ಇನ್ನುಮುಂದೆ ಟ್ರಾಫಿಕ್ ಪೊ.ಲೀಸರು ವಾಹನ ಸವಾರರಿಗೆ ದಂಡ ಹಾಕುವಂತಿಲ್ಲ, ಹೈಕೋರ್ಟ್ ಮಹತ್ವದ ಆದೇಶ

 | 
ರಾ

ಇದು ನಿಜಕ್ಕೂ ವಾಹನ ಚಾಲಕರಿಗೆ ಸಿಹಿ ಸುದ್ದಿ ಎಕೆಂದರೆ ವಾಹನ ಸವಾರರಿಂದ ಇನ್ಮುಂದೆ ಟ್ರಾಫಿಕ್ ಪೊಲೀಸರು  ದಂಡ ಸಂಗ್ರಹಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪನ್ನು ಹೊರಡಿಸಿದ್ದು, ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ಹೊರಡಿಸಿದೆ.

ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆ ಮಾಡುವ ಪ್ರಕರಣಗಳಲ್ಲಿ ಪೊಲೀಸರು ತಪಾಸಣೆ ಮಾಡುವುದನ್ನು ವಿಡಿಯೋ ಚಿತ್ರೀಕರಣ ಮಾಡಬೇಕಾಗುತ್ತದೆ ಮತ್ತು ಸಂಚಾರ ಪೊಲೀಸರು ಆರೋಪಿಯಿಂದ ದಂಡದ ಮೊತ್ತ ಸಂಗ್ರಹಿಸಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೆಲ್ಮೆಟ್ ಧರಿಸದೇ ಇರುವುದಕ್ಕೆ ಫೈನ್ ಕಟ್ಟಲು ನಿರಾಕರಿಸಿದ ಮತ್ತು ಸರ್ಕಾರೀ ಅಧಿಕಾರಿಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದ ಆರೋಪ ಸಂಬಂಧ ತಮ್ಮ ವಿರುದ್ಧದ ದೋಷಾರೋಪ ಪಟ್ಟಿ ರದ್ದು, ಮಾಡುವಂತೆ ಕೋರಿ ಕೆ ಆರ್ ಪೇಟೆ  ಪಟ್ಟಣದ ಸುಭಾಷ್ ನಗರದ ನಿವಾಸಿ ಕೆ ಟಿ ನಟರಾಜು ಅರ್ಜಿ ಸಲ್ಲಿಸಿದ್ದರು.

ಇನ್ನು ಹೈಕೋರ್ಟ್ ನೀಡಿದ್ದ ತೀರ್ಪು ಉಲ್ಲೇಖಿಸಿದ ನ್ಯಾಯಪೀಠ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆ ಪ್ರಕಾರ, ದಂಡದ ಮೊತ್ತವನ್ನು ನಿರ್ಧರಿಸಲು ನ್ಯಾಯಾಲಯಕ್ಕೆ ಮಾತ್ರ ಅಧಿಕಾರವಿದೆ. ಯಾವುದೇ ಪರಿಸ್ಥಿತಿಯಲ್ಲೂ ಸಂಚಾರ ಪೊಲೀಸರು ಆರೋಪಿಯಿಂದ ದಂಡ ಸಂಗ್ರಹಿಸಲು ಸಾಧ್ಯವಿಲ್ಲ.

ವಾಹನ ತಪಾಸಣಾ ಚಟುವಟಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಬೇಕು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆಗೆ ಮುಂದಾದರೆ ವ್ಯಕ್ತಿಯನ್ನು ತಡೆಯಬೇಕು. ಸ್ಥಳಕ್ಕೆ ಠಾಣೆಯ ಪೊಲೀಸರನ್ನು ಕರೆಸಿ ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಸ್ಪಷ್ಟನೆ ನೀಡಿದ್ದಾರೆ. ಒಂದು ವೇಳೆ ದಂಡ ಪಾವತಿಸದಿದ್ದರೆ ವಾಹನವನ್ನು ಜಪ್ತಿ ಮಾಡುವ ಅಧಿಕಾರ ಪೊಲೀಸರಿಗೆ ಇಲ್ಲ. 

ಪ್ರಕರಣದಲ್ಲಿ ಪೊಲೀಸರೇ ಠಾಣೆಯಲ್ಲಿ ಬೈಕ್  ನಿಲ್ಲಿಸಲು ಅರ್ಜಿದಾರರಿಗೆ ಬಲವಂತಪಡಿಸಿದ್ದಾರೆ. ಇನ್ನು ಕೋರ್ಟ್ ಅನುಮತಿ ಪಡೆಯದೆ ಅರ್ಜಿದಾರನಿಗೆ ಕೋಳ ಹಾಕಿ ಬಂಧಿಸಿದ್ದಾರೆ. ಎಂದು ನಟರಾಜ್ ಪರ ವಕೀಲ ಸಿ.ಎನ್ ರಾಜು ವಾದ ಮಂಡಿಸಿ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.