ರಾಕ್ ಲೈನ್ ತಮ್ಮನ ಮನೆಗೆ ನುಗ್ಗಿದ ಕಳ್ಳರು, ಮನೆ ಒಳಗಡೆ ಸಿಕ್ಕಿದ್ದೇನು ಗೊತ್ತಾ

 | 
ರ್ಕಾ

ಹುಲಿ ಉಗುರು ವಿಚಾರವಾಗಿ ಎಲ್ಲೆಡೆ ಸುದ್ದಿಯಲ್ಲಿದ್ದ ಸ್ಯಾಂಡಲ್ ವುಡ್ ನಟ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ತಮ್ಮನ ಮನೆಯಲ್ಲಿ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿದ ಕದೀಮರು ಕೈಚಳಕ ತೋರಿದ್ದಾರೆ. ಮಹಾಲಕ್ಷ್ಮೀ ಲೇಔಟ್​​​ನಲ್ಲಿರುವ  ರಾಕ್ ಲೈನ್ ವೆಂಕಟೇಶ್ ತಮ್ಮ ಬ್ರಹ್ಮೇಶ್ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಕಳ್ಳತನ ಮಾಡಿ ಕದೀಮರು ಎಸ್ಕೇಪ್ ಆಗಿದ್ದಾರೆ. 

ರಾಕ್​ಲೈನ್  ವೆಂಕಟೇಶ್​ ತಮ್ಮ ಬ್ರಹ್ಮೇಶ್​ ಮನೆಯವರೆಲ್ಲಾ ವಿದೇಶಕ್ಕೆ ತೆರಳಿದ್ರು. ಯುರೋಪ್ ಪ್ರವಾಸ ಮುಗಿಸಿಕೊಂಡು ನಿನ್ನೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರು ಇಲ್ಲವೆಂದು ತಿಳಿದುಕೊಂಡೇ ಕಳ್ಳರು ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ 5 ಕೆಜಿ ಚಿನ್ನವನ್ನು ಕದ್ದಿದ್ದಾರೆ. ತಕ್ಷಣ ಬ್ರಹ್ಮೇಶ್​ ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್​ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಸಿಸಿಟಿವಿ ಪರಿಶೀಲನೆ ನಡೆಸುತ್ತಿರುವ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಟವರ್ ಡಂಪ್ ತೆಗೆದು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಮನೆಯವರು ಇಲ್ಲದ ವೇಳೆ ಮನೆ ನೋಡಿಕೊಳ್ತಿದ್ದ ಕೆಲಸದವರ ಬಳಿ ಕೂಡ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸುತ್ತಿದ್ದಾರೆ. ರಾಕ್ ಲೈನ್ ಪ್ರೊಡಕ್ಷನ್ ನ ಮಾಲೀಕರರಾಗಿರುವ ವೆಂಕಟೇಶ್  ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. 

ವೆಂಕಟೇಶ್​  ಕನ್ನಡ ಚಿತ್ರರಂಗದಲ್ಲಿಯೇ ರಾಕ್ ಲೈನ್ ಪ್ರೊಡಕ್ಷನ್ ಎಂದೇ ಜನಪ್ರಿಯರಾಗಿದ್ದಾರೆ. ಆದರೆ ಇದೀಗ ಅವರ ತಮ್ಮನ ಮನೆಯಲ್ಲೇ ಇಷ್ಟು ದೊಡ್ಡ ಕಳ್ಳತನ ನಡೆದಿರುವುದು ಬೇಸರದ ಸಂಗತಿಯಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.