ಪತ್ನಿ ನೆನಪು ಮರೆಯೋಕೆ ಆಗ್ತಾ ಇಲ್ಲ, ವಿಜಯ್ ರಾಘವೇಂದ್ರ ಮತ್ತೆ ಕಣ್ಣೀರು
Mar 3, 2025, 07:42 IST
|

ಈಗ ಮತ್ತೊಂದು ಪೋಸ್ಟ್ ಹಾಕಿ, ಕವನದ ಮೂಲಕ ಪ್ರೀತಿ ವ್ಯಕ್ತಪಡಿಸಿರುವ ಅವರು, ಬಳಕೆದಾರರನ್ನು ಭಾವುಕಗೊಳಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಜಯ್ ರಾಘವೇಂದ್ರ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಅದ್ರಲ್ಲಿ ಸ್ಪಂದನ ತುಂಬಾ ಸುಂದರವಾಗಿ ಕಾಣ್ತಾರೆ. ಅವರಿಗೆ ವಿಜಯ್ ರಾಘವೇಂದ್ರ ಮುತ್ತಿಡ್ತಿದ್ದಾರೆ. ಫೋಟೋ ಮೇಲೆ ಐ ಲವ್ ಯು ಎಂದು ಬರೆಯಲಾಗಿದೆ.
ಫೋಟೋಗೆ ಕವನದ ಶೀರ್ಷಿಕೆ ಹಾಕಿದ್ದಾರೆ ವಿಜಯ್ ರಾಘವೇಂದ್ರ. ಸಮಯ ಜಾರಿದರೂ ನೆನಪು ನಿಲ್ಲದು, ನೆನಪು ನಗಿಸಿದರೂ ನೋವು ಮಾಸದು, ನಿನ್ನ ನಗುವಿನ ಬೆಳಕು ಎಂದೂ ಆರದು. because it’s ONLY YOU Chinna ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋ ಹಾಗೂ ಕವನ ನೋಡಿದ ಫ್ಯಾನ್ಸ್ ಮತ್ತೆ ಭಾವುಕರಾಗಿದ್ದಾರೆ. ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಜೊತೆಗಿರುವ ಜೀವ ಎಂದಿಗೂ ಜೀವಂತ, ಎಂದೆಂದೂ ಮರೆಯಲಾಗದ ಜೋಡಿ ನೀವು, ಸ್ಪಂದನ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ, ನಿಮಗೆ ದೇವರು ಶಕ್ತಿ ನೀಡಲಿ ಎಂದು ಫ್ಯಾನ್ಸ್ ವಿಜಯ್ ರಾಘವೇಂದ್ರ ಅವರಿಗೆ ಧೈರ್ಯ ತುಂಬಿದ್ದಾರೆ.
ಸ್ಪಂದನಾರನ್ನ ಕಳೆದುಕೊಳ್ಳುವ ಮುಂಚೆಯೂ ನಾನು ಸಿನಿಮಾಗಳನ್ನು ಮಾಡುತ್ತಿದ್ದೆ, ಈಗಲೂ ಸಿನಿಮಾಗಳನ್ನು ಮಾಡುತ್ತಿದ್ದೇನೆ. ನಾನು ಸದಾ ಸಿನಿಮಾಗಳನ್ನು ಮಾಡುತ್ತಿರಬೇಕು ಎನ್ನುವುದು ಸ್ಪಂದನಾ ಆಸೆ ಎಂದು ವಿಜಯ್ ಹೇಳಿದ್ದಾರೆ. ಪತ್ನಿ ಇಲ್ಲದ ನೋವನ್ನು ಮರೆಯಲು ಸಿನಿಮಾಗಳನ್ನು ಮಾಡುತ್ತಿದ್ದೇನೆ ಎನ್ನುವುದೂ ನಿಜ. ಹಾಗೆಯೇ ಸಿನಿಮಾ ಎನ್ನುವುದು ನೋವನ್ನು ಮರೆಯಲು ಮಾಡುವ ಕೆಲಸವೂ ಅಲ್ಲ. ಆ ನೋವು ಎಂದಿಗೂ ಮರೆಯುವಂತದ್ದಲ್ಲ. ಅದನ್ನು ಜೊತೆಯಲ್ಲೇ ಇಟ್ಟುಕೊಂಡು ಈ ರೀತಿ ಕಾಣುತ್ತಿದ್ದೇನೆ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. ನಾನು ಸಿನಿಮಾ ಹಾಗೂ ಕಿರುತೆರೆಯಲ್ಲಿ ನನಗೆ ಇಷ್ಟವಾದ ಕೆಲಸಗಳನ್ನು ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025