ತಂದೆಯ ವಿರುದ್ಧದ ನಡುವೆಯೇ ಕೋಟಿ ವೆಚ್ಚದಲ್ಲಿ reception ಮಾಡಿಕೊಂಡ ಪೃಥ್ವಿ ಭಟ್
May 18, 2025, 13:07 IST
|

ಕಳೆದ ಮಾರ್ಚ್ 27ರಂದು ದೇವಸ್ಥಾನವೊಂದರಲ್ಲಿ ಪೃಥ್ವಿ ಭಟ್ ಹಾಗೂ ಜೀ ಕನ್ನಡ ವಾಹಿನಿಯಲ್ಲಿ ನಾನ್ ಫಿಕ್ಷನ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿದ್ದ ಅಭಿಷೇಕ್ ಅವರು ಸರಳವಾಗಿ ಮದುವೆಯಾಗಿದ್ದರು.ಈ ಮದುವೆಗೆ ಪೃಥ್ವಿ ಭಟ್ ತಂದೆ ಅವರ ವಿರೋಧ ಇತ್ತು. ಮನೆಯವರಿಗೆ ತಿಳಿಸದೆ ಪೃಥ್ವಿ ಭಟ್ ಮದುವೆಯಾಗಿದ್ದರು. ಮದುವೆಯಾದ ಬಳಿಕ ಅವರು ತಂದೆಗೆ ಈ ವಿಷಯವನ್ನು ತಿಳಿಸಿದ್ದರು.
ಪೃಥ್ವಿ ಭಟ್ ಕಾಸರಗೋಡಿನವರು. ಅಭಿಷೇಕ್ ಅವರ ಜಾತಿ ಬೇರೆ ಎಂದು ಅವರ ತಂದೆ ವಿರೋಧ ಮಾಡಿದ್ದರು ಎನ್ನಲಾಗಿದೆ. ಮಗಳು ನನ್ನ ಮೇಲೆ ಆಣೆ ಮಾಡಿಯೂ ಕೂಡ ಓಡಿ ಹೋಗಿ ಮದುವೆ ಆಗಿದ್ದಾಳೆ ಎಂದು ಅವರ ತಂದೆ ಆರೋಪ ಮಾಡಿದ್ದರು.ಪೃಥ್ವಿ ಭಟ್ ಅವರಿಗೆ ವಶೀಕರಣ ಮಾಡಿ ಮದುವೆ ಮಾಡಲಾಗಿದೆ ಎಂದು ಅವರ ತಂದೆ ಆರೋಪ ಮಾಡಿದ್ದರು. ಸಂಗೀತ ಪಾಠ ಹೇಳಿಕೊಡುವ ನರಹರಿ ದೀಕ್ಷಿತ್ ಇದಕ್ಕೆಲ್ಲ ಕಾರಣ ಎಂದು ಅವರು ಆರೋಪ ಮಾಡಿದ್ದರು.
ಆಮೇಲೆ ನರಹರಿ ದೀಕ್ಷಿತ್ ಅವರು ಇದಕ್ಕೆಲ್ಲ ಪ್ರತಿಕ್ರಿಯಿಸಿ, ಎರಡೂವರೆ ವರ್ಷದಿಂದ ಅಭಿಷೇಕ್, ಪೃಥ್ವಿಯನ್ನು ಪ್ರೀತಿ ಮಾಡುತ್ತಿದ್ದ. ಇದು ನಮಗೆ ಗೊತ್ತಾದಾಗ ನಾನೇ ಪೃಥ್ವಿ ಮನೆಗೆ ಹೋಗಿ ತಂದೆ ಬಳಿ ಮಾತನಾಡಿದ್ದೇನೆ. ಇನ್ನೊಂದು ಹುಡುಗನನ್ನು ನೋಡಿ ಪೃಥ್ವಿ ನಿಶ್ಚಿತಾರ್ಥ ಮಾಡಲು ರೆಡಿಯಾದಾಗ ಪೃಥ್ವಿ ಈ ರೀತಿ ಮಾಡಿದ್ದಾಳೆ. ಪೃಥ್ವಿ ಮದುವೆ ಆಗುವ ದಿನವೇ ಅವಳು ಫೋನ್ ಮಾಡಿ ಅರ್ಜೆಂಟ್ ಇಲ್ಲಿಗೆ ಬನ್ನಿ ಸರ್ ಅಂತ ಹೇಳಿದಳು. ನಾನು ಹೋದಮೇಲೆ ಮದುವೆ ಆಗಿತ್ತು, ಅಕ್ಷತೆ ಕಾಳು ಹಾಕಿ ಬಂದೆ ಎಂದು ಹೇಳಿದ್ದರು
ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರ ಆರತಕ್ಷತೆಗೆ ರಿಯಾಲಿಟಿ ಶೋಗಳ ಸ್ಪರ್ಧಿಗಳು, ತೀರ್ಪುಗಾರರು, ತಂತ್ರಜ್ಞರು ಭಾಗವಹಿಸಿದ್ದರು.ಬಿಗ್ ಬಾಸ್ ಕನ್ನಡ ಸೀಸನ್ 11 ವಿಜೇತ ಹನುಮಂತ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ಹಾಡು ಕೂಡ ಹಾಡಿದ್ದಾರೆ.ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರ ಮದುವೆ ಆರತಕ್ಷತೆಯಲ್ಲಿ ಗಾಯಕ ವಿಜಯ್ ಪ್ರಕಾಶ್ ಅವರು ಪತ್ನಿ ಮಹತಿ, ಮಗಳ ಜೊತೆಗೆ ಭಾಗಿಯಾಗಿದ್ದಾರೆ. ಪೃಥ್ವಿ ಭಟ್ ಹಾಗೂ ಅಭಿಷೇಕ್ ಅವರು ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಡ್ಯಾನ್ಸ್, ಸಂಗೀತ ಎಂದು ತುಂಬ ಗ್ರ್ಯಾಂಡ್ ಆಗಿ ಆರತಕ್ಷತೆ ನಡೆದಿದೆ. ನಮ್ಮ ಫ್ಯಾಮಿಲಿ ಸಪೋರ್ಟ್ ಇಂದಲೇ ಇದು ನಡೆದಿದೆ ಎಂದಿದ್ದಾರೆ ಸಿಂಗರ್ ಪ್ರಥ್ವಿ ಭಟ್ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.