ಕಾಂಗ್ರೆಸ್ ಸೇರುವ ಬಗ್ಗೆ ಸುಧಾಕರ್ ಮೊದಲ‌ ಮಾತು, ಡಾಕ್ಟರ್ ನಿರ್ಧಾರ ಏನು ಗೊತ್ತಾ

 | 
Hgg

ಕಳೆದ ಎರಡು ತಿಂಗಳಿಂದ ಸೈಲೆಂಟ್ ಆಗಿದ್ದ ಕೆ ಸುಧಾಕರ್ ಇದೀಗ ಸುದ್ದಿಯಲ್ಲಿದ್ದಾರೆ. ಹೌದು ರಾಜಕಾರಣ ಗಣಿತವಲ್ಲ ಅಲ್ಲಿ ಮೈನಸ್ ಆಗಿ ಇಲ್ಲಿ ಪ್ಲಸ್ ಆಗಲು ನಮ್ಮದು 40% ಕಮಿಷನ್ ಪಡೆಯುವ ಸರ್ಕಾರ ಎನ್ನುವ ಇವರು ರಾಜ್ಯದಲ್ಲಿ 2013 ರಿಂದ 2018ರ ವರೆಗೂ ನಡೆದಿರುವ ಅನೇಕ ಭ್ರಷ್ಟಾಚಾರಗಳು ನನಗೇನು ಗೊತ್ತಿಲ್ಲವಾ? ಬಾಯಿ ಬಿಡುವ ಸಂದರ್ಭ ಬಂದಾಗ ಬಿಡುವೆ ಎಂದು ಮಾಜಿ ಆರೋಗ್ಯ ಸಚಿವ ಡಾಕೆ.ಸುಧಾಕರ್ ಹೇಳಿದರು. ಅವರು ಏನೇನು ಮಾಡತಾರೆ ಮಾಡಲಿ. 

ನಾನು ಕಾಯುತ್ತಿದ್ದೇನೆಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಮಾತು ಎತ್ತಿದೆರೆ ನ್ಯಾಯಾಂಗ ತನಿಖೆ, ಎಸ್‌ಐಟಿ ತನಿಖೆ ಅಂತ ಹೇಳಿ ಮುಖಂಡರನ್ನು ಹಾಗೂ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆಯೆಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದೇ ವೇಳೆ ಟೀಕಿಸಿದರು. ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. 

ಅದನ್ನು ಎಸ್‌ಐಟಿ ತನಿಖೆ ನಡೆಸುತ್ತೇವೆಂಬ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಸುಧಾಕರ್, ಶಾಸಕರಿಗೆ ಅರಿವಿನ ಕೊರತೆ ಇದೆ. ಯಾವುದೇ ತನಿಖೆ ಮಾಡಲಿ. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲಿಯೆಂದರು. ಆ ರೀತಿ ಮಾಡುವುದಾದರೆ ಮಾಡಲಿ. ನಮ್ಮದು ಕೇಂದ್ರ ಸರ್ಕಾರ ಇದೆ. ಈ ರೀತಿ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದರು. 

ಇವರೆಲ್ಲಾ, ಶಾಸಕ ಪ್ರದೀಪ್ ಈಶ್ವರ್‌ಗೆ ಕನಸಿನಲ್ಲೂ ನಾನೇ ಬರುತ್ತೇನೆಂದ ವ್ಯಂಗ್ಯವಾಡಿದ ಸುಧಾಕರ್, ವಿಶ್ವದಲ್ಲಿ ಲಾಟರಿ ಹೊಡೆದು ಶಾಸಕರಾಗಿದ್ದೇನೆಂದು ಹೇಳಿಕೊಂಡವರಲ್ಲಿ ಇವರು ಮೊದಲಿಗರು ಇರಬೇಕೆಂದು ಪ್ರದೀಪ್ ಈಶ್ವರ್‌ಗೆ ಸುಧಾಕರ್ ಟಾಂಗ್ ನೀಡಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.