ಫಿನಾಲೆಗೆ ಆಯ್ಕೆಯಾದ ಟಾಪ್ 5 ಸ್ಪರ್ಧಿಗಳು, ಇದು ಮೋಸ ಎಂದ ವೀಕ್ಷಕರು

 | 
Jx
ಬಿಗ್‌ಬಾಸ್ ಕನ್ನಡ 11ರ ಫೈನಲ್ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ. ಈ ಸೀಸನ್‌ನಲ್ಲಿ ಯಾರು ಟಾಪ್ 5 ಸ್ಪರ್ಧಿಗಳಾಗಿ ಫೈನಲ್‌ಗೆ ಪ್ರವೇಶ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಹೆಸರುಗಳು ಫೈನಲ್‌ಗೆ ಪ್ರಬಲವಾಗಿವೆ.
ಬಿಗ್‌ಬಾಸ್‌ ಕನ್ನಡ 11ರ ಪಿನಾಲೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಸ್ಪರ್ಧಿಗಳು ಮನೆಯಲ್ಲಿ 94 ದಿನ ಕಳೆದಿದ್ದಾರೆ. ಈ ವಾರ ಮನೆಯಲ್ಲಿ ಫ್ಯಾಮಿಲಿ ರೌಂಡ್‌  ನಡೆಯುತ್ತಿದೆ. ಇದೆಲ್ಲದರ  ನಡುವೆ ಈಗ ಬಿಗ್‌ಬಾಸ್‌ ಫೈನಲ್‌ ಯಾವಾಗ ನಡೆಯುತ್ತದೆ ಎಂಬ ಕುತೂಹಲದ ಮಧ್ಯೆಯೇ ಸುದ್ದಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಉಗ್ರಂ ಮಂಜು, ಚೈತ್ರಾ ಕುಂದಾಪುರ, ರಜತ್‌ ಕಿಶನ್, ತ್ರಿವಿಕ್ರಮ್‌, ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್, ಧನರಾಜ್‌ ಆಚಾರ್‌ ಹಾಗೂ ಹನುಮಂತು ಒಟ್ಟು 9 ಮಂದಿ ಸ್ಪರ್ಧಿಗಳಿದ್ದಾರೆ. ಇಷ್ಟು ಮಾತ್ರವಲ್ಲ ಇದೆಲ್ಲದರ ನಡುವೆ ಬಿಗ್‌ಬಾಸ್‌ ಕನ್ನಡ 11ರ  ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಡುತ್ತಿರುವ ಸ್ಪರ್ಧಿಗಳ ಹೆಸರುಗಳು ವೈರಲ್ ಆಗುತ್ತಿವೆ. ಎಂದಿನಂತೆ ಈ ಬಾರಿ ಕೂಡ ಐದು ಮಂದಿಯನ್ನು ಫಿನಾಲೆಗೆ  ಕಳುಹಿಸಿಕೊಡಲಾಗುತ್ತಂತೆ.
ವಿವಿಧ ಕಡೆಗಳಿಂದ  ಸಮೀಕ್ಷೆಯನ್ನು ನಡೆಸಿ ಬಿಗ್‌ ಬಾಸ್‌ ಮನೆಯಲ್ಲಿ ಯಾರು ಇರಬೇಕೆಂದು ತೀರ್ಮಾನಿಸಲಾಗುತ್ತಂತೆ. ಆ ಪ್ರಕಾರ ಉಗ್ರಂ ಮಂಜು, ಗೌತಮಿ ಅಥವಾ ಮೋಕ್ಷಿತಾ  ಇವರುಗಳು ಹೆಸರು ಟಾಪ್‌ ನಲ್ಲಿಲ್ಲ.  ಐವರಲ್ಲಿ ಗ್ರ್ಯಾಂಡ್‌ ಫಿನಾಲೆ ಲಿಸ್ಟ್‌ನಲ್ಲಿ  ಪಕ್ಕಾ ಯಾರು ಇರುತ್ತಾರೆ ಎಂದರೆ ಮೊದಲಿಗೆ ಬರುವ ಹೆಸರು ಸಿಂಗರ್ ಹನುಮಂತ ಲಮಾಣಿ. ಮಿಕ್ಕಂತೆ ತ್ರಿವಿಕ್ರಮ್‌  ಹೆಸರು ಎರಡನೇ ಸ್ಥಾನದಲ್ಲಿದೆಯಂತೆ, 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್‌ ಐದನೇ ಹೆಸರು ಭವ್ಯಾ ಗೌಡ ಅವರದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.