ಆಂಕರ್ ಕೇಳಿದ ಪ್ರಶ್ನೆಗೆ ಎದ್ದು ಬಿದ್ದು ಕಣ್ಣೀರಿಟ್ಟ ಖ್ಯಾತ ನಟಿ, ಯಾಕೆ ಏನಾಯಿತು ಗೊತ್ತಾ

 | 
ಪುಿ

ಒಂದೆಡೆ ಉತ್ತರ ಕರ್ನಾಟಕದಲ್ಲಿ ಶಿವಾಜಿ ಮಹಾರಾಜರನ್ನು ಆರಾಧಿಸುವ ಪ್ರತಿಷ್ಟಿತ ಇನಾಮ್ದಾರ್‌ ಮನೆತನ. ಮತ್ತೂಂದೆಡೆ ಪಶ್ಚಿಮ ಘಟ್ಟದ ದಟ್ಟ ಕಾನನದಲ್ಲಿ ಶಿವನನ್ನು ಆರಾಧಿಸುವ ಆದಿವಾಸಿ ಜನಾಂಗ. ಇನಾಮ್ದಾರ್‌ ಮನೆತನಕ್ಕೂ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಶಿವನಿಗೂ ಒಂದು ದೈವಿಕ ನಂಟು. ಈ ದೈವಿಕ ನಂಟು ಶತ ಶತಮಾನಗಳಿಂದ ಇನಾಮ್ದಾರ್‌ ಮನೆತನ ಮತ್ತು ಆದಿವಾಸಿ ಜನಾಂಗವನ್ನು ಬೆಸೆದಿರುತ್ತದೆ.

ಹೀಗಿರುವಾಗಲೇ ನಡೆಯುವ ಘಟನೆಯೊಂದು, ಆದಿವಾಸಿಗಳು ಇನಾಮ್ದಾರ್‌ ಮನೆತನವನ್ನು ದ್ವೇಷಿಸುವಂತೆ ಮಾಡುತ್ತದೆ. ಜನಾಂಗೀಯ ಸಂಘರ್ಷಕ್ಕೆ ಕಾರಣವಾಗುತ್ತದೆ. ಅಂಥ ಘಟನೆ ಯಾವುದು? ಇದಕ್ಕೆ ಪೂರ್ಣವಿರಾಮ ಹೇಗೆ? ಎಂಬುದೇ ಈ ವಾರ ತೆರೆಗೆ ಬಂದಿರುವ ಇನಾಮ್ದಾರ್‌ ಸಿನಿಮಾದ ಕಥಾಹಂದರ.
ಈಗಾಗಲೇ ಪೋಸ್ಟರ್‌, ಟೀಸರ್‌, ಟ್ರೇಲರ್‌ನಲ್ಲಿ ತೋರಿಸಿರುವಂತೆ, ಇನಾಮ್ದಾರ್‌ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. 

ಉತ್ತರ ಕರ್ನಾಟಕದ ಸೊಗಡು, ಪಶ್ಚಿಮ ಘಟ್ಟದ ಸೊಬಗು ಎರಡನ್ನೂ ಸೇರಿಸಿ ಕಮರ್ಷಿಯಲ್‌ ಎಂಟರ್‌ಟೈನರ್‌ ಆಗಿ ಇನಾಮ್ದಾರ್‌ ಸಿನಿಮಾವನ್ನು ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ. ಇನ್ನು ಈ ಕುರಿತಾಗಿ ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ಚಿರಶ್ರೀ ಅಂಚನ್‌ ಮೊದಲು ಸಿನೆಮಾ ಕಥೆ ಕೇಳಿದಾಗ ತನ್ನಿಂದ ಪಾತ್ರ ಮಾಡಲು ಸಾಧ್ಯವೇ ಅನ್ನಿಸಿತ್ತಂತೆ ಆದರೆ ನಂಬಿಕೆ ಇಟ್ಟು ಪಾತ್ರ ನೀಡಿದವರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನನ್ನ ಮೇಲಿದೆ ಎಂಬುದನ್ನು ಸಂದರ್ಶನ ಒಂದರಲ್ಲಿ ಹೇಳಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಆ್ಯಕ್ಷನ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಅಂಶಗಳ ಜೊತೆಗೆ ಲವ್‌, ಸೆಂಟಿಮೆಂಟ್‌, ಕಾಮಿಡಿ, ಮೆಲೋಡಿ ಹಾಡುಗಳು, ಸುಂದರ ಲೊಕೇಶನ್ಸ್‌, ಮೇಕಿಂಗ್‌, ಬೃಹತ್‌ ಕಲಾವಿದರ ತಾರಾಗಣ ತೆರೆಮೇಲೆ ಇನಾಮ್ದಾರ್‌ ಸಿನಿಮಾವನ್ನು ಅದ್ಧೂರಿಯಾಗಿ ಕಾಣುವಂತೆ ಮಾಡಿದೆ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.