ಸಲ್ಮಾನ್ ಖಾನ್ ಮನೆಗೆ ಹೋಗಿದ್ದಾಗ ನಡೆದ ಘಟನೆ ಬಗ್ಗೆ ಮೌನ ಮುರಿದ ಸುದೀಪ್ ಮಗಳು ಸಾನ್ವಿ

 | 
Nx
ನಟ ಕಿಚ್ಚ ಹಲವಾರು ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ದಬಾಂಗ್ 3 ರಲ್ಲಿ ಕಿಚ್ಚ ಸುದೀಪ್ ಅವರು, ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಸುದೀಪ್​ ಅವರ ಮಗಳು  ಸಾನ್ವಿ, ಸಲ್ಮಾನ್​ ಖಾನ್​ ಅವರನ್ನು  ಭೇಟಿಯಾದ ಮತ್ತು ಅವರೊಂದಿಗೆ ಸಮಯ ಕಳೆದ ಅನುಭವವನ್ನು ಹಂಚಿಕೊಂಡಿದ್ದಾರೆ.  ಜಿನಾಲ್ ಮೋದಿ ಅವರ ಯೂಟ್ಯೂಬ್​ ಚಾನೆಲ್​ ಜೊತೆಗಿನ ಸಂಭಾಷಣೆಯಲ್ಲಿ ಸಾನ್ವಿ ಅವರು,  ಸಲ್ಮಾನ್ ಖಾನ್​ ತಮ್ಮನ್ನು  ಹೇಗೆ ನಡೆಸಿಕೊಂಡರು ಎಂದು ನೆನಪಿಸಿಕೊಂಡಿದ್ದಾರೆ. 
 ಸಲ್ಮಾನ್ ಖಾನ್ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡಿರುವ ಸಾನ್ವಿ, ನಾನು  ಚಿಕ್ಕವಳಿದ್ದಾಗ ಅವರನ್ನು ಭೇಟಿಯಾಗಿದ್ದೆ.  ಆ ಸಂದರ್ಭದಲ್ಲಿ ನಾನು ಧರಿಸಿದ್ದ ಬ್ರೇಸ್​ಲೈಟ್​ ಅನ್ನು ಅವರಿಗೆ ನೀಡಿದ್ದೆ. ಅದನ್ನು ಅವರು  ಬಿಗ್ ಬಾಸ್ ಚಿತ್ರೀಕರಣದ ಸಮಯದಲ್ಲಿ  ಧರಿಸಿದ್ದರು ಎಂದಿದ್ದಾರೆ.  ನಂತರ ಕೆಲ ವರ್ಷಗಳ ನಂತರ ದಬಾಂಗ್ 3 ಚಿತ್ರೀಕರಣದ ಸಮಯದಲ್ಲಿ ಅವರನ್ನು ಮತ್ತೆ ಭೇಟಿಯಾದ ಬಗ್ಗೆ ನೆನಪಿಸಿಕೊಂಡಿರುವ ಸಾನ್ವಿ ಅವರು, ಇದು ಅತ್ಯಂತ ಮೋಜಿನ ಸಂದರ್ಭವಾಗಿತ್ತು ಎಂದು ಹೇಳಿದ್ದಾರೆ.  
ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಸರ್​ಪ್ರೈಸ್​ ಆಗಿ ಹೋಗಿರುವುದನ್ನು ಸಾನ್ವಿ ನೆನಪಿಸಿಕೊಂಡಿದ್ದಾರೆ.  ಆಗ ನಾನು  14 ವರ್ಷದವಳಿದ್ದೆ. ಚೆನ್ನಾಗಿ ಡ್ರೆಸ್​ ಮಾಡಿಕೊಂಡು ಬರಲು ಅಪ್ಪ ಹೇಳಿದ್ರು. ಅದರೆ ಹೋಗುವುದು ಎಲ್ಲಿ ಎಂದು ತಿಳಿದಿರಲಿಲ್ಲ. ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಒಳಗೆ ಹೋಗುತ್ತಿದ್ದಂತೆಯೇ ಸಲ್ಮಾನ್​ ಖಾನ್​ ಬೆನ್ನು ಕಾಣಿಸಿತು. ಆದರೆ, ಅವರೇ ಎಂದು ನನಗೆ ಗೊತ್ತಾಗಲಿಲ್ಲ. ಯಾರೋ ಅಪ್ಪನ ಅಭಿಮಾನಿ ಇರಬೇಕು ಎಂದುಕೊಂಡೆ. ಬಳಿಕ, ಅವರು ಸೋಫಾದಲ್ಲಿ ಬಂದು ಕುಳಿತುಕೊಂಡಾಗಲೇ ಸಲ್ಮಾನ್​ ಖಾನ್​ ಎನ್ನುವುದು ತಿಳಿಯಿತು. ಅವರನ್ನು ನೋಡಿ ಒಮ್ಮೆ ನಡುಕ ಉಂಟಾಯಿತು ಎಂದಿದ್ದಾರೆ ಸಾನ್ವಿ. 
ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಸರ್​ಪ್ರೈಸ್​ ಆಗಿ ಹೋಗಿರುವುದನ್ನು ಸಾನ್ವಿ ನೆನಪಿಸಿಕೊಂಡಿದ್ದಾರೆ.  ಆಗ ನಾನು  14 ವರ್ಷದವಳಿದ್ದೆ. ಚೆನ್ನಾಗಿ ಡ್ರೆಸ್​ ಮಾಡಿಕೊಂಡು ಬರಲು ಅಪ್ಪ ಹೇಳಿದ್ರು. ಅದರೆ ಹೋಗುವುದು ಎಲ್ಲಿ ಎಂದು ತಿಳಿದಿರಲಿಲ್ಲ. ಗ್ಯಾಲಕ್ಸಿ ಅಪಾರ್ಟ್​ಮೆಂಟ್​ ಒಳಗೆ ಹೋಗುತ್ತಿದ್ದಂತೆಯೇ ಸಲ್ಮಾನ್​ ಖಾನ್​ ಬೆನ್ನು ಕಾಣಿಸಿತು. 
ಆದರೆ, ಅವರೇ ಎಂದು ನನಗೆ ಗೊತ್ತಾಗಲಿಲ್ಲ. ಯಾರೋ ಅಪ್ಪನ ಅಭಿಮಾನಿ ಇರಬೇಕು ಎಂದುಕೊಂಡೆ. ಬಳಿಕ, ಅವರು ಸೋಫಾದಲ್ಲಿ ಬಂದು ಕುಳಿತುಕೊಂಡಾಗಲೇ ಸಲ್ಮಾನ್​ ಖಾನ್​ ಎನ್ನುವುದು ತಿಳಿಯಿತು. ಅವರನ್ನು ನೋಡಿ ಒಮ್ಮೆ ನಡುಕ ಉಂಟಾಯಿತು ಎಂದಿದ್ದಾರೆ ಸಾನ್ವಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.