ಕನ್ನಡದ‌ ಸುಂದರಿ ಶ್ರೀಲಿಲಾ ಕೈಹಿಡಿಯಲಿರುವ ತೆಲುಗು ನಟ

 | 
Hu
 ಶ್ರೀಲೀಲಾ ಕನ್ನಡದಲ್ಲಿ ನಟಿಸಿದ್ದು ಕೆಲವೇ ಚಿತ್ರಗಳಾದರೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದವರು.ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಎಂದಾಗ ಎಲ್ಲರೂ ಶ್ರೀಲೀಲಾ ಅವರ ಹೆಸರನ್ನು ಹೇಳುತ್ತಾರೆ. ಇದಕ್ಕೆ ಕಾರಣ ಅವರು ಕಳೆದ ವರ್ಷ ನಟಿಸಿದ ಚಿತ್ರಗಳು. ಕಳೆದ ವರ್ಷ ಅವರ ಚಿತ್ರಗಳು ಗ್ಯಾಪ್‌ ಇಲ್ಲದೆ ಬಾಕ್ಸಾಫಿಸ್‌ನಲ್ಲಿ ಧೂಳೆಬ್ಬಿಸಿದ್ದವು.
ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರ ನಿರ್ದೇಶನದಲ್ಲಿ ಪೆಲ್ಲಿ ಸನದ್ ಚಿತ್ರದ ಮೂಲಕ ನಾಯಕಿಯಾಗಿ ಶ್ರೀಲೀಲಾ ಪಾದಾರ್ಪಣೆ ಮಾಡಿದರು. ಶ್ರೀಕಾಂತ್ ಪುತ್ರ ರೋಷನ್ ಈ ಚಿತ್ರದಲ್ಲಿ ನಾಯಕನಾಗಿ ಗುರುತಿಸಿಕೊಂಡರು.ಪೆಲ್ಲಿ ಸಂದದ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ದಾಖಲಿಸಿತು. ಈ ಸಿನಿಮಾದ ನಂತರ ಶ್ರೀಲೀಲಾ ನಾಯಕ ರವಿತೇಜ ಜೊತೆ ಧಮಾಕಾ ಸಿನಿಮಾದಲ್ಲಿ ನಟಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಆಯಿತು.
 ಇದರೊಂದಿಗೆ ಶ್ರೀಲಿಗೆ ಸರಣಿ ಆಫರ್‌ಗಳು ಬಂದವು.ಈ ಹಿನ್ನಲೆಯಲ್ಲಿ ಶ್ರೀಲೀಲಾ ಅವರು ಸ್ಕಂದ, ಭಗವಂತ ಕೇಸರಿ, ಗುಂಟೂರು ಕರಂ, ಎಕ್ಸ್‌ಟ್ರಾ-ಆರ್ಡಿನರಿ ಮ್ಯಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಮತ್ತು ವಿಜಯ್ ದೇವರಕೊಂಡ ಅವರ ಹೊಸ ಚಿತ್ರದೊಂದಿಗೆ ಶ್ರೀಲೀಲಾ ತೆಲುಗಿನಲ್ಲಿ ಬ್ಯುಸಿ ನಾಯಕಿಯಾಗಿದ್ದಾರೆ.
ಆದರೆ ಸದ್ಯಕ್ಕೆ ಶ್ರೀಲೀಲಾ ಹವಾ ಕಡಿಮೆಯಾಗಿದೆ ಎಂದೇ ಹೇಳಬಹುದು... ಆಕೆಯ ಚಿತ್ರಗಳು ಬಾಕ್ಸಾಫಿಸ್‌ನಲ್ಲಿ ಯಶಸ್ಸು ದಾಖಲಿಸದೇ ಇದ್ದಿದ್ದರಿಂದ, ತೆಲುಗಿನಲ್ಲಿ ನಟಿಗೆ ಆಫರ್‌ಗಳು ಕಡಿಮೆಯಾದವು. ಈ ಮಧ್ಯೆ ಶ್ರೀಲೀಲಾಗೆ ಸಂಬಂಧಿಸಿದ ಇತ್ತೀಚಿನ ಸುದ್ದಿಯೊಂದು ವೈರಲ್ ಆಗಿದೆ. ನಟಿಗೆ ಮೆಗಾ ಹೀರೋ ದೀಪಾವಳಿ ಗಿಫ್ಟ್ ಕಳುಹಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನಲ್‌ ಗಾಸಿಪ್‌ವೊಂದು ಹರಿದಾಡುತ್ತಿದೆ. ಆ ನಾಯಕ ಬೇರೆ ಯಾರೂ ಅಲ್ಲ, ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದ ವೈಷ್ಣವ್ ತೇಜ್.
ಅಷ್ಟಕ್ಕೂ ಇದು ಪ್ರೀತಿಯಿಂದವೋ, ಸ್ನೇಹದಿಂದಲೋ ಗೊತ್ತಿಲ್ಲ.ತಾನು ಯಾರನ್ನೋ ಪ್ರೀತಿಸುತ್ತಿದ್ದೇನೆ ಎಂದು ಶ್ರೀಲೀಲಾ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರು ವೈಷ್ಣವ್ ತೇಜ್ ಇರಬಹುದು ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಶ್ರೀಲೀಲಾ ಮೇಘಾ ಮನೆಗೆ ಸೊಸೆಯಾಗಿ ಹೋಗುವುದು ಖಚಿತ ಎಂದು ಅವರು ಭಾವಿಸಿದ್ದಾರೆ. ಆದರೆ ಈ ವದಂತಿಗಳಿಗೆ ಇವರಿಬ್ಬರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಕಾದು ನೋಡಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub