ಮೋದಿ ಸರ್ಕಾರದ ಪ ತನದ ಭವಿಷ್ಯ ನುಡಿದ ಸ್ವಾಮಿಗಳು; ತುಂಬಾ ದಿನ ಉಳಿಯಲ್ಲ
ಕೋಡಿ ಮಠದ ಶ್ರೀಗಳು ಆಗಾಗ ಭಯಾನಕ ಭವಿಷ್ಯಗಳನ್ನು ನುಡಿಯುತ್ತಲೇ ಇರುತ್ತಾರೆ. ಈಗಾಗಲೇ ಅವರು ನುಡಿದಿರುವ ಮಾತುಗಳು ನಿಜವಾಗಿವೆ. ಹಾಗೆಯೇ ಇದೀಗ ಮತ್ತೊಂದು ಯಾರು ಕಂಡು ಕೇಳರಿಯದಂತಹ ಭಯಾನಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ.
ಕ್ರೋಧಿನಾಮ ಸಂವತ್ಸರದಲ್ಲಿ ಅವಾಂತರಗಳೇ ಹೆಚ್ಚು ಎಂದು ಹೇಳಿದ್ದ 20 ದಿನಗಳಲ್ಲೇ ಕೇರಳದ ವಯನಾಡಿನಲ್ಲಿ ಭಾರೀ ಭೂಕುಸಿತ ಸಂಭವಿಸಿ 400ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಬಳಿಕ ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ ಎಂದು ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದರು. ಈಗ ಶ್ರಾವಣ ಮಾಸ ಶುರುವಾಗಿದೆ. ಇಡೀ ಕರ್ನಾಟಕದಲ್ಲಿ ಹಬ್ಬದ ಋತುವನ್ನು ಸಂಭ್ರಮದಿಂದಲೇ ಆಚರಣೆ ಮಾಡಿದ್ದಾರೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಶುಕ್ರವಾರ ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಣೆ ಮಾಡಿದ್ದು, ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಮತ್ತಷ್ಟು ಹೆಚ್ಚಾಗಲಿವೆ. ಈ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಹೇಳಿದ್ದಾರೆ. ಇದು ಶ್ರಾವಣ ಮಾಸ, ಹಬ್ಬದ ಋತು ಅಗಿದ್ದು, ಎಚ್ಚರಿಕೆಯಿಂದ ಇರಬೇಕು. ಈ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ.
ಈ ಮಾಸದಲ್ಲಿ ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಹೆಚ್ಚಾಗಲಿದೆ. ರಾಜ್ಯದಲ್ಲಿ ಅತಿವೃಷ್ಟಿ ಆಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಕ್ರೋಧಿನಾಮ ಸಂವತ್ಸರ ಇದಾಗಿರುವ ಕಾರಣ ದೇಶದಲ್ಲಿ ಜಲ, ಅಗ್ನಿ ಹಾಗೂ ವಾಯು ಕಂಟಕಗಳ ಸಂಖ್ಯೆ ಹೆಚ್ಚಾಗಹುದು ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಹೊಸ ವರ್ಷದ ಆರಂಭದಲ್ಲಿ ಗದಗನಲ್ಲಿ ಮಾತನಾಡಿದ್ದ ಅವರು, 2024ರಲ್ಲಿ ಅಕಾಲಿಕ ಮಳೆಯಾಗಲಿದ್ದು, ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಬಾಂಬ್ ಸಿಡಿಯುವ ಸಂಭವವಿದ್ದು, ಯುದ್ಧ ಭೀತಿ ಆವರಿಸಲಿದೆ. ಭೂಕಂಪ, ಜಲ ಕಂಟಕವೂ ಇದೆ. ಜನರು ತಲ್ಲಣವಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.
ಅಲ್ಲದೆ ಜಗತ್ತಿನ ದೊಡ್ಡ ಸಂತರು ಕೊಲೆಯಾಗುತ್ತಾರೆ. ಅಣು ಬಾಂಬ್ ಸ್ಫೋಟವಾಗುವ ಸಾಧ್ಯತೆಗಳಿವೆ. ಜಗತ್ತಿಗೆ ವಿನಾಶ ಕಾದಿದೆ. ರೋಗ, ಸುನಾಮಿ ಸಂಭವಿಸಲಿದೆ. ಮತೀಯ ಸಮಸ್ಯೆಯಿಂದ ಜನರು ದುಃಖ ಅನುಭವಿಸುತ್ತಾರೆ. ದೈವ ನಂಬುವುದೊಂದೇ ಪರಿಹಾರ. ದೈವ ಮೊರೆ ಹೋಗಬೇಕೆಂದು ಭವಿಷ್ಯ ನುಡಿದಿದ್ದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.