ಡಿ ರೂಪ ಅವರು ಜಯಲಲಿತಾ ಆಪ್ತೆಗೆ ಕೊಟ್ಟ ಶಿಕ್ಷೆ ನೋಡಿ ಬೆಚ್ಚಿಬಿದ್ದಿದ್ದ ತಮಿಳುನಾಡು, ರೂಪ ಎಷ್ಟು ಪವರ್ ಫುಲ್ ಗೊತ್ತಾ

 | 
ಪು

ಸದ್ಯ ಕರ್ನಾಟಕದಲ್ಲಿ ಹಲ್ ಚಲ್ ಎಬ್ಬಿಸಿ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಎರಡು  ಹೆಸರುಗಳೆಂದರೆ ಐಪಿಎಸ್ ಡಿ ರೂಪಾ ಹಾಗೂ ಐಎಎಸ್ ರೋಹಿಣಿ ಸಿಂಧೂರಿ. ಈ ಮಹಿಳಾ ಅಧಿಕಾರಿಗಳ ಜಟಾಪಟಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಅದೇನೇ ಇರಲಿ ಕನ್ನಡತಿ, ದಾವಣಗೆರೆಯ ಹುಡ್ಗಿ, ಚಿನ್ನದ ಪದಕ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿ ರೂಪಾ ಅವರು ರೆಬಲ್ ಆಫೀಸರ್ ಅನ್ನಿಸಿ ಕೊಂಡಿದ್ದೇಗೆ. ಅಷ್ಟಕ್ಕೂ ರೂಪ ಅವರ ಸಾಧನೆಗಳೇನು ಬನ್ನಿ ನೋಡೋಣ.ಐಪಿಎಸ್ ಡಿ ರೂಪ ಅವರ ಪೂರ್ಣ ಹೆಸರು ರೂಪ ದಿವಾಕರ್ ಮೌದ್ಗಿಲ್. ಪಪು

ಕರ್ನಾಟಕದ ದಾವಣಗೆರೆ ರೂಪಾ ಅವರ ತವರು ಜಿಲ್ಲೆ. ಅವರ ತಂದೆಯ ಹೆಸರು ಜೆ.ಎಚ್. ದಿವಾಕರ್.. ಅವರು ನಿವೃತ್ತ ಇಂಜಿನಿಯರ್, ತಾಯಿಯ ಹೆಸರು ಹೇಮಾವತಿ. ರೂಪಾ ಅವರ ತಂಗಿ ರೋಹಿಣಿ ದಿವಾಕರ್ 2008ರ ಬ್ಯಾಚ್ ನ ಐಆರ್ ಎಸ್ ಅಧಿಕಾರಿ. ಪ್ರಸ್ತುತ, ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.ಐಪಿಎಸ್ ಡಿ ರೂಪಾ ಮೌದ್ಗಿಲ್ ಅವರು ತಮ್ಮ ಶಾಲಾ ಶಿಕ್ಷಣವನ್ನು ರಾಜ್ಯದಲ್ಲೇ ಮಾಡಿದ್ದಾರೆ. ಅವರು ಕರ್ನಾಟಕದ ಕುವೆಂಪು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಎಂಎ ಪದವಿ ಪಡೆದರು. ಲವು

ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ, ಜೊತೆಗೆ ಭರತನಾಟ್ಯ ನೃತ್ಯಗಾರರೂ ಹೌದು.ಇನ್ನು ರೂಪಾ ಮೌದ್ಗಿಲ್ 2000 ಬ್ಯಾಚ್ ನ ಐಪಿಎಸ್ ಅಧಿಕಾರಿ. ಅವರು UPSC ಪರೀಕ್ಷೆಯಲ್ಲಿ ಅಖಿಲ ಭಾರತ 43 ನೇ ರ್ಯಾಂಕ್ ಗಳಿಸಿದರು. ನಂತರ ಹೈದರಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದರು. ಇಲ್ಲಿ 5ನೇ ರ್ಯಾಂಕ್ ಪಡೆದಿದ್ದಾರೆ.ಐಪಿಎಸ್ ಡಿ ರೂಪಾ ಮೌದ್ಗಿಲ್ ಅವರು ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಎಸ್ಪಿಯಾಗಿ ಮೊದಲ ಪೋಸ್ಟಿಂಗ್ ಆಗಿದ್ದರು. 2003 ರಲ್ಲಿ ಐಎಎಸ್ ಮೌನೀಶ್ ಮೌದ್ಗಿಲ್ ಅವರನ್ನು ವಿವಾಹವಾದರು. ರರ

ದಂಪತಿ ದಶಕಗಳಿಂದ ಕರ್ನಾಟಕದಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ.ಡಿ ರೂಪಾ ಮೌದ್ಗಿಲ್ ಅವರು ತಮ್ಮ 20 ವರ್ಷಗಳ ವೃತ್ತಿಜೀವನದಲ್ಲಿ 40ಕ್ಕೂ ಹೆಚ್ಚು ಬಾರಿ ವರ್ಗಾವಣೆಗೊಂಡಿದ್ದಾರೆ. ರೂಪಾ ಅವರು 2007 ರಲ್ಲಿ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಉಮಾಭಾರತಿ ಅವರನ್ನು ಬಂಧಿಸಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸಾವಿರಾರು ಕೋಟಿ ಒಡತಿ ಜಯಲಲಿತಾ ಅಪ್ತೆ ಶಶಿಕಲಾ ಅವರಿಗೆ ನಡುಕ ಹುಟ್ಟಿಸಿದ ಧೀರೆ ಈ ರೂಪ ಅವರು. ಆದ್ರೆ ಇದೀಗ ರೂಪಾ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದಾರೆ. ರಪ

ಅಧಿಕಾರಿಗಳ ಈ ಜಟಾಪಟಿಗೆ ಬ್ರೇಕ್ ಹಾಕಲು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇನ್ನು ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.ಒಟ್ಟಿನಲ್ಲಿ ಕೆಚ್ಚೆದೆಯ ಹೋರಾಟಗಾರ್ತಿಯಾದ ಇವರ ಆಶಯ ಈಡೇರಲಿ ಅನ್ನೋದು ಅಭಿಮಾನಿಗಳ ಅಭಿಪ್ರಾಯವಾಗಿದೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.