ತಮಿಳು ನಟ ವಿಶಾಲ್ ಜೀವನ ಅಂತ್ಯ, ಹೇಗಿದ್ದ ವ್ಯಕ್ತಿ ಇವತ್ತು ಮುದುಕನ ತರ ಆಗಿದ್ದಾರೆ
Jan 8, 2025, 07:22 IST
|
ಕಾಲಿವುಡ್ ಸ್ಟಾರ್ ಹೀರೋ ನಟ ವಿಶಾಲ್ ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಲ ದಿನಗಳಿಂದ ನಟ ವಿಶಾಲ್ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ. ಇದೀಗ ವಿಶಾಲ್ ನಟಿಸಿರುವ, 12 ವರ್ಷಗಳ ಹಿಂದೆ ಚಿತ್ರೀಕರಣ ಮುಗಿಸಿದ್ದ ಮದಗಜರಾಜ ಚಿತ್ರ ಈಗ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿ ಉಡುಗೊರೆಯಾಗಿ ಜನವರಿ 12 ರಂದು ಸಿನಿಮಾ ತೆರೆಗೆ ಬರಲಿದೆ.
ಇನ್ನು ತಮಿಳು ನಟ ವಿಶಾಲ್ ಅವರ ಗುರುತಿಸಲಾಗದಷ್ಟು ಬದಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದೆ. ಸಿನಿಮಾ ಕುರಿತು ಮಾತಾಡಲು ಮೈಕ್ ಹಿಡಿದ ನಟ ವಿಶಾಲ್ ಕೈ ನಡುಗುತ್ತಿತ್ತು. ದೊಡ್ಡ ದೊಡ್ಡ ಡೈಲಾಗ್ ಹೇಳ್ತಾ, ಚಟ-ಪಟ ಮಾತಾಡ್ತಿದ್ದ ನಟ ವಿಶಾಲ್, ಯಾಕೋ ಇವತ್ತಿನ ಕಾರ್ಯಕ್ರಮದಲ್ಲಿ ತೊದಲುತ್ತಿದ್ರು. ವಿಶಾಲ್ ಲುಕ್ ಬದಲಾಗಿತ್ತು. ವಿಶಾಲ್ ನೋಡಿ ಶಾಕ್ ಆದ ಅಭಿಮಾನಿಗಳು ನಿಜಕ್ಕೂ ನಟನಿಗೆ ಏನಾಗಿದೆ ಅಂತ ಕಂಗಾಲಾಗಿದ್ದಾರೆ.
ತಮ್ಮ ನೆಚ್ಚಿನ ನಾಯಕನಿಗೆ ಏನಾಯಿತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಟ ವಿಶಾಲ್ ಅವರು ತೀವ್ರ ಚಳಿ, ಜ್ವರ, ನೆಗಡಿಯಿಂದ ಬಳಲುತ್ತಿದ್ದಾರಂತೆ. ವೈರಲ್ ಫೀವರ್ ಅವರನ್ನ ಕಾಡ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎನ್ನಲಾಗ್ತಿದೆ. ವಿಶಾಲ್ ಆರೋಗ್ಯ ಕುರಿತ ಹೆಲ್ತ್ ಬುಲೆಟಿನ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದರೆ ಇದು ನಿಜವಾಗಿಯೂ ಜ್ವರವೇ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂದು ತಿಳಿಯಲು ವಿಶಾಲ್ ಪ್ರತಿಕ್ರಿಯೆಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ನಟ ವಿಶಾಲ್ ಶೀಘ್ರ ಗುಣಮುಖರಾಗಿ ಸಹಜ ಸ್ಥಿತಿಗೆ ಮರಳಲಿ ಎಂದು ಎಲ್ಲರೂ ಹಾರೈಸಿದ್ದಾರೆ.ಆದ್ರೆ ಇನ್ನೂ ಯಂಗ್ ಲುಕ್ನಲ್ಲಿ ಕಾಣುವ 47 ವರ್ಷದ ನಟ ವಿಶಾಲ್ ಆರೋಗ್ಯಕ್ಕೆ ಏನಾಗಿದೆ ಎನ್ನುವ ಪ್ರಶ್ನೆಗಳು ಮೂಡಿವೆ.
ಆದ್ರೆ ಅವರ ಆರೋಗ್ಯದ ಕುರಿತ ಯಾವುದೇ ಅಧಿಕೃತ ಮಾಹಿತಿಗಳು ಇದುವರೆಗೆ ಹೊರಬಿದ್ದಿಲ್ಲ, ಇಷ್ಟೇ ಅಲ್ಲದೇ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಅಭಿಮಾನಿಗಳನ್ನು ಆತಂಕಕ್ಕೆ ದೂಡಿದ್ದಂತೂ ನಿಜ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.