ನೂರಾರು ಸಿನಿಮಾಗಳಿಗೆ ಹಿಟ್ ಹಾಡು ಕೊಟ್ಟ ಗಾಯಕಿ ಇಹಲೋಕ, ಕಂಗಾಲಾದ ಕರುನಾಡು

 | 
ಬಬ

ಇತ್ತೀಚಿನ ದಿನಗಳಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗಿದ್ದು ಹಲವಾರು ಜನ ಚಿತ್ರ ಕಲಾವಿದರು ಸಂಗೀತ ಗಾರರು ಇನ್ನಿಲ್ಲವಾಗಿದ್ದಾರೆ. ಹೌದು ಇದೀಗ ಖ್ಯಾತ ಗಾಯಕಿ, ಗೀತರಚನೆಗಾರ್ತಿ ಹಾಗೂ ನಟಿ ಕೊಕೊ ಲೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 48 ವರ್ಷ ಲೀ ಸಾವಿನ ಬಗ್ಗೆ ಅವರ ಸಹೋದರರಾದ ಕರೋಲ್ ಮತ್ತು ನ್ಯಾನ್ಸಿ ಸಾಮಾಜಿಕ 
ಮಾಧ್ಯಮ ಮೂಲಕ ಬಹಿರಂಗಪಡಿಸಿದ್ದಾರೆ.

ಕೊಕೊ ಲೀ ಅವರು ಕಳೆದ ಕೆಲವು ವರ್ಷಗಳಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಇತ್ತೀಚೆಗೆ ಅವರ ಸ್ಥಿತಿಯು ಹದಗೆಟ್ಟಿದೆ ಎಂದು ಹೇಳಲಾಗಿದೆ. ಇದರಿಂದ ಹೊರಬರಲು ಹರಸಾಹಸ ಪಟ್ಟರೂ ಫಲ ಸಿಕ್ಕಿಲ್ಲ ಎಂದು ಅಳಲು ಲೀ ಸಹೋದರರು ನೋವನ್ನು ತೋಡಿಕೊಂಡಿದ್ದಾರೆ. ಲೀ ಈ ತಿಂಗಳ 2ರಂದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. 

ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಕೋಮಾಗೆ ಹೋಗಿದ್ದಳು. ಕೊನೆಗೂ ನ.5ರಂದು ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ. 
ಹಾಂಗ್ ಕಾಂಗ್‌ನಲ್ಲಿ ಜನಿಸಿದ ಲೀ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬೆಳೆದರು. ನಂತರ ಅವರು ಪಾಪ್ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1996 ರಲ್ಲಿ, ಅವರು ಸೋನಿ ಮ್ಯೂಸಿಕ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು ಮತ್ತು ಆ ಗೌರವವನ್ನು ಪಡೆದ ಮೊದಲ ಚೀನೀ ಅಮೇರಿಕನ್ ಆದರು. 1998 ರಲ್ಲಿ, ಅವಳ ಮ್ಯಾಂಡರಿನ್ ಆಲ್ಬಂ ಡಿ ಡಾ ಡಿ ಮೂರು ತಿಂಗಳೊಳಗೆ ಒಂದು ಮಿಲಿಯನ್ ಪ್ರತಿಗಳನ್ನು ಮಾರಾಟವಾಗಿತ್ತು. 

ಹಿಡನ್ ಡ್ರ್ಯಾಗನ್' ನ 'ಎ ಲವ್ ಬಿಫೋರ್ ಟೈಮ್' ಹಾಡು 2001 ರಲ್ಲಿ ಅತ್ಯುತ್ತಮ ಮೂಲ ಗೀತೆಯ ವಿಭಾಗದಲ್ಲಿ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತು. ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನ ನೀಡಿದ ಮೊದಲ ಚೀನೀ ಅಮೇರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಲೀ ಸಾವು ಅವರ ಅಭಿಮಾನಿಗಳಿಗೆ ದುಃಖ ತಂದಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.