'ವಿನಯ್ ನೀನು ಮನುಷ್ಯನೇ ಅಲ್ಲ' ಬಿಗ್ ಬಾಸ್ ಮನೆಯಲ್ಲಿ ನಟಿ ಶ್ರುತಿ ಗರಂ

 | 
ಕ್

ಬಿಗ್ಬಾಸ್ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ವಾರಾಂತ್ಯದ ಕಿಚ್ಚನ ಪಂಚಾಯ್ತಿಗೂ ಮೊದಲೇ ಮನೆಯ ಸದಸ್ಯರಿಗೆ ಅಚ್ಚರಿಯೊಂದನ್ನು ಬಿಗ್‌ಬಾಸ್‌ ನೀಡಿದ್ದಾರೆ. ಬೆಳಿಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಹಿರಿಯ ನಟಿ, ಬಿಗ್‌ಬಾಸ್‌ ಆವೃತ್ತಿ 3ರ ವಿಜೇತೆ ಶ್ರುತಿ ಅವರು ಮನೆಗೆ ಆಗಮಿಸಿದ್ದಾರೆ.

ಶ್ರುತಿ ಅವರನ್ನು ನೋಡುತ್ತಿದ್ದ ಹಾಗೆಯೇ ಮನೆಯ ಸದಸ್ಯರೆಲ್ಲರೂ ಖುಷಿಯಿಂದ ಕುಣಿದಾಡಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವಾಗಲೇ, ಮನೆಯಲ್ಲಿ ನ್ಯಾಯ ಪಂಚಾಯಿತಿ ಪ್ರಾರಂಭಗೊಂಡಿದೆ. ಶ್ರುತಿ ಅವರು ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತಿದ್ದು, ಮನೆಯ ಸ್ಪರ್ಧಿಗಳು ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ.

ಮನೆಯ ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಶ್ರುತಿ ಅವರು ವಿಚಾರಣೆ ಪ್ರಾರಂಭಿಸಿದ್ದು, ವಿನಯ್‌ ಅವರು ವಾರಾಂತ್ಯದಲ್ಲಿ ಸುದೀಪ್‌ ಅವರ ಎದುರಿಗೆ ಒಂದು ರೀತಿ ಇರುತ್ತಾರೆ. ವಾರವಿಡೀ ಮನೆಯ ಸದಸ್ಯರ ಜೊತೆಗೆ ಇನ್ನೊಂದು ರೀತಿ ಇರುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸಂಗೀತಾ ಹೌದು ಎಂದು ಉತ್ತರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಚ್ಚರಿ ಎನ್ನುವಂತೆ ಇಷ್ಟು ದಿನಗಳ ಕಾಲ ವಿನಯ್‌ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ನಮ್ರತಾ ಕೂಡ, ನನಗೂ ಹಾಗೇ ಅನಿಸುತ್ತದೆ. 

ಸುದೀಪ್‌ ಸರ್‌ ಎದುರಿಗೆ ವಿನಯ್‌ ಅವರು ಧ್ವನಿ ತಗ್ಗಿಸಿ ಮಾತಾಡುತ್ತಾರೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿನಯ್‌, ಇವರ ಹತ್ತಿರ ಎಲ್ಲ ನಾಟಕ ಮಾಡಿಕೊಂಡು ನನಗೆ ಏನೂ ಆಗಬೇಕಾಗಿಲ್ಲ ಎಂದಿದ್ದಾರೆ. ಇದಕ್ಕೆ, ನ್ಯಾಯಾಧೀಶರ ಬಳಿಯೇ ಧ್ವನಿ ಎತ್ತರಿಸಿ ಮಾತಾಡ್ತೀರಾ ಎಂದು ನಟಿ ಶ್ರುತಿ ಅಸಮಾಧಾನ ಹೊರಹಾಕಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ಸೃಷ್ಟಿಯಾಗಿರುವ ಈ ನ್ಯಾಯಾಲಯದಲ್ಲಿ ಯಾರು ತಪ್ಪಿತಸ್ಥರಾಗುತ್ತಾರೆ, ಯಾರು ಬಿಡುಗಡೆಯಾಗುತ್ತಾರೆ, ಯಾರಿಗೆ ಜಾಮೀನು, ಯಾರಿಗೆ ಜೈಲು. ಕೊನೆಯಲ್ಲಿ ಈ ವಾರ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಈ ಎಲ್ಲ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.