆ ಬಂದಿದ್ದರು. ನನಗೆ ಬಿಗ್​ ಬಾಸ್ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಹೇಳಿದ್ರು.    

ನಾನು ದೊಡ್ಮನೆಯಿಂದ ಹೊರ ಹೋಗಬೇಕು ಎಂದು ಕೇಳಿಕೊಂಡಿದ್ರು. ಆ ವಾರ  ಎಲಿಮಿನೇಟ್ ಆಗಬೇಕಿದ್ದಿದ್ದು ಶಮಂತ್ ಬ್ರೋ ಗೌಡ ಬದಲಿಗೆ ತಾವು ಹೊರ ಹೋಗುವುದಾಗಿ ವೈಜಯಂತಿ ಹೇಳಿದರು. ಅವರ ನಿರ್ಧಾರದಂತೆ ಶಮಂತ್ ಉಳಿದುಕೊಂಡರು ಹಾಗೂ ವೈಜಯಂತಿ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿದ್ರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.