ಸೀರಿ ಉಟ್ಟು ಆಂಟಿಯಂತೆ ಕಾಣುತ್ತಿದ್ದ ನಟಿಯೂ ನಿಜ ‌ಜೀವನದಲ್ಲಿ ಸಕ್ಕತ್ ಬೋಲ್ಡ್

 | 
ಕಕದದ
ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಕರಿಮಣಿʼ ಧಾರಾವಾಹಿಯ ದಿಕ್ಕೆ ಬದಲಾಗಿದೆ. ಸಾಹಿತ್ಯಳ ಅನುಮತಿ ಇಲ್ಲದೇ, ಕುತ್ತಿಗೆಗೆ ತಾಳಿ ಕಟ್ಟಿ ಕರ್ಣ ಅವಳ ಪಾಲಿಗೆ ವಿಲನ್‌ ಆಗಿದ್ದಾನೆ. ಇದೇ ವಿಚಾರಕ್ಕೆ ಸಾಹಿತ್ಯಳಿಗೆ ಕರ್ಣನ ಮೇಲೆ ಸಿಕ್ಕಾಪಟ್ಟೆ ಕೋಪವಿದೆ. ಈ ಮಧ್ಯೆ ಬ್ಲ್ಯಾಕ್‌ ರೋಸ್‌ನಿಂದ ಕರ್ಣ ಮತ್ತು ಸಾಹಿತ್ಯ ಜೀವನದಲ್ಲಿ ನಡೆದಿರುವ ಗೋಳು ಒಂದೊಂದಲ್ಲ. ಸದ್ಯ ಈ ಬ್ಲ್ಯಾಕ್‌ ರೋಸ್‌ ಯಾರೆಂಬ ಸತ್ಯ ಎಲ್ಲರಿಗೂ ತಿಳಿದಿದೆ. ತಾಯಿಯೇ ದೇವರು ಅಂದುಕೊಂಡಿರುವ ಕರ್ಣನ ಬಾಳಿಗೆ ಅವರೇ ವಿಲನ್‌.
ಇನ್ನು ಇಷ್ಟು ದಿನ ಸೀರೆಯುಟ್ಟು ಅರುಂಧತಿ ಪಾತ್ರದಲ್ಲಿ ಮಿಂಚಿದ್ದ ಅನುಷಾ ರಾವ್‌ ಇದೀಗ ಸಖತ್‌ ಸ್ಟೈಲೀಶ್‌ ಆಗಿ ಬೈಕ್‌ ರೈಡ್‌ ಮಾಡಿಕೊಂಡು, ಆಕ್ಷನ್‌ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಸತತ ಒಂದು ವರ್ಷಗಳ ಕಾಲ ʻಕರಿಮಣಿʼಯಲ್ಲಿ ಸಾಫ್ಟ್‌ ಕ್ಯಾರೆಕ್ಟರ್‌ ಮಾಡಿ ಈಗ ಅವರ ಪಾತ್ರ ಸಂಪೂರ್ಣ ನೆಗೆಟಿವ್‌ ಪಾತ್ರಕ್ಕೆ ತಿರುಗಿದೆ.
ಇನ್ನು ಈ ಕುರಿತಾಗಿ ಮಾತನಾಡಿದ ಅರುಂಧತಿ ಅಲಿಯಾಸ್‌, ಅನುಷಾ ರಾವ್‌ ಸಡನ್‌ ಚೇಂಜ್‌ ಓವರ್‌ ಬಗ್ಗೆ ಮಾತನಾಡಿ, ವಿಲನ್‌ ರೋಲ್‌ ಯಾವತ್ತಿಗೂ ಮಜಾ ಕೊಡುತ್ತದೆ. ಸಾಫ್ಟ್‌ ಕ್ಯಾರೆಕ್ಟರ್‌ ಮಾಡುವುದರಲ್ಲಿ ಸಿಗುವ ಖುಷಿ ಅದಕ್ಕೆ ವಿರುದ್ಧವಾಗಿ ಮಾಡುವ ನೆಗಟಿವ್‌ ರೋಲ್‌ ಕೂಡ ಅಷ್ಟೇ ಮಜಾ ಕೊಡುತ್ತದೆ ಎಂದಿದ್ದಾರೆ.ತಾಯಿಯೇ ಬ್ಲ್ಯಾಕ್‌ ರೋಸ್‌ ಎಂದು ಕರ್ಣನಿಗೆ ಗೊತ್ತಾದರೆ ಹೇಗೆ ಎನ್ನುವ ಪ್ರಶ್ನೆಗೆ, ಎಲ್ಲರ ಜೀವನದಲ್ಲೂ ತಾಯಿಗೆ ದೊಡ್ಡ ಸ್ಥಾನವಿದೆ. ಅಂತೆಯೇ ಕರ್ಣ ತಾಯಿಯನ್ನು ದೇವರ ಸ್ಥಾನದಲ್ಲಿ ಇಟ್ಟಿದ್ದಾನೆ.
ಅಂತಹ ಅಮ್ಮ ಹೀಗೆ ಮಾಡುತ್ತಾಳೆ ಎಂದರೆ ಖಂಡಿತವಾಗಿಯೂ ಶಾಕಿಂಗ್‌ ಹೌದು ಎಂದಿದ್ದಾರೆ. ಕರ್ಣ ಅಮ್ಮನನ್ನು ದೇವತೆ ಸ್ಥಾನದಲ್ಲಿ ಇಟ್ಟಿದ್ದಾನೆ ಆದರೆ ಮಲತಾಯಿ ಅರುಂಧತಿಗೆ ಕರ್ಣನ ಮೇಲೆ ದ್ವೇಷನಾ ಅಥವಾ ಅವರ ಅಮ್ಮನ ಮೇಲೆ ದ್ವೇಷನಾ ಎಂಬ ಪ್ರಶ್ನೆಗೆ, ಇಲ್ಲಿವರೆಗೂ ನನಗೆ ನನ್ನ ಸವತಿ ಅನು ಮೇಲೆ ದ್ವೇಷ ಇದೆ. ನಾನು ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನೆಗಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. 
ತೆಲುಗಿನಲ್ಲಿ ನೆಗಟಿವ್‌ ಪಾತ್ರ ಮಾಡಿದಾಗ ಏರ್‌ಪೋರ್ಟ್‌ನಲ್ಲಿ ನನ್ನನ್ನು ನಿಲ್ಲಿಸಿ, ನೀವು ಯಾಕೆ ಹಿಂಗೆ ಎಂದು ಹಲವರು ಪ್ರಶ್ನೆ ಮಾಡಿದ್ದು ಇದೆ. ಇದೆಲ್ಲಾ ನೋಡಿದಾಗ ನನ್ನ ಪಾತ್ರಕ್ಕೆ ನ್ಯಾಯ ದೊರಕಿಸಿದ್ದೀನಿ ಅಂತ ಖುಷಿಯಾಗುತ್ತೆ ಎಂದಿದ್ದಾರೆ ಅನುಷಾ ರಾವ್‌. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub