ಬಿಗ್ ಬಾಸ್ ಮನೆಯ ಈ ಒಂದು ಸ್ಪರ್ಧಿಗೆ 72 ಸಾವಿರ ಮತ ನೀಡಿದ ವೀಕ್ಷಕರು, ಸುದೀಪ್ ಕೂಡ ದಿಗ್ಬ್ರಮೆ

ಕಿರುತರೆಯಲ್ಲಿ ಬಹುದೊಡ್ಡ ಷೋ ಬಿಗ್ ಬಾಸ್ ಕನ್ನಡ ಸೀಸನ್ 10 ದಿನ ಕಳೆದಂತೆ ಹೆಚ್ಚು ಇಂಟರೆಸ್ಟಿಂಗ್ ಆಗುತ್ತಿದೆ. ಕಠಿಣ ಸ್ಪರ್ಧೆ ಶುರುವಾಗುತ್ತಿದೆ. ತೀವ್ರ ಪೈಪೋಟಿಯ ನಡುವೆ ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿ ಬಗ್ಗೆ ಕಿಚ್ಚ ಸುದೀಪ್ ವೀಕೆಂಡ್ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಜನರು ಚರ್ಚೆ ಶುರು ಮಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ವಾರ ಮನೆಯಲ್ಲಿ ಸ್ಪರ್ಧಿಗಳ ನಡುವೆಯೂ ಮಾತುಕತೆ ನಡೆದಿತ್ತು. ಮನೆಯ ಸ್ಪರ್ಧಿಗಳು ಯಾರ ಆಟಕ್ಕೆ ವಿರಾಮ ನೀಡಲು ಬಯಸುವಿರಿ ಎಂದು ಬಿಗ್ ಬಾಸ್ ಕೇಳಿದ್ದರು. ಅವರ ಹೆಸರನ್ನು ಸೂಕ್ತ ಕಾರಣಗಳೊಂದಿಗೆ ಹೇಳ ಬೇಕಿತ್ತು. ಈ ವೇಳೆ ಮನೆಯ ಬಹುತೇಕ ಜನರು ವರ್ತೂರ್ ಸಂತೋಷ್ ಅವರ ಹೆಸರನ್ನೇ ಹೇಳಿದರು.
ನಾನು ಹೇಗೆ ಆಟವಾಡಿದರು ಜನ ವೋಟ್ ಮಾಡುತ್ತಾರೆ, ಜನ ನನ್ನನ್ನು ಗೆಲ್ಲಿಸ್ತಾರೆ ಎಂಬ ಭ್ರಮೆಯಲ್ಲಿ ಇದ್ದೀರಿ ಅಂತ ಅನಿಸುತ್ತಿದೆ ಎಂದು ಸುದೀಪ್ ಹೇಳಿದರು. ಇದೇ ವೇಳೆ ಅತಿ ಹೆಚ್ಚು ವೋಟ್ ಯಾರು ಪಡೆದಿದ್ದಾರೆ ಎಂಬ ವಿಚಾರವನ್ನು ಸಹ ರಿವೀಲ್ ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಯೊಬ್ಬರು 72.83 ಲಕ್ಷ ಮತಗಳನ್ನು ತೆಗೆದುಕೊಂಡು ಸೇವ್ ಆಗಿದ್ದಾರೆ. ಆದರೆ ಈ ಮತಗಳು ಬಂದಿರುವುದು ನಿಮಗೆ ಅಲ್ಲ ಎಂದರು.
ಈ ಬಾರಿ ಮೊದಲು ತುಕಾಲಿ ಸಂತೋಷ್, ಆ ನಂತರ ವಿನಯ್ ಸೇವ್ ಆಗಿದ್ದಾರೆ. ಇವರ ಜೊತೆ ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಸಿರಿ, ಮೈಕೆಲ್, ತನಿಷಾ ಕೂಡ ನಾಮಿನೇಟ್ ಆಗಿದ್ದಾರೆ. ಅನೇಕರ ಅಂದಾಜಿನ ಪ್ರಕಾರ 72.83 ಲಕ್ಷ ಮತ ಪಡೆದ ಸ್ಪರ್ಧಿ ಸಂಗೀತಾ ಶೃಂಗೇರಿ ಎನ್ನಲಾಗುತ್ತಿದೆ.
ಇವರೇ ಸದ್ಯದ ಟಾಪ್ 1 ಕಂಟೆಸ್ಟಂಟ್ ಎಂದು ಹಲವರು ಊಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಬಿಗ್ ಬಾಸ್ ತಂಡವಾಗಲಿ, ಸುದೀಪ್ ಆಗಲಿ ಯಾರ ಹೆಸರನ್ನು ಬಹಿರಂಗ ಪಡಿಸಿಲ್ಲ. ಹೀಗಾಗಿ ಈ ಸ್ಪರ್ಧಿ ಯಾರೆಂಬ ಕುತೂಹಲ ಹೆಚ್ಚಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.