ವೀರೇಂದ್ರ ಹೆಗ್ಗಡೆ ಅವರ ಒಳ್ಳೆಯ ಕೆಲಸಕ್ಕೆ ಮತ್ತೊಂದು ಪ್ರಶಸ್ತಿ ಪಟ್ಟ, ಮೆಚ್ಚಿಕೊಂಡ ಕರುನಾಡು

 | 
ರರ

ಸೌಜನ್ಯಾ ಪ್ರಕರಣದಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ 
ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಅಭಿಮಾನಿಗಳು ಸಂತೋಷಪಡುವ ಸುದ್ಧಿ ಇದಾಗಿದ್ದು ಭಾರತೀಯ ಆರ್ಥಿಕ ವೇದಿಕೆ ನೀಡುವ ಪ್ರತಿಷ್ಠಿತ ಚಾಂಪಿಯನ್ಸ್‌ ಆಫ್‌ ಚೇಂಜ್‌ ಕರ್ನಾಟಕ ಪ್ರಶಸ್ತಿಗೆ ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಹಿರಿಯ ವಿಜ್ಞಾನಿ ಡಾ.ಸಿಎನ್‌ಆರ್‌ ರಾವ್‌, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸೇರಿದಂತೆ 11 ಮಂದಿ ಭಾಜನರಾಗಿದ್ದಾರೆ.

ಬೆಂಗಳೂರಿನ ಮಾರತ್‌ಹಳ್ಳಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ ಚಾಂದ್‌ ಗೆಹ್ಲೋಟ್‌, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್‌ ಮುಖ್ಯ ಅಥಿತಿಯಾಗಿ ಭಾಗಿಯಾಗಿದ್ದರು. ಈ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂಲಕ ಸಮಾಜದ ಅಮೂಲಾಗ್ರ ಬದಲಾವಣೆಗೆ ಡಾ.ವೀರೇಂದ್ರ ಹೆಗ್ಗಡೆ ಕಾರಣೀಭೂತರಾಗಿದ್ದಾರೆ. ಇನ್ನು ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿರುವ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು, ಪ್ರತಿಷ್ಠಿತ ಚಾಂಪಿಯನ್ ಆಫ್ ಚೇಂಜ್ ಕರ್ನಾಟಕ 2023 ಪ್ರಶಸ್ತಿಯನ್ನು ಸ್ವೀಕರಿಸಲು ಸಂತೋಷವಾಗುತ್ತಿದೆ. 

ಸಮುದಾಯ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ನನ್ನೊಂದಿಗೆ ದಣಿವರಿಯಿಲ್ಲದೆ ಶ್ರಮಿಸಿದ ನನ್ನ ಸಮರ್ಪಿತ ಕಾರ್ಯಕರ್ತರೊಂದಿಗೆ ನಾನು ಈ ಗೌರವವನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.