ಮದುವೆಯಾಗಲು ನಿರ್ಧರಿಸಿದ ವೈಷ್ಣವಿ ಗೌಡ, ಇನ್ನು ಸುಮ್ಮನಿದ್ದರೆ ಗಂಡು ಸಿಗಲ್ಲ ಎಂದ ಪೋಷಕರು
Feb 28, 2025, 15:47 IST
|

ದೇವಿ, ಅಗ್ನಿಸಾಕ್ಷಿ, ಸೀತಾರಾಮ ಧಾರವಾಹಿಗಳ ಮೂಲಕ ಕನ್ನಡಿಗರ ಮನಗೆದ್ದ ನಟಿ ವೈಷ್ಣವಿ ಗೌಡ ಅವರ ಮದುವೆ, ಲವ್ ಸ್ಟೋರಿ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಆಗಾಗ ಹರಿದಾಡುತ್ತವೆ. ಇನ್ನು ಮತ್ತೊಬ್ಬ ನಟ ಹಾಗೂ ಮಾಡೆಲ್ ಗಗನ್ ಚಿನ್ನಪ್ಪ ಅವರ ಕ್ರಶ್ ಯಾರು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಸದ್ಯ ಈ ಇಬ್ಬರು ನಟರು ಒಂದೇ ಧಾರವಾಹಿಯಲ್ಲಿ ನಟಿಸುತ್ತಿದ್ದು, ಇಬ್ಬರು ಮದುವೆಯಾಗುತ್ತಿದ್ದಾರೆ ಎಂಬ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈಷ್ಣವಿ ಗೌಡ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ್ಗೆ ಫೋಟೊ, ವೀಡಿಯೋ ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಗ್ಲಿ ರಮ್ಮಿ ಜಾಹೀರಾತು ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದರು. ರಮ್ಮಿ ಗೇಮ್ ಜೂಜಿಗೆ ಜನರನ್ನು ಪ್ರೇರೇಪಿಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಸುಖಾಸುಮ್ಮನೆ ಟ್ರೋಲ್ ಮಾಡುತ್ತಾರೆ ಎಂದು ಯಾರು ಕಾಮೆಂಟ್ ಹಾಕದಂತೆ ಮಾಡಿದ್ದರು.
ಇತ್ತೀಚೆಗೆ ವೈಷ್ಣವಿ ಗೌಡ ಕುಂಭಮೇಳದಲ್ಲಿ ಭಾಗಿ ಆಗಿದ್ದಾರೆ. ಪ್ರಯಾಗ್‌ರಾಜ್ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಭಗವಂತನ ಕೃಪೆಗೆ ಪಾತ್ರರಾಗಿದ್ದಾರೆ. ಬಹಳ ತಡವಾಗಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಹ ಅಲ್ಲಿಯೇ ಆಚರಿಸಿಕೊಂಡಿರುವುದಾಗಿ ವೈಷ್ಣವಿ ಪೋಸ್ಟ್ ಮಾಡಿ ತಿಳಿಸಿದ್ದಾರೆ.
ಇನ್ನು ಮದುವೆ ಬಗ್ಗೆ ಮಾತಾಡಿದ ವೈಷ್ಣವಿ ನನಗೆ ಸಂಬಂಧದ ಬಗ್ಗೆ ನಂಬಿಕೆ ಇದೆ. ಮುಂದೊಂದು ದಿನ ನನಗೂ ಮದುವೆಯಾಗಿ ಕುಟುಂಬ ಇರುತ್ತದೆ ಎಂದು ನಂಬಿದ್ದೇನೆ. ಆ ರೀತಿ ಘಟನೆಗಳು ನನ್ನ ನಂಬಿಕೆಯನ್ನು ಮುರಿಯೋದಿಲ್ಲ. ಆದರೆ ಮನಸ್ಸಿಗೆ ಇಷ್ಟವಾದ ಹುಡುಗ ಸಿಗಬೇಕು.ಮನೆಯವರು ಒಪ್ಪಬೇಕು ಎಂದು ನಟಿ ವೈಷ್ಣವಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.