ವ್ಯಾಪಕ ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ಏಕಾಏಕಿ ಇಂದು ಮುಂಜಾನೆ ರಜೆ ಘೋಷಣೆ ಮಾಡಿದ ಸರ್ಕಾರ
| Jul 19, 2025, 09:35 IST
ಶಾಲಾ ಕಾಲೇಜುಗಳಿಗೆ ಇದೀಗ ಏಕಾಏಕಿ ಸರ್ಕಾರ ರಜೆ ಘೋಷಣೆ ಮಾಡಿದೆ. ದಕ್ಷಿಣ ಕನ್ನಡದಲ್ಲಿ ಸುಮಾರು ಒಂದು ವಾರಗಳಿಂದ ಬಾರಿ ಮಳೆ ಹಿನ್ನೆಲೆ ನದಿಗಳಲ್ಲಿ ಪ್ರವಾಹ ಹೆಚ್ಚಾಗಿದ್ದು.
ಶಾಲಾ ಮಕ್ಕಳಿಗೆ ಭಯದ ವಾತಾವರಣ ಉಂಟು ಮಾಡಿದೆ. ಈ ಎಲ್ಲಾ ವಿಚಾರವನ್ನು ಗಮನದಲ್ಲಿಕೊಟ್ಟುಕೊಂಡು ದಕ್ಷಿಣ ಕನ್ನಡದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ರಜೆ ನೀಡುವಂತೆ ದಕ್ಷಿಣ ಕನ್ನಡದ ಡಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಮಂಗಳೂರು ಉಡುಪಿ ಭಾಗದಲ್ಲಿ ಬಾರಿ ಮಳೆ ಹಿನ್ನೆಲೆ ನದಿ ಹಾಗೂ ಜಲಪಾತದ ಬಳಿ ಯಾರು ಕೂಡ ಹೋಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.